Advertisement

1.20 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

03:06 PM Nov 03, 2017 | |

ಬಸವನಬಾಗೇವಾಡಿ: ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಇಲಾಖೆಯಿಂದ ಸುಮಾರು 1.20 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಕರ್ನಾಟಕ ನಗರ ನೀರು ಸರಬುರಾಜು ಮತ್ತು ಒಳಚರಂಡಿ
ನಿಗಮ ಮಂಡಳಿ ಅಧ್ಯಕ್ಷ ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ಪಟ್ಟಣದ ವಿಜಯಪುರ ರಸ್ತೆಯ ಅಗರವಾಲ, ಜೈನ್‌ ಬಡವಾಣೆಯಲ್ಲಿ 2 ಕೋಟಿ ವೆಚ್ಚದಲ್ಲಿ ಪುರಸಭೆ ಕಾರ್ಯಾಲಯ ಕಟ್ಟಡ ಹಾಗೂ 3 ಕೋಟಿ ವೆಚ್ಚದಲ್ಲಿ ಚನ್ನಬಸವಣ್ಣ ನಗರದಲ್ಲಿ ವಿವಿಧ ಕಾಮಗಾರಿ ಮತ್ತು 20 ಲಕ್ಷದಲ್ಲಿ ಗಣೇಶ ನಗರ ದಿಂದ ಗಂಗಾಧರ ಬಡವಾಣೆವರೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಳೆದ 4 ವರ್ಷದಲ್ಲಿ ಪಟ್ಟಣದಲ್ಲಿ 33 ಕೋಟಿ ವೆಚ್ಚದಲ್ಲಿ ಮೆಘಾ ಮಾರುಕಟ್ಟೆ, 46 ಕೋಟಿಯಲ್ಲಿ 24ಗಿ7 ಕುಡಿಯುವ ನೀರು, 22 ಕೋಟಿಯಲ್ಲಿ ಆಸರೆ ಯೋಜನೆಯಲ್ಲಿ ಮನೆ ನಿರ್ಮಾಣ, 8 ಕೋಟಿಯಲ್ಲಿ ಬಸವ ಭವನ, 6 ಕೋಟಿಯಲ್ಲಿ ಬಸವೇಶ್ವರ ವೃತ್ತದಿಂದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದವರೆಗೆ ರಸ್ತೆ ನಿರ್ಮಾಣ ಹಾಗೂ ಸರಕಾರಿ ಪಾಲಿಟೆಕ್ನಿಕ್‌, ಐಟಿಐ, ಡಿಗ್ರಿ ಕಾಲೇಜ್‌, ಅಗ್ನಿ ಶಾಮಕ ಸೇರಿದಂತೆ ಸುಮಾರು 120ಕ್ಕೂ ಕೋಟಿಗೂ ಹೆಚ್ಚು ವೆಚ್ಚದಲ್ಲಿ ವಿವಿಧ ಸರಕಾರಿ ಕಟ್ಟಡಗಳ ಭೂಮಿಪೂಜೆ ಹಾಗೂ ಉದ್ಘಾಟನೆ ಶಿಘ್ರದಲ್ಲೇ ಜರುಗಲಿದೆ ಎಂದು ಹೇಳಿದರು.

ಯಾವುದೇ ಒಂದು ಪಟ್ಟಣ ಮತ್ತು ಕ್ಷೇತ್ರ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಕ್ಷೇತ್ರದ ಜನತೆ ಮತ್ತು ಸಾರ್ವಜನಿಕರ ಸಹಕಾರ ಹಾಗೂ ಜನಪ್ರತಿನಿಧಿಗಳ ನಡುವೆ ಸಾಮರಸ್ಯ ಬೇಕು. ಅಂದಾಗ ಮಾತ್ರ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗುತ್ತದೆ. ಒಂದು ವೇಳೆ ಸಾಮರಸ್ಯ ಕೊರತೆ ಉಂಟಾದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
 
ಈಗಾಗಲೇ ಪಟ್ಟಣದಲ್ಲಿ ಮನಗೂಳಿ- ಬಿಜ್ಜಳ, ಬಾರಖೇಡ-ಬೀಳಗಿ ರಾಜ್ಯ ಹೆದ್ದಾರಿಗಳು ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋಗುತ್ತಿದ್ದು. ಇದರಿಂದ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಅಡೆ ತಡೆಯಾಗಲಿದೆ. ಇದಕ್ಕಾಗಿ ಪಟ್ಟಣದ ಹೊರ ವಲಯದಲ್ಲಿ ರಿಂಗ್‌ ರಸ್ತೆ ನಿರ್ಮಿಸಲು ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ. 

ಶೀಘ್ರದಲ್ಲೇ ಪಟ್ಟಣದ ಹೊರ ವಲಯದಲ್ಲಿ ರಿಂಗ್‌ ರಸ್ತೆ ನಿರ್ಮಿಸಲು ಸರಕಾರ ಬದ್ದವಾಗಿದೆ ಎಂದ ಅವರು, ನಾಳೆಯೇ ಪಟ್ಟಣದ ಸುತ್ತ ಮುತ್ತಲಿನ ಸಾರ್ವಜನಿಕರು ತಮ್ಮ ಜಮೀನವನ್ನು ದಾನದ ರೂಪದಲ್ಲಿ ನೀಡುವುದಾದಲ್ಲಿ ನಾಳೆಯೇ ರಿಂಗ್‌ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಒಂದು ವೇಳೆ ಭೂಮಿ ನೀಡಲು ಯಾರೂ ಮುಂದೆ ಬರೆ ಇದಲ್ಲಿ ಸ್ವಲ್ಪ ವಿಳಂಬವಾಗುತ್ತದೆ. ಬರುವ ವರ್ಷದಲ್ಲಿ ರಿಂಗ್‌ ರಸ್ತೆ ನಿರ್ಮಾಣ ಮಾಡುವುದಾಗಿ ಹೇಳಿದರು.

Advertisement

ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಪರಿಜಾನ ಚೌಧರಿ, ಉಪಾಧ್ಯಕ್ಷ ಸಂಜೀವ ಕಲ್ಯಾಣಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಸಹಕಾರಿ ಮಹಾಮಂಡಳಿ ನಿರ್ದೇಶಕ ಶಿವನಗೌಡ ಬಿರಾದಾರ, ಎಪಿಎಂಸಿ ನಿರ್ದೇಶಕ ಶೇಖರ ಗೊಳಸಂಗಿ, ಬಸಣ್ಣ ಕಲ್ಲೂರ, ಪುರಸಭೆ ಸದಸ್ಯರಾದ ಬಸವರಾಜ ತುಂಬಗಿ, ಪ್ರವೀಣ ಪವಾರ, ಸಂಗನಬಸು ಪೂಜಾರಿ, ಸತ್ಯವ್ವ ಕೊಳೂರ, ಮುರುಗೇಶ ನಾಯ್ಕೋಡಿ, ಕಮಲಸಾಬ ಕೊರಬು, ನಜೀರ್‌ ಗಣಿ ಇದ್ದರು.  ಪುರಸಭೆ ಮುಖ್ಯಾ ಧಿಕಾರಿ ಬಿ.ಎ. ಸೌದಾಗರ ಪ್ರಾಸ್ತಾವಿಕ ಮಾತನಾಡಿದರು. ರವಿ ರಾಠೊಡ ಸ್ವಾಗತಿಸಿದರು. ವಿಲಾಸ ರಾಠೊಡ ನಿರೂಪಿಸಿದರು. ಗುರುರಾಜ ಮಾಗಾವಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next