ಕಾಸರಗೋಡು: ಕೇರಳ ರಾಜ್ಯ ಸರಕಾರದ ಲಾಟರಿ ಟಿಕೆಟ್‌ಗಳ ಪೈಕಿ ಮೊದಲ ಬಾರಿಗೆ ಗರಿಷ್ಠ ಮೊತ್ತದ 12 ಕೋಟಿ ರೂ. ಬಂಪರ್ ಬಹುಮಾನ ಹೊಂದಿರುವ ಓಣಂ ಅದೃಷ್ಟ ಚೀಟಿಯ ಡ್ರಾ ಸೆ. 19ರಂದು ನಡೆಯಲಿದೆ. ಈ ಲಾಟರಿ ಟಿಕೆಟ್ ಮಾರಾಟದ ಮೂಲಕ ರಾಜ್ಯ ಸರಕಾರಕ್ಕೆ ಈಗಾಗಲೇ 29 ಕೋಟಿ ರೂ. ಲಾಭ ಲಭಿಸಿದೆ.
ಸರಕಾರ ಮುದ್ರಿಸಿದ 46 ಲಕ್ಷ ಲಾಟರಿ ಟಿಕೆಟ್‌ಗಳ ಪೈಕಿ 43 ಲಕ್ಷ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ. ಉಳಿದ
ಟಿಕೆಟ್‌ಗಳು ಗುರುವಾರ ಅಪರಾಹ್ನ 2 ಗಂಟೆಗೆ ಮುಂಚಿತ ವಾಗಿ ಮಾರಾಟವಾಗಬಹುದೆಂದು ನಿರೀಕ್ಷಿಸಲಾಗಿದೆ.
300 ರೂ. ಬೆಲೆಯ ಬಂಪರ್ ಟಿಕೆಟ್ ಮಾರಾಟ ಜುಲೈ 21ರಿಂದ ಆರಂಭಗೊಂಡಿತ್ತು. ಗುರುವಾರ ಅಪರಾಹ್ನ 2 ಗಂಟೆಗೆ ಅದೃಷ್ಟ ಚೀಟಿ ಎತ್ತಲಾಗುವುದು. 3.30ರ ವೇಳೆಗೆ ಬಹುಮಾನಕ್ಕೆ ಆಯ್ಕೆಯಾದ ಟಿಕೆಟ್‌ಗಳನ್ನು ಘೋಷಿಸಲಾಗುವುದು. ದ್ವಿತೀಯ ಬಹುಮಾನ 5 ಕೋಟಿ ರೂ., ತೃತೀಯ ಬಹುಮಾನ 2 ಕೋಟಿ ರೂ., ಚತುರ್ಥ ಬಹುಮಾನ 1 ಕೋಟಿ ರೂ. ಲಭಿಸಲಿದೆ. ಕಳೆದ ವರ್ಷ ಓಣಂ ಬಂಪರ್ ಬಹುಮಾನ 10 ಕೋಟಿ ರೂ. ಆಗಿತ್ತು. ಅಂದು ಕೇರಳದಲ್ಲಿ ನೆರೆ ಬಂದಿದ್ದರೂ 43 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು.
ಓಣಂ ಬಂಪರ್ ಟಿಕೆಟ್ ಮಾರಾಟದ ಮೂಲಕ 138 ಕೋಟಿ ರೂ. ಸರಕಾರಕ್ಕೆ ಲಭಿಸಿದ್ದರೂ, ಅದರಲ್ಲಿ ಶೇ. 21 ಮಾತ್ರವೇ ಲಾಭ. ಶೇ. 42ರಷ್ಟು ಬಹುಮಾನವಾಗಿ ನೀಡಬೇಕು. ಶೇ. 32 ಏಜೆನ್ಸಿ ಕಮಿಷನ್, ಶೇ. 5 ಮುದ್ರಣ ವೆಚ್ಚವಾಗಲಿದೆ. ರಾಜ್ಯಕ್ಕೆ ವಾರ್ಷಿಕವಾಗಿ ಲಾಟರಿಯಲ್ಲಿ 9292 ಕೋಟಿ ರೂ. ವ್ಯವಹಾರ ನಡೆಯುತ್ತದೆ. ಸೆ.19 ರಂದು 12 ಕೋಟಿ ರೂ. ಬಹುಮಾನ ಪಡೆಯುವ ವ್ಯಕ್ತಿಗೆ ತೆರಿಗೆ ಕಳೆದು 7.56 ಕೋಟಿ ರೂ. ಲಭಿಸಲಿದೆ. 12 ಕೋಟಿ ರೂ.ಗಳಲ್ಲಿ ಶೇ. 10 ಏಜೆನ್ಸಿ ಕಮಿಷನ್ ಮತ್ತು ಬಾಕಿ ಮೊತ್ತದ ಶೇ. 30 ಆದಾಯ ತೆರಿಗೆಯಾಗಿ ಕಡಿಮೆಯಾಗಲಿದೆ.
ಏಜೆಂಟ್ ಕೂಡ ಕೋಟಿಪತಿ!
ಇದೇ ವೇಳೆ ಬಂಪರ್ ಬಹುಮಾನ ಪಡೆಯುವ ಟಿಕೆಟ್ ಮಾರಾಟ ಮಾಡಿದ ಏಜಂಟ್ ಕೂಡ ಕೋಟ್ಯಧಿಪತಿ¿ Þಗಲಿದ್ದಾನೆ. ಶೇ. 10 ಕಮಿಷನ್ ರೂಪದಲ್ಲಿ ಆತನಿಗೆ 1.20 ಕೋಟಿ ರೂ. ಲಭಿಸಲಿದೆ.