ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 1220 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ತಗಲಿದ್ದು, 19 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇಂದು (ಸೆ.3) ಸಂಜೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.
ವರದಿಗಳ ಪ್ರಕಾರ 1175 ಜನ ಸೋಂಕಿತರು ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇವತ್ತು 1,79,227 ಪರೀಕ್ಷೆ ನಡೆಸಲಾಗಿದ್ದು, ಪಾಸಿಟಿವಿಟಿ ದರ ಶೇಕಡ 0.68 ರಷ್ಟು ಇದೆ. 18,404 ಸಕ್ರಿಯ ಪ್ರಕರಣಗಳು ಇವೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 319 ಜನರಿಗೆ ಸೋಂಕು ತಗುಲಿದ್ದು, 8 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 202 ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 7718 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಪ್ರಕರಣಗಳ ಸಂಖ‍್ಯೆ :
ಬಾಗಲಕೋಟೆ-1, ಬಳ್ಳಾರಿ-8, ಬೆಳಗಾವಿ-24, ಬೆಂಗಳೂರು ಗ್ರಾಮಾಂತರ-19, ಬೆಂಗಳೂರು ನಗರ-319, ಬೀದರ್-0, ಚಾಮರಾಜನಗರ-5, ಚಿಕ್ಕಬಳ್ಳಾಪುರ-3, ಚಿಕ್ಕಮಗಳೂರು-34, ಚಿತ್ರದುರ್ಗ-12, ದಕ್ಷಿಣ ಕನ್ನಡ-232, ದಾವಣಗೆರೆ-8, ಧಾರವಾಡ-9, ಗದಗ-4, ಹಾಸನ-81, ಹಾವೇರಿ-3, ಕಲಬುರಗಿ-3, ಕೊಡಗು-64, ಕೋಲಾರ-9, ಕೊಪ್ಪಳ-2, ಮಂಡ್ಯ-20, ಮೈಸೂರು-86, ರಾಯಚೂರು-0, ರಾಮನಗರ-3, ಶಿವಮೊಗ್ಗ-35, ತುಮಕೂರು-51, ಉಡುಪಿ-150, ಉತ್ತರ ಕನ್ನಡ-32, ವಿಜಯಪುರ-0, ಯಾದಗಿರಿ-3.