Advertisement

ಹೆದ್ದಾರಿ ಅಭಿವೃದ್ಧಿಗೆ 12 ಸಾವಿರ ಕೋಟಿ ರೂ.

05:30 PM Jan 26, 2022 | Team Udayavani |

ಲಿಂಗಸುಗೂರು: ರಾಯಚೂರು- ಬೆಳಗಾವಿ ಹೆದ್ದಾರಿ ಚತುಷ್ಪಥ ಅಭಿವೃದ್ಧಿಗೊಳಿಸಲು ಖಾಸಗಿ ಸಹಭಾಗಿತ್ವದಲ್ಲಿ ಕೇಂದ್ರ ಸರ್ಕಾರ 12 ಸಾವಿರ ಕೋಟಿ ಅನುದಾನ ನೀಡಲಿದೆ. ಇದಕ್ಕಾಗಿ ಡಿಪಿಆರ್‌ ಸಿದ್ಧವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು.

Advertisement

ಕಳ್ಳಿಲಿಂಗಸುಗೂರು ಗ್ರಾಮದಲ್ಲಿ ಪಿಎಂಜಿಎಸ್‌ ವೈ ಯೋಜನೆಯಡಿ 6.75 ಕೋಟಿ ಅನುದಾನದಲ್ಲಿ ಕಳ್ಳಿಲಿಂಗಸುಗೂರು -ಮುದುಗಲ್‌ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಯಚೂರು-ಬೆಳಗಾವಿ ಹೆದ್ದಾರಿ ಖಾಸಗಿ ಸಹಭಾಗಿತ್ವದಲ್ಲಿ 12 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಅಕ್ಕಲಕೋಟಿ- ರಾಯಚೂರು ಮಾರ್ಗವಾಗಿ ಕರ್ನೂಲ್‌ವರೆಗಿನ ಸಿಕ್ಸ್‌ ವೇ ಹೆದ್ದಾರಿ ಅಭಿವೃದ್ಧಿಗೆ 4 ಸಾವಿರ ಕೋಟಿ ಅನುದಾನ ಕೇಂದ್ರ ಸರ್ಕಾರ ನೀಡಿದೆ. ರಾಯಚೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯಡಿ ಗ್ರಾಮೀಣ ರಸ್ತೆಗಳ 300 ಕೋಟಿ ಅನುದಾನ ನೀಡಿದ್ದಾರೆ. ಅದರಂತೆ ತಾಲೂಕಿಗೆ 38 ಕೋಟಿ ಬಿಡುಗಡೆಯಾಗಿದೆ. ಜನರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು.

ಈ ವೇಳೆ ಶಾಸಕ ಡಿ.ಎಸ್‌. ಹೂಲಗೇರಿ, ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್‌, ಭೂಪನಗೌಡ ಕರಡಕಲ್‌, ವೀರನಗೌಡ ಲೆಕ್ಕಿಹಾಳ, ಗಜೇಂದ್ರ ನಾಯಕ, ವೆಂಕಟೇಶ ಗುತ್ತೆದಾರ, ಹುಲ್ಲೇಶ ಸಾಹುಕಾರ, ಸಂಜೀವ ಕಂದಗಲ್‌, ಜಗನ್ನಾಥ ಕುಲಕರ್ಣಿ, ಮಾನಪ್ಪ ನಾಯಕ, ಎಕ್ಬಾಲ್‌ ಹಾರೂನಸಾಬ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next