Advertisement
ಹಾರೋಹಳ್ಳಿ ತಾಲೂಕಿನ ಮರಳ ವಾಡಿ ಹೋಬ ಳಿಯ ಸಿಡಿ ದೇವರಹಳ್ಳಿ ಸರ್ವೆ ನಂ. 104ರಲ್ಲಿ ದುರ್ಗ ದಕಲ್ಲು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿ ಯಲ್ಲಿ ಕಂದಾಯ ಇಲಾಖೆ ಉಪ ವಿಭಾಗಾಧಿ ಕಾರಿಗಳು ಮಂಜೂರು ಮಾಡಿದ್ದ ಹಾಗೂ ಸ್ಥಳೀಯರು ಒತ್ತುವರಿ ಮಾಡಿ ಕೊಂಡಿದ್ದ ಸುಮಾರು 120 ಎಕರೆಯಷ್ಟು ಭೂಮಿ ಯನ್ನು ಸರ್ಕಾರದ ಆದೇಶದ ಮೇರೆಗೆ ಕಾನೂನಾ ತ್ಮಕವಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಳ ನೇತೃತ್ವದಲ್ಲಿ ಒತ್ತುವರಿ ತೆರವುಗೊಳಿಸಿ ಪ್ರಾದೇಶಿಕ ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ.
Related Articles
Advertisement
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ದಾಳೇಶ್, ಉಪ ವಲಯ ಅರಣ್ಯ ಅಧಿಕಾರಿ ರಮೇಶ್, ಯಂಕುಂಚಿ, ಚಂದ್ರನಾಯಕ್, ಮಣಿ, ಪುಷ್ಪಲತಾ, ಅರಣ್ಯ ಗಸ್ತು ಪಾಲಕರಾದ ಶಿವರಾಜು, ಚಂದ್ರ, ನರಸಿಂಹ, ಲೋಕೇಶ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಅರಣ್ಯ ಇಲಾಖೆ ಭೂಮಿ ರಕ್ಷಣೆಗೆ ಕ್ರಮ : ಎಸಿಎಫ್ ಗಣೇಶ್ ನೇತೃತ್ವದಲ್ಲಿ ಆರ್‌ಎಫ್ಒ ದಾಳೇಶ್ ಹಾಗೂ ಸಿಬ್ಬಂದಿ ತೆರವು ಕಾರ್ಯಾ ಚರಣೆ ಕೈಗೊಂಡಿದ್ದರು. ಕಳೆದ ಮೂರು ದಿನಗಳಿಂದ ಒತ್ತುವರಿ ಕಾರ್ಯಾಚರಣೆ ಕೈಗೊಂಡಿ ರುವ ಅರಣ್ಯ ಇಲಾಖೆ ಅಧಿಕಾರಿಗಳು ಹಂತ ಹಂತವಾಗಿ 120ಎಕರೆಯಷ್ಟು ಭೂಮಿಯನ್ನು ಜೆಸಿಬಿ ಮೂಲಕ ತೆರವು ಮಾಡಿ ಗಡಿ ಗುರುತಿಸಿದೆ. ಒತ್ತುವರಿಯಾಗಿದ್ದ ಭೂಮಿ ಮತ್ತೆ ಒತ್ತುವರಿ ಯಾಗ ದಂತೆ ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಂಡಿದೆ. ಒತ್ತುವರಿ ತೆರವು ಮಾಡಿರುವ ಗಡಿಯಲ್ಲಿ ಈಗಾ ಗಲೇ ಟ್ರಂಚ್ ನಿರ್ಮಾಣ ಮಾಡುವ ಕಾರ್ಯ ಬರದಿಂದ ಸಾಗಿದೆ. ಆ ಜಾಗದಲ್ಲಿ ಮುಂದಿನ ಮುಂಗಾರು ಮಳೆ ಬೀಳುತ್ತಿದ್ದಂತೆ ಮರ ಗಿಡಗಳನ್ನು ಬೆಳೆಸಿ ಅರಣ್ಯ ಇಲಾಖೆ ಭೂಮಿಯ ರಕ್ಷಣೆ ಮಾಡಿಕೊಳ್ಳಲು ಕ್ರಮಗಳನ್ನು ಕೈಗೊಳ್ಳಲಿದೆ.
ತೆರವು ಕಾರ್ಯಾಚರಣೆ: ಸರ್ಕಾರದ ಆದೇಶದಂತೆ ಅರಣ್ಯ ಇಲಾಖೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ಪ್ರಾದೇಶಿಕ ಅರಣ್ಯ ಭೂಮಿಯನ್ನು ಖರೀದಿಸಿದ್ದ 3ಎಕರೆಗೂ ಹೆಚ್ಚು ಭೂಮಿ ಇರುವ ದೊಡ್ಡ ಹಿಡುವಳಿದಾರರ ವಿಚಾರಣೆ ನಡೆಸಿ ಕಾನೂನಾತ್ಮಕವಾಗಿ ಒತ್ತುವರಿ ಎಂದು ಪರಿಗಣಿಸಿತ್ತು. ಸಿಸಿಎಫ್ ನ್ಯಾಯಾಲಯದಲ್ಲಿ ಕೆಲವರು ಮೇಲ್ಮನವಿ ಸಲ್ಲಿಸಿದರು. ಅಲ್ಲಿಯು ಸಹ ಅರಣ್ಯ ಇಲಾಖ
ಸರ್ಕಾರದ ಆದೇಶದಂತೆ 3 ಎಕರೆ ಒಳಪಟ್ಟಿರುವ ರೈತರನ್ನು ತೆರವು ಮಾಡಿಲ್ಲ, ಒತ್ತುವರಿ ಮಾಡಿಕೊಂಡಿದ್ದ ದೊಡ್ಡ ಹಿಡುವಳಿದಾರರಿಗೆ ಕಾನೂನಾತ್ಮಕವಾಗಿ ಎಲ್ಲ ಅವಕಾಶಗಳನ್ನು ಕೊಟ್ಟು, ಅರಣ್ಯ ಇಲಾಖೆ ಕೋರ್ಟ್ ಆದೇಶದಂತೆ 120 ಎಕರೆಯಷ್ಟು ಭೂಮಿಯನ್ನು ಒತು ವರಿ ತೆರವು ಮಾಡಿದ್ದೇವೆ. ಅರಣ್ಯ ಭೂಮಿ ಸಂರಕ್ಷಣೆ ಇಲಾಖೆ ಜವಬ್ದಾರಿ ಹಾಗಾಗಿ ಈ ಕ್ರಮ ಕೈಗೊಳ್ಳಲಾಗಿದೆ. – ದಾಳೇಶ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕನಕಪುರ
– ಬಿ.ಟಿ.ಉಮೇಶ್ ಬಾಣಗಹಳ್ಳಿ