Advertisement

ಸುದ್ದಿ ಕೋಶ: ಮತ್ತಷ್ಟು ಹೆಚ್ಚಾಗಲಿದೆ ಹೆದ್ದಾರಿಯ ವೇಗ

05:47 PM Mar 16, 2018 | Sharanya Alva |

ಹೆದ್ದಾರಿಗಳಲ್ಲಿನ ವೇಗದ ಮಿತಿ ಹೆಚ್ಚಳಕ್ಕೆ ಕೇಂದ್ರ ಅನುಮತಿ ನೀಡಿದೆ. ಹೀಗಾಗಿ ಕಾರು ಮತ್ತು ಇತರ ವಾಹನಗಳು ಮತ್ತಷ್ಟು ವೇಗವಾಗಿ ಚಲಿಸಲು ಅನುಕೂಲವಾಗಲಿದೆ.

Advertisement

*ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ನೇತೃತ್ವದ ಸಭೆಯಲ್ಲಿ ಪ್ರಸ್ತಾಪಕ್ಕೆ ಒಪ್ಪಿಗೆ

*ಮುನಿಸಿಪಾಲಿಟಿ ವ್ಯಾಪ್ತಿಯ ರಸ್ತೆಗಳಲ್ಲಿ ವೇಗಕ್ಕೆ ಮಿತಿ ಹೇರುವ ಪ್ರಸ್ತಾಪಕ್ಕೆ ಇದೇ ಮೊದಲ ಬಾರಿ ಅನುಮೋದನೆ

* ಈ ಪ್ರಸ್ತಾಪಕ್ಕೆ ರಾಜ್ಯ ಸರ್ಕಾರಗಳು ಸಹಮತ ವ್ಯಕ್ತಪಡಿಸದೇ ಇದ್ದರೆ ಜಾರಿಗೊಳಿಸಲು ಸಾಧ್ಯವಿಲ್ಲ.

* ಪ್ರತಿಯೊಂದು ರಾಜ್ಯದಲ್ಲಿಯೂ ನಿಯಮ ಬೇರೆ ಬೇರೆಯಾಗಿದೆ. ನಗರ, ಪಟ್ಟಣ ಪ್ರದೇಶಗಳಲ್ಲಿ ಆಯಾ ಸ್ಥಳೀಯಾಡಳಿತ ಸಂಸ್ಥೆಗಳೇ ವೇಗದ ಮಿತಿ ನಿರ್ಧರಿಸಲಿದೆ.

Advertisement

ನಿರ್ಧಾರಕ್ಕೆ ಕಾರಣಗಳೇನು?
*ಹೆದ್ದಾರಿ ಮೂಲ ಸೌಕರ್ಯ ಮತ್ತು ವಾಹನ ತಂತ್ರಜ್ಞಾನ ಸುಧಾರಣೆಯಾಗಿರುವುದರಿಂದ ರಸ್ತೆ ಸಾರಿಗೆ ಸಚಿವಾಲಯ ವೇಗದ ಮಿತಿ ಹೆಚ್ಚಿಸುವ ಪ್ರಸ್ತಾಪದ ಬಗ್ಗೆ ಕಳೆದ ಜೂನ್‌ನಲ್ಲಿ ಸಚಿವ ನಿತಿನ್‌ ಗಡ್ಕರಿಯಿಂದ ಪ್ರಸ್ತಾಪ.

* ಸಾರಿಗೆ ಇಲಾಖೆಯ ಜಂಟಿ ಕಾರ್ಯದರ್ಶಿ ಅಭಯ ದಾಮ್ಲೆ ನೇತೃತ್ವದ ಸಮಿತಿಯಿಂದ ವೇಗದ ಮಿತಿ ಹೆಚ್ಚಳಕ್ಕೆ ಶಿಫಾರಸು.

ಪ್ರಸ್ತಾಪವನ್ನು ನಾವು ಪರಿಶೀಲಿಸಿ ಅಂತಿಮಗೊಳಿಸಿದ್ದೇವೆ. ಅದನ್ನು ಕಾನೂನು ಸಚಿವಾಲಯಕ್ಕೆ ಶೀಘ್ರವೇ ಕಳುಹಿಸಲಿದ್ದೇವೆ. ಅವರು ಅದನ್ನು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ.
●ರಸ್ತೆ ಸಾರಿಗೆ ಸಚಿವಾಲಯದ
ಹಿರಿಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next