ದಾವಣಗೆರೆ: ಜಿಲ್ಲೆಯಲ್ಲಿ ಶುಕ್ರವಾರ ಮತ್ತೆ 12 ಜನರಲ್ಲಿ ಕೋವಿಡ್ 19 ಸೋಂಕು ದೃಢಪಟ್ಟಿದೆ. ಇವುಗಳಲ್ಲಿ ಆರು ಪ್ರಕರಣಗಳ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ. ಓರ್ವ ಸೋಂಕಿತನಿಂದ ನಾಲ್ವರಿಗೆ ಮಹಾಮಾರಿ ಪಸರಿಸಿದೆ.
ಗ್ರಾಮಾಂತರ ಭಾಗದಲ್ಲಿ ಕೋವಿಡ್ 19 ಸೋಂಕು ಕಾಣಿಸಿಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ. ಆದರೆ ಈ ಕುರಿತಾಗಿ ನಿಖರ ಮಾಹಿತಿ ನೀಡಲು ಜಿಲ್ಲಾಡಳಿತ ನಿರಾಕರಿಸಿದೆ.
28 ವರ್ಷದ ಮಹಿಳೆ (ರೋಗಿ ನಂಬರ್ 8064), 18 ವರ್ಷದ ಯುವತಿ (ರೋಗಿ ನಂಬರ್ 8065), 20 ವರ್ಷದ ಯುವತಿ (ರೋಗಿ ನಂಬರ್ 8066), 22 ವರ್ಷದ ಮಹಿಳೆ(ರೋಗಿ ನಂಬರ್8067), 21ವರ್ಷದ ಮಹಿಳೆ (ರೋಗಿ ನಂಬರ್ 8068), 23 ಮಹಿಳೆ (ರೋಗಿ ನಂಬರ್ 8069) ಇಷ್ಟು ಜನರ ಸೋಂಕಿನ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ರೋಗಿ ನಂಬರ್ 6159 ರ ಸಂಪರ್ಕದಿಂದ 54ವರ್ಷದ ವೃದ್ಧೆ (ರೋಗಿ ನಂಬರ್8070), 12 ವರ್ಷದ ಬಾಲಕ (ರೋಗಿ ನಂಬರ್ (8071), 60 ವರ್ಷದ ವೃದ್ಧೆ (ರೋಗಿ ನಂಬರ್ 8072), 24ವರ್ಷದ ಮಹಿಳೆಯಲ್ಲಿ (ರೋಗಿ ನಂಬರ್8073) ಸೋಂಕು ಕಾಣಿಸಿಕೊಂಡಿದೆ.
ರೋಗಿ ನಂಬರ್ 7576ರ ಸಂಪರ್ಕದಿಂದ 48 ವರ್ಷದ ಮಹಿಳೆ (ರೋಗಿ ನಂಬರ್ 8074), ರೋಗಿ ನಂಬರ್ 7778ರ ಸಂಪರ್ಕದಿಂದ 65 ವರ್ಷದ ವೃದ್ಧನಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 245 ಪ್ರಕರಣಗಳಲ್ಲಿ ಈವರೆಗೆ 215 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಇನ್ನೂ 24 ಸಕ್ರಿಯ ಪ್ರಕರಣಗಳಿವೆ.