Advertisement

ಸುರಪುರ ಕ್ಷೇತ್ರಕ್ಕೆ 1280 ಮನೆ ಮಂಜೂರು

10:50 PM Jan 08, 2022 | Team Udayavani |

ಸುರಪುರ: ವಸತಿ ಯೋಜನೆ ಅಡಿ ಮತಕ್ಷೇತ್ರಕ್ಕೆ 1,280 ಮನೆಗಳು ಮಂಜೂರಿಯಾಗಿವೆ. ಕ್ಷೇತ್ರದ ಪ್ರತಿ ಗ್ರಾಮ ಪಂಚಾಯತಗಳಲ್ಲಿ ಜ. 10ರಂದು ಮನೆ ಹಂಚಿಕೆಗಾಗಿ ಅರ್ಜಿಸ್ವೀಕರಿಸಲಾಗುತ್ತದೆ. ಅರ್ಹ ಫಲಾನುಭವಿಗಳು ಸರ್ಜಿ ಸಲ್ಲಿಸಬೇಕು ಎಂದು ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷ ಶಾಸಕ ರಾಜುಗೌಡ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸುರಪುರ ತಾಲೂಕಿನ 14 ಗ್ರಾಪಂಗಳಿಗೆ 540 ಹುಣಸಗಿಯ 18 ಗ್ರಾಪಂ 740 ಸೇರಿ ಒಟ್ಟು 1280 ಮನೆಗಳು ಮಂಜೂರಿಯಾಗಿವೆ. ಈ ಪೈಕಿ ಪರಿಶಿಷ್ಟರಿಗೆ ಶೇ. 17.15, ಪರಿಶಿಷ್ಟ ಪಂಗಡಕ್ಕೆ ಶೇ. 7, ಅಲ್ಪಸಂಖ್ಯಾತರಿಗೆ ಶೇ. 10 ಮತ್ತು ಹಿಂದುಳಿದ ಹಾಗೂ ಸಾಮಾನ್ಯ ವರ್ಗಕ್ಕೆ ಶೇ. 65 ರಷ್ಟು ಮೀಸಲಾತಿ ಕಲ್ಪಿಸಿ ಸರಕಾರ ಆದೇಶಿಸಿದೆ ಪ್ರತಿ ಪಂಚಾಯತಗಳಲ್ಲಿ ಅರ್ಜಿ ಸ್ವೀಕರಿಸಿ ನಂತರ ಗ್ರಾಮ ಸಭೆ ನಡೆಯಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತಿದೆ.

ಪಿಡಿಒ ಮತ್ತು ಕಾರ್ಯದರ್ಶಿಗಳು ನಿರ್ಲಕ್ಷÂ ವಹಿಸದೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿ ನಡೆಸಬೇಕು. ಆರೋಪಗಳಿಗೆ ಆಸ್ಪದ ಕೊಡದೆ ನಿಜವಾಗಿ ಮನೆ ಇಲ್ಲದ್ದ ಬಡವರನ್ನು ಗುರುತಿಸಿ ಯೋಜನೆ ಯಶಸ್ವಿಗೆ ಶ್ರಮಿಸಬೇಕು ಎಂದು ತಿಳಿಸಿದ್ದಾರೆ. ಅಂಗವಿಕಲರು, ನಿರ್ಗತಿಕರು, ಬೆಂಕಿ ತಗುಲಿ ಮನೆ ಕಳೆದುಕೊಂಡಿದ್ದರೆ ಅವರು ಕೂಡಾ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಭಾವಚಿತ್ರದೊಂದಿಗೆ ಅರ್ಜಿಯನ್ನು ನನ್ನ ವಾಟ್ಸ್‌ಆ್ಯಪ್‌ ಕಳುಹಿಸಬೇಕು. ಪರಿಶೀಲಿಸಿ ಅವರಿಗೂ ಮನೆ ಒದಗಿಸಿಕೊಡುವ ವ್ಯವಸ್ಥೆ ಮಾಡುವುದಾಗಿ ಹೇಳಿದರು

 

Advertisement

Udayavani is now on Telegram. Click here to join our channel and stay updated with the latest news.

Next