Advertisement

ಸರ್ದಾರ್‌ ಪಟೇಲ್‌ ಪ್ರತಿಮೆ ವೀಕ್ಷಿಸಿದವರು 1.28 ಲಕ್ಷ

08:25 AM Nov 12, 2018 | Karthik A |

ವಡೋದರಾ: ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಿರ್ಮಾಣಗೊಂಡಿರುವ ಸರ್ದಾರ್‌ ವಲ್ಲಭ ಭಾಯ್‌ ಪಟೇಲ್‌ ಅವರ ಪ್ರತಿಮೆಯನ್ನು ಭಾನುವಾರದವರೆಗೆ 1.28 ಲಕ್ಷ ಮಂದಿ ಪ್ರವಾಸಿಗರು ವೀಕ್ಷಿಸಿದ್ದಾರೆ. ಅ.31ರಂದು 182 ಮೀಟರ್‌ ಎತ್ತರದ ವಿಶ್ವದ ಅತ್ಯಂತ ದೊಡ್ಡ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ನ.1ರಿಂದ ಅದು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿತ್ತು. ನ.10 ಮತ್ತು ನ.11 (ಶನಿವಾರ ಮತ್ತು ಭಾನುವಾರ)ರಂದು ಸುಮಾರು 50 ಸಾವಿರ ಮಂದಿ ಭೇಟಿ ನೀಡಿದ್ದಾರೆ. ನ.1ರ ಪ್ರವಾಸಿಗರ ಲೆಕ್ಕ ತೆಗೆದುಕೊಂಡರೆ ಒಟ್ಟು 1.28 ಲಕ್ಷ ಮಂದಿ ಭೇಟಿ ನೀಡಿದ್ದಾರೆ ಎಂದು ಸರ್ದಾರ್‌ ಸರೋವರ ನರ್ಮದಾ ನಿಗಮ್‌ ಲಿಮಿಟೆಡ್‌ (ಎಸ್‌ಎಸ್‌ಎನ್‌ಎಲ್‌) ಸೂಪರಿಟೆಂಡಿಂಗ್‌ ಎಂಜಿನಿಯರ್‌ ಆರ್‌.ಜಿ. ಕೌನ್‌ಗೋ ತಿಳಿಸಿದ್ದಾರೆ.

Advertisement

ಭಾನುವಾರ 24 ಸಾವಿರ, ಶನಿವಾರ 27 ಸಾವಿರ ಮಂದಿ ಭೇಟಿ ನೀಡಿದ್ದಾರೆ ಎಂದು ಕೌನ್‌ಗೋ ತಿಳಿಸಿದ್ದಾರೆ. ಇದೇ ವೇಳೆ  ಗುಜರಾತ್‌ ಪ್ರವಾಸೋದ್ಯಮ ಖಾತೆ ಪ್ರಧಾನ ಕಾರ್ಯದರ್ಶಿ ಎಸ್‌.ಜೆ.ಹೈದರ್‌ ಮಾತನಾಡಿ ಮೊದಲ ದಿನ 10 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next