Advertisement

ಗುದ್ದಲೀಶ್ವರ ಸ್ವಾಮಿಗಳ 120ನೇ ಯಾತ್ರಾ ಮಹೋತ್ಸವ

02:40 PM Jan 06, 2020 | Suhan S |

ಗುತ್ತಲ: ಶ್ರೀ ಗುದ್ದಲೀಶ್ವರ ಸ್ವಾಮಿಗಳವರ 120ನೇ ಯಾತ್ರಾ ಮಹೋತ್ಸವವು ಹೊಸರಿತ್ತಿ ಗ್ರಾಮದಲ್ಲಿ ಜ. 6ರಿಂದ 15ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಲಿವೆ ಎಂದು ಹೊಸರಿತ್ತಿಯ ಪೀಠದ 5ನೇ ಪೀಠಾಧಿಧ್ಯಕ್ಷರಾದ ಗುದ್ದಲೀಶ್ವರ ಮಠದ ಶ್ರೀ ಗುದ್ದಲೀಶ್ವರ ಸ್ವಾಮೀಜಿ ಹೇಳಿದರು.

Advertisement

ಹೊಸರಿತ್ತಿಯ ಗ್ರಾಮದ ಗುದ್ದಲೀಶ್ವರ ಮಠದಲ್ಲಿ ರವಿವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರು ಗದಿಗೆಪ್ಪಜ್ಜಯ್ಯನವರ ಸಾನ್ನಿಧ್ಯದಲ್ಲಿ ಯಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರಗಲಿದ್ದು, ಜ. 6ರಂದು ಬೆಳಗ್ಗೆ 9 ಗಂಟೆಗೆ ಗಂಗಾಪೂಜೆ ನಂತರ ಚೌಡೇಶ್ವರಿ ದೇವಿಗೆ ಮತ್ತು ಮುತ್ತೆ$çದೆಯರಿಗೆ ಉಡಿ ತುಂಬುವ ಕಾರ್ಯಕ್ರಮ. 10ಗಂಟೆಗೆ ದುಂಡಸಿ ವಿರಕ್ತ ಮಠದ ಕುಮಾರ ಸ್ವಾಮೀಜಿ, ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಬಸವರಾಜ ಸ್ವಾಮೀಜಿ, ಲಕ್ಕುಂಡಿ ಅಲ್ಲಮಪ್ರಭು ದೇವರಮಠದ ಸಿದ್ಧಲಿಂಗ ಸ್ವಾಮೀಜಿ, ದೊಡ್ಡಮೇಟೆಕುರ್ಕೆಯ ಶಶಿಧರ ಸ್ವಾಮೀಜಿ ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಹೇಳಿದರು.

ಸಂಜೆ 4 ಗಂಟೆಗೆ ಹೊಸರಿತ್ತಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರ ಸೇವೆಯ ರೊಟ್ಟಿ ಜಾತ್ರಾ ಉತ್ಸವ, ಸಂಜೆ 6 ಗಂಟೆಗೆ ಕಳಸಾರೋಹಣ, ರಾತ್ರಿ 7 ಗಂಟೆಗೆ ನಾಡೋಜ್‌ ಶ್ರೀಮನ್‌ ಮಹಾರಾಜ ನಿರಂಜನ ಪ್ರಣವ ಸ್ವರೂಪಿ ಜಗದ್ಗುರು ಡಾ| ಅನ್ನದಾನೀಶ್ವರ ಸ್ವಾಮೀಜಿ ಅವರಿಂದ ಯಾತ್ರಾ ಮಹೋತ್ಸವ ಉದ್ಘಾಟನೆಯಾಗಲಿದೆ. 8 ಗಂಟೆಗೆ ಮಕ್ಕಳಗೋಷ್ಠಿ ಹಮ್ಮಿಕೊಂಡಿದ್ದು, ಹತ್ತಿಮತ್ತೂರ ನಿಜಗುಣ ಸ್ವಾಮೀಜಿ ನೇತೃತ್ವವಹಿಸಲಿದ್ದಾರೆ. ಸಮ್ಮುಖ ನೆಗಳೂರ ಗುರುಶಾಂತೇಶ್ವರ ಶಿವಾಚಾರ್ಯರು ವಹಿಸುವರು. ಬಾಲ ಪ್ರತಿಭೆಗಳಾದ ಹೊನ್ನಿಕಾ ಸಂಗಮೇಶ ಪರಗಿ, ಆದಿತ್ಯಾ ಜೋಷಿ, ರುಬಿನಾ ಭಾಗವಹಿಸುವವರು.

ಜ. 7ರ ಮಂಗಳವಾರ ಸಂಜೆ 7ಕ್ಕೆ ನಡೆಯಲಿರುವ ಮಹಿಳಾ ಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಂಸಬಾವಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಬೆಳಗಾವಿ ಖಾರದವೀರಬಸವ ಸ್ವಾಮೀಜಿ ಸಮ್ಮುಖ, ದಳವಾಯಿಮಠದ ಶಿವಕುಮಾರ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ, ಹಾವೇರಿ ಹರಸೂರ ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ತಿಪ್ಪಾಯಿಕೊಪ್ಪದ ಮಹಾಂತ ದೇವರು ಸಾನ್ನಿಧ್ಯ ವಹಿಸಲಿದ್ದಾರೆ.

ಜ. 8ರಂದು ರಾತ್ರಿ 7ಕ್ಕೆ ಕೃಷಿ ಗೋಷ್ಠಿ ನೇತೃತ್ವವನ್ನು ಗುತ್ತಲ ಕಲ್ಮಠದ ಗುರುಸಿದ್ಧ ಸ್ವಾಮೀಜಿ, ತಿಪ್ಪಾಯಿಕೊಪ್ಪದ ವಿರುಪಾಕ್ಷ ಸ್ವಾಮೀಜಿ, ಗುಡ್ಡದ ಆನ್ವೇರಿ ವಿರಕ್ತಮಠದ ಶಿವಯೋಗಿಶ್ವರ ಸ್ವಾಮೀಜಿ, ಹಿರೇಸಿಂದೋಗಿ ಸಚ್ಚಿದಾನಂದ ಸ್ವಾಮೀಜಿ, ಸದಾಶಿವಪೇಟೆಯ ಗದಗೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

Advertisement

ಮುಖ್ಯ ಅತಿಥಿಗಳಾಗಿ ಬೆಂಗಳೂರು ಪೊಲೀಸ್‌ ಇಲಾಖೆಯ ಡಿಸಿಪಿ ರವಿ ಡಿ. ಚನ್ನಣ್ಣನವರ, ಡಾ| ಸಿ. ಸೋಮಶೇಖರ ಪಾಲ್ಗೊಳ್ಳಲಿದ್ದಾರೆ. ಜ. 9 ರಂದು ಚನ್ನೂರಿನ ಶ್ರೀಮಠದಲ್ಲಿ ಧ್ವಜಾರೋಹಣ, ಸರ್ವಧರ್ಮ ಸಾಮೂಹಿಕ ವಿವಾಹ, ಮಹಾಗಣಾರಾಧನೆ, ಪುಷ್ಟ ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಜ. 10 ರಂದು ರಕ್ತದಾನ ಶಿಬಿರ, ಮಹಾಗಣಾರಾಧನೆ, ಮಹಾರಥೋತ್ಸವ ಜರುಗಲಿವೆ. ಜ. 11ರಂದು ಮಹಾಗಣಾರಾಧನೆ, ಕಡುಬಿನ ಕಾಳಗ ಜರುಗುವುದು. ಅಂದು ರಾತ್ರಿ 7ಗಂಟೆಗೆ ಸಿಂಹಾಸರೋಹಣ ಕಾರ್ಯಕ್ರಮದ ನೇತೃತ್ವವನ್ನು ಮುರುಘಾಮಠದ ಮಲ್ಲಿಕಾರ್ಜುನ

ಸ್ವಾಮೀಜಿ, ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಕ್ಕಿಆಲೂರ ಶಿವಬಸವ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರುಹಾಗೂ ಗಣ್ಯರು ಭಾಗವಹಿಸುವರು. ಜ.15 ರಂದು ಮಕರ ಸಂಕ್ರಾತಿ ಪುಣ್ಯಕಾಲದಲ್ಲಿ ತೆಪ್ಪೋತ್ಸವ ಜರುಗಲಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುತ್ತಣ್ಣ ಮಠದ, ಅರುಣ ಶಟ್ಟರ, ಕೆ.ಎಂ. ಶಶಿಧರ, ಕೆ.ಎಸ್‌.ಉಮೇಶ, ಮಹೇಶ ಪಟ್ಟಣಶಟ್ಟಿ, ಮೃತ್ಯುಂಜಯ ತೆಲಗಿ, ಸುರೇಶ ಗುರಣ್ಣನವರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next