Advertisement

12 ಸ್ಥಾಯಿ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ

11:29 AM Nov 17, 2017 | Team Udayavani |

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಲ್ಲ ಸಮಿತಿಗಳ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗುರುವಾರ ಮೇಯರ್‌ ಆರ್‌.ಸಂಪತ್‌ರಾಜ್‌ ಅವರು ಸ್ಥಾಯಿ ಸಮಿತಿಗಳ ಅಧ್ಯಕ್ಷರ ಚುನಾವಣೆ ಪ್ರಕ್ರಿಯೆ ನಡೆಸಿದರು. ಈ ಹಿಂದೆಯೇ ಅಧ್ಯಕ್ಷರು ಯಾರಾಗುತ್ತಾರೆ ಎಂಬುದು ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ಗೊಂದಲವಿಲ್ಲದೆ ಎಲ್ಲ 12 ಸಮಿತಿಗಳಿಗೆ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾದರು. 

Advertisement

ಕಾಂಗ್ರೆಸ್‌ನ ಐದು ಸದಸ್ಯರು, ಜೆಡಿಎಸ್‌ನ 4 ಸದಸ್ಯರು ಹಾಗೂ ಮೂವರು ಪಕ್ಷೇತರರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬೆಳಗ್ಗೆ 12.12ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭಿಸಿದ ಮೇಯರ್‌ ಸಂಪತ್‌ರಾಜ್‌ ಕೇವಲ 20 ನಿಮಿಷಗಳಲ್ಲಿ ಎಲ್ಲ ಸಮಿತಿಗಳ ಚುನಾವಣಾ ಪ್ರಕ್ರಿಯೆ ಮುಗಿಸಿದರು. 

ಯಾವ ಸಮಿತಿಗೆ ಯಾರಿಗೆ 
ಕಾಂಗ್ರೆಸ್‌
-ನಗರ ಯೋಜನೆ ಸ್ಥಾಯಿ ಸಮಿತಿ – ಶಕೀಲ್‌ ಅಹಮದ್‌ (ಭಾರತಿನಗರ)
-ಬೃಹತ್‌ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿ – ಗೋವಿಂದರಾಜು (ಸುಭಾಷ್‌ನಗರ)
-ಅಪೀಲು ಸ್ಥಾಯಿ ಸಮಿತಿ – ಕೋಕಿಲ ಚಂದ್ರಶೇಖರ್‌ (ಚಾಮರಾಜಪೇಟೆ)
-ಮಾರುಕಟ್ಟೆ ಸ್ಥಾಯಿ ಸಮಿತಿ – ಜಿ.ಮಂಜುನಾಥ್‌ (ಸುದ್ದಗುಂಟೆಪಾಳ್ಯ)
-ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ – ಅಬ್ದುಲ್‌ ರಕೀಬ್‌ ಝಾಕೀರ್‌ (ಪುಲಿಕೇಶಿನಗರ)

ಜೆಡಿಎಸ್‌
-ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ – ಎಂ.ಮಹದೇವ (ಮಾರಪ್ಪನಪಾಳ್ಯ)
-ತೋಟಗಾರಿಗೆ ಸ್ಥಾಯಿ ಸಮಿತಿ – ಉಮ್ಮೇ ಸಲ್ಮಾ (ಕುಶಾಲನಗರ)
-ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸಮಿತಿ – ಇಮ್ರಾನ್‌ ಪಾಷಾ (ಪಾದರಾಯನಪುರ)
-ಶಿಕ್ಷಣ ಸ್ಥಾಯಿ ಸಮಿತಿ – ಗಂಗಮ್ಮ (ಶಕ್ತಿಗಣಪತಿನಗರ)

ಪಕ್ಷೇತರರು
-ಲೆಕ್ಕಪತ್ರ ಸ್ಥಾಯಿ ಸಮಿತಿ – ಎನ್‌.ರಮೇಶ್‌ (ಮಾರತಹಳ್ಳಿ)
-ಆರೋಗ್ಯ ಸ್ಥಾಯಿ ಸಮಿತಿ – ಮುಜಾಹಿದ್‌ ಪಾಷಾ (ಸಿದ್ದಾಪುರ)
-ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸ್ಥಾಯಿ ಸಮಿತಿ – ಸಿ.ಆರ್‌.ಲಕ್ಷ್ಮೀನಾರಾಯಣ್‌ (ದೊಮ್ಮಲೂರು)

Advertisement
Advertisement

Udayavani is now on Telegram. Click here to join our channel and stay updated with the latest news.

Next