Advertisement

ಕೋವಿಡ್: ರಾಜ್ಯದಲ್ಲಿಂದು 3015  ಸೋಂಕಿತರು ಗುಣಮುಖ; 1291ಹೊಸ ಪ್ರಕರಣ ಪತ್ತೆ

07:27 PM Jul 19, 2021 | Team Udayavani |

ಬೆಂಗಳೂರು :  ರಾಜ್ಯದಲ್ಲಿಂದು ಹೊಸದಾಗಿ 1291 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಹಾಗೂ 40 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು ಎಂದಿನಂತೆ ಇಂದೂ ಕೂಡ ಗುಣಮುಖರ ಸಂಖ್ಯೆ ಹೆಚ್ಚಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 3015 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :

ಬಾಗಲಕೋಟೆ -1, ಬಳ್ಳಾರಿ-3, ಬೆಳಗಾವಿ-38, ಬೆಂಗಳೂರು ಗ್ರಾಮಾಂತರ-34, ಬೆಂಗಳೂರು ನಗರ-266, ಬೀದರ್-1, ಚಾಮರಾಜನಗರ-27, ಚಿಕ್ಕಬಳ್ಳಾಪುರ-9, ಚಿಕ್ಕಮಗಳೂರು-100, ಚಿತ್ರದುರ್ಗ-14, ದಕ್ಷಿಣ ಕನ್ನಡ-126,ದಾವಣಗೆರೆ-8, ಧಾರವಾಡ-13, ಗದಗ-1, ಹಾಸನ-125, ಹಾವೇರಿ-1, ಕಲಬುರಗಿ-8, ಕೊಡಗು-60, ಕೋಲಾರ-25, ಕೊಪ್ಪಳ-0, ಮಂಡ್ಯ-42, ಮೈಸೂರು-125, ರಾಯಚೂರು-6, ರಾಮನಗರ-5, ಶಿವಮೊಗ್ಗ-51, ತುಮಕೂರು-70, ಉಡುಪಿ-85, ಉತ್ತರ ಕನ್ನಡ-38, ವಿಜಯಪುರ-7, ಯಾದಗಿರಿ-2.

Advertisement

Udayavani is now on Telegram. Click here to join our channel and stay updated with the latest news.

Next