Advertisement
ಬಿಬಿಎಂಪಿಯ ಇಬ್ಬರು ಅಧಿಕಾರಿಗಳು, ಬಿಡಿಎ ಓರ್ವ ಎಂಜಿನಿಯರ್, ಬಳ್ಳಾರಿ ಉಪವಿಭಾಗಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 12 ಮಂದಿ ಅಧಿಕಾರಿಗಳು ಎಸಿಬಿ ದಾಳಿಗೆ ಒಳಗಾಗಿದ್ದಾರೆ. ಆರೋಪಿತ ಅಧಿಕಾರಿಗಳಿಗೆ ಸೇರಿದ ಬೆಂಗಳೂರು, ಬಳ್ಳಾರಿ, ಶಿವಮೊಗ್ಗ, ಗದಗ, ರಾಯಚೂರು , ಹಾಸನ, ವಿಜಯಪುರ ನಿವಾಸಗಳು ಹಾಗೂ ಕಚೇರಿಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು ದಾಖಲೆಗಳ ಪರಿಶೀಲನೆ ನಡೆಸಲಾಗಿದೆ.
1. ಬಿ.ಎಸ್. ಪ್ರಹ್ಲಾದ್, ಸೂಪರಿಂಟೆಂಡೆಂಟ್ ಎಂಜಿನಿಯರ್, ಬಿಬಿಎಂಪಿ ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗ ಬೆಂಗಳೂರು
2. ನರಸಿಂಹಲು, ತೆರಿಗೆ ಮೌಲ್ಯಮಾಪಕರು, ಬಿಬಿಎಂಪಿ ಸಿ.ವಿ. ರಾಮನ್‌ನಗರ ಉಪವಿಭಾಗ, ಬೆಂಗಳೂರು
3. ಆರ್.ವಿ. ಕಾಂತರಾಜು, ಬಿಡಿಎ ನಗರ ಯೋಜನೆ ಉಪನಿರ್ದೇಶಕ, ಬೆಂಗಳೂರು
4. ಎನ್.ಆರ್.ಎಂ. ನಾಗರಾಜನ್ ಕೆಪಿಟಿಸಿಎಲ್ ಸೂಪರಿಂಟೆಂಡೆಂಟ್ ಎಂಜಿನಿಯರ್, ಬೆಂಗಳೂರು
5. ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಬಳ್ಳಾರಿ
6. ಬಿ.ಎಸ್. ಬಾಲನ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಕರ್ನಾಟಕ ನೀರಾವರಿ ನಿಗಮ, ಭದ್ರಾವತಿ
7. ಜೆ.ಸಿ. ಜಗದೀಶಪ್ಪ, ಕೆಪಿಟಿಸಿಎಲ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಹೊನ್ನಾಳಿ
8. ವೆಂಕಟೇಶ್, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್, ಸಕಲೇಶಪುರ
9. ಅಶೋಕಗೌಡಪ್ಪ ಪಾಟೀಲ, ನರಗುಂದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ
10. ಸೋಮಪ್ಪ ಟಿ. ಲಮಾಣಿ, ವಿಜಯಪುರ ಜಿಲ್ಲಾ ಪಂಚಾಯ್ತಿ ಎಂಜಿನಿಯರಿಂಗ್ ವಿಭಾಗದ ಶಾಖಾಧೀಕ್ಷ,
11. ರೇಖಾ, ವಾಜರಹಳ್ಳಿ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ನೆಲಮಂಗಲ ತಾಲ್ಲೂಕು
12. ಅಮರೇಶ ಬೆಂಚಮರಡಿ, ನಗರಸಭೆ ಸ್ಯಾನಿಟರಿ ಇನ್‌ಸ್ಪೆಕ್ಟರ್ ರಾಯಚೂರು