ನಿರ್ಮಾಣ: ಫಾಕ್ಸ್ ಸರ್ಚ್‌ಲೈಟ್
Advertisement
ಇದು ರಜೆಯಲ್ಲಿ ಹಾಗೇ ಏಕಾಂಗಿಯಾಗಿ ಅಂಡಲೆಯುವ ಉದ್ದೇಶದಿಂದ ಹೋದ ಟೆಕ್ಕಿಯೊಬ್ಬ ಸಿಲುಕುವ ಅಪಾಯಕಾರಿ ಪ್ರಸಂಗ ಹಾಗೂ ಅದರಿಂದ ಹೊರಬರಲು ಆತ ಪಡುವ ಸಂಕಷ್ಟಗಳ ಸಂಕಲನವೇ “127 ಹವರ್ಸ್’ ಚಿತ್ರ. ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಅಟಾØ ಪರ್ವತ ಶ್ರೇಣಿಗಳ ಪ್ರಾಂತ್ಯಕ್ಕೆ 2003ರಲ್ಲಿ ಏಕಾಂಗಿಯಾಗಿ ತೆರಳಿದ್ದ ಮೆಕಾನಿಕಲ್ ಎಂಜಿನಿಯರ್ ಆರೋನ್ ರಾಲ್ಸ್‌ಟನ್, ಅಲ್ಲಿನ “ಬ್ಲೂé ಜಾನ್ ಕ್ಯಾನನ್’ ಎಂಬ ದುರ್ಗಮ ಕಣಿವೆಯೊಳಗೆ ಬಂಡೆಗಳ ಮೂಲಕ ಇಳಿಯುವಾಗ ಜಾರಿ ಬಿದ್ದು ಸಿಲುಕಿಕೊಂಡಿದ್ದ. ಕಲ್ಲುಗಳು ಉರುಳಿ ಆತನ ಬಲಗೈ ಜಜ್ಜಿಹೋಗಿತ್ತು. ಇದೇ ತ್ರಿಶಂಕು ಸ್ಥಿತಿಯಲ್ಲಿ ಆತ 127 ಗಂಟೆಗಳ ಕಾಲ ಸಿಲುಕಿ, ಒದ್ದಾಡಿದ್ದ. ಅಲ್ಲಿ ಆತ ಅನುಭವಿಸಿದ ನರಕ ಯಾತನೆಗಳನ್ನೇ ಆಧರಿಸಿ 2004ರಲ್ಲಿ “ಬಿಟ್ವೀನ್ ಎ ರಾಕ್ ಆ್ಯಂಡ್ ಹಾರ್ಡ್ ಪ್ಲೇಸ್’ ಎಂಬ ಕಾದಂಬರಿಯೊಂದು ಪ್ರಕಟವಾಗಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು “127 ಹವರ್ಸ್’ ಎಂಬ ಚಿತ್ರ ನಿರ್ಮಾಣ ಮಾಡಲಾಗಿತ್ತು. ಚಿತ್ರಕ್ಕೆ ಭಾರತದ ಎ.ಆರ್. ರಹಮಾನ್ ಸಂಗೀತ ನೀಡಿರುವುದು ವಿಶೇಷ. ಇಡೀ ಚಿತ್ರ, ಮಾನವನ ಅಂಡಲೆಯುವ ಹವ್ಯಾಸಕ್ಕೆ ಮುಂಜಾಗ್ರತೆ ಎಂಬ ಮುನ್ನೆಚ್ಚರಿಕೆ ಎಷ್ಟರ ಮಟ್ಟಿಗೆ ಅಗತ್ಯ ಎಂಬುದನ್ನು ತಿಳಿಸಿ ಹೇಳುತ್ತದೆ.