Advertisement

ದುಬೈ ಬಸ್‌ ದುರಂತದಲ್ಲಿ 12 ಭಾರತೀಯರ ಸಾವು

01:00 AM Jun 08, 2019 | mahesh |
ದುಬೈ: ದುಬೈನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 12 ಮಂದಿ ಭಾರತೀಯರು ಸೇರಿದಂತೆ 17 ಮಂದಿ ಅಸುನೀಗಿದ್ದಾರೆ. ಒಮನ್‌ನ ಸಾರಿಗೆ ಸಂಸ್ಥೆಗೆ ಸೇರಿದ ಬಸ್‌ ದುಬೈಗೆ ಆಗಮಿಸುತ್ತಿದ್ದ ವೇಳೆ ಈ ದುರಂತ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.

ಒಮನ್‌ನ ಸಾರಿಗೆ ಸಂಸ್ಥೆ ಮ್ವಸಲತ್‌ಗೆ ಸೇರಿದ ಬಸ್‌ ಅಲ್ ರಶೀದಿಯಾ ಮೆಟ್ರೋ ನಿಲ್ದಾಣದ ರಸ್ತೆಗೆ ಆಗಮಿಸುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಬದಿಯಲ್ಲಿದ್ದ ಸಿಗ್ನಲ್ ಫ‌ಲಕಕ್ಕೆ ಅಪ್ಪಳಿಸಿ ಈ ದುರಂತ ಸಂಭವಿಸಿದೆ. ಅಸುನೀಗಿದ 12 ಭಾರತೀಯರ ಪೈಕಿ ಆರು ಮಂದಿ ಕೇರಳದರಾಗಿದ್ದಾರೆ. ಈ ಪೈಕಿ ನಾಲ್ವರ ಗುರುತು ಪತ್ತೆಯಾಗಿದೆ. ಅವರನ್ನು ತಿರುವನಂತಪುರದ ದೀಪಕ್‌ ಕುಮಾರ್‌, ಜಮಾಲುದ್ದೀನ್‌ ಅರಕ್ಕವೀಟಿಲ್, ತಲಶೆರಿ ಮೂಲದ ಚೊನೋಕ್ಕದೇವಾತ್ತು ಉಮ್ಮರ್‌, ಅವರ ಪುತ್ರ ನಬೀಲ್ ಎಂದು ಗುರುತಿಸಲಾಗಿದೆ. ಉಳಿದವರನ್ನು ವಾಸುದೇವನ್‌ ಮತ್ತು ತಿಲಕನ್‌ ಎಂದು ಗುರುತಿಸಲಾಗಿದೆ ಎಂದು ಭಾರತೀಯ ದೂತವಾಸ ಕಚೇರಿ ತಿಳಿಸಿದೆ.

Advertisement

ಒಮನ್‌ನಿಂದ ದುಬೈಗೆ ತೆರಳುತ್ತಿದ್ದ ಈ ಬಸ್‌ನಲ್ಲಿ 31 ಮಂದಿ ಪ್ರಯಾಣಿಸುತ್ತಿದ್ದರು. ದುರಂತದ ಬಗ್ಗೆ ಭೂತಾನ್‌ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಡಾ.ಎಸ್‌. ಜೈಶಂಕರ್‌ ಶೋಕ ವ್ಯಕ್ತಪಡಿಸಿ, ಸೂಕ್ತ ನೆರವಿನ ಭರವಸೆ ನೀಡಿದ್ದಾರೆ. ದೂತವಾಸ ಕಚೇರಿ +971565463903 ದೂರವಾಣಿ ಸಂಖ್ಯೆ ನೀಡಿದ್ದು, ಅದನ್ನು ಸದುಪಯೋಗ ಮಾಡುವಂತೆ ಸೂಚಿಸಿದೆ. ಪ್ರಯಾಣಿಕರ ಕುಟುಂಬ ಸದಸ್ಯರನ್ನು ಶೀಘ್ರ ಗುರುತಿಸಿ ಅವರಿಗೆ ನೆರವು ನೀಡಲು ಕ್ರಮ ಕೈಗೊಂಡಿರುವುದಾಗಿ ಕಾನ್ಸುಲೇಟ್ ಜನರಲ್ ವಿಪುಲ್ ಟ್ವೀಟ್ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next