Advertisement

ಪಾಕ್ ಡ್ರೋನ್ ಹೊಡೆದುರುಳಿಸಿದ ಗಡಿ ಭದ್ರತಾ ಪಡೆ: ಕಳೆದ ಮೂರು ದಿನದಲ್ಲಿ ನಡೆದ ಎರಡನೇ ಘಟನೆ

08:05 AM Oct 17, 2022 | Team Udayavani |

ನವದೆಹಲಿ: ಅಮೃತಸರ ಪ್ರದೇಶದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯಲ್ಲಿ ಭಾರತದ ಗಡಿಯೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಡ್ರೋನ್ ಒಂದನ್ನು ಭಾರತೀಯ ಗಡಿ ಭದ್ರತಾ ಪಡೆ ಹೊಡೆದುರುಳಿಸಿದೆ.

Advertisement

12 ಕೆಜಿ ತೂಕದ ಡ್ರೋನ್ ನಾಲ್ಕು ಪ್ರೊಪೆಲ್ಲರ್‌ಗಳನ್ನು ಹೊಂದಿದ್ದು, ಬಿಎಸ್‌ಎಫ್‌ನ 22 ನೇ ಬೆಟಾಲಿಯನ್‌ನ ಪಡೆಗಳು ಅಮೃತಸರ ಸೆಕ್ಟರ್‌ನ ರಾನಿಯಾ ಗಡಿ ಪೋಸ್ಟ್ ಬಳಿ ರವಿವಾರ ರಾತ್ರಿ 9.15 ರ ಸುಮಾರಿಗೆ ಹೊಡೆದುರುಳಿಸಿದ್ದಾರೆ.

ಡ್ರೋನ್ ಮೂಲಕ ಲೋಡ್ ಸಾಗಿಸುತ್ತಿದ್ದ ಕೆಲವು ಸರಕುಗಳನ್ನು ಸೇನಾ ಪಡೆ ವಶಪಡಿಸಿಕೊಂಡಿದ್ದು, ಇದು ಕಳೆದ ಮೂರು ದಿನಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ.

ಇದನ್ನೂ ಓದಿ : ಇಂದಿನಿಂದ ಅಭ್ಯಾಸ ಪಂದ್ಯಗಳ ಸರದಿ: ಭಾರತದ ಎದುರಾಳಿ ಆಸ್ಟ್ರೇಲಿಯ

Advertisement

Udayavani is now on Telegram. Click here to join our channel and stay updated with the latest news.

Next