ಮಣಿಪಾಲ: ದೆಹಲಿ ಚುನಾವಣೆಯಲ್ಲಿ ಅತಂತ್ರ ಸ್ಥಿತಿಗೆ ಬದಲು ಪೂರ್ಣ ಬಹುಮತದ ಜನಾದೇಶ ಇತರ ರಾಜ್ಯಗಳಿಗೂ ಮಾದರಿಯಾಗಬೇಕಾಗಿದೆಯೇ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ.
ಶ್ರೀಶ ಭಟ್:ಎಲ್ಲ ಪಕ್ಷಗಳು ದೇಶದ ಆರ್ಥಿಕತೆ ಏನೇ ಇರಲಿ, ಉಚಿತ ಬಸ್ ಪ್ರಯಾಣ, ಮೆಟ್ರೋ, ರೈಲ್ ಪ್ರಯಾಣ ಕೊಡಬೇಕು. ಉಚಿತ ನೀರು, ವಿದ್ಯುತ್ ಮತ್ತು ಜೀವನಕ್ಕೆ ಬೇಕಾಗುವ ಅಕ್ಕಿ, ಬೇಳೆ ಕೊಡಬೇಕು. ಇದಕ್ಕೆ ಎಲ್ಲ ಪಕ್ಷಗಳಲ್ಲೂ ಸ್ಪರ್ಧೆ ಇರಬೇಕು. ಅಭ್ಯರ್ಥಿಗಳು ಅವಿದ್ಯಾವಂತರಾಗಿರಬೇಕು.
ಪ್ರಸಾದ್ ಕೆಜಿ ಗೋವಿಂದ ರಾಜು: ಖಂಡಿತವಾಗಲೂ ಹೌದು ಯಾವುದೇ ರಾಜಕೀಯ ಪಕ್ಷಕ್ಕೆ ನಿರ್ದಿಷ್ಟವಾದ ಬಹುಮತ ಇದ್ದರೆ ಮಾತ್ರ ಸಂಪೂರ್ಣವಾಗಿ ಎಲ್ಲಾ ಕಾರ್ಯಗಳಲ್ಲಿ ಯಶಸ್ವಿಯಾಗಬಹುದು ಸಮ್ಮಿಶ್ರ ಸರ್ಕಾರ ಸೀಟಿಗೆ ಸಂಚಕಾರ ಆದ್ದರಿಂದ ದೆಹಲಿಯಲ್ಲಿ ಜನತೆ ನೀಡಿರುವ ಏಕಪಕ್ಷದ ನಿರ್ಧಾರವು ಸರಿ ಅನಿಸುವುದರಲ್ಲಿ ತಪ್ಪಿಲ್ಲ.
ಮೊಹಮ್ಮದ್ ರಫೀಕ್ ಕೊಲ್ಪೆ: ಅರವಿಂದ್ ಕ್ರೇಜಿವಾಲ್ ಪೊರಕೆಯೊಂದಿಗೆ ವ್ಯಾಕುಮ್ ಕ್ಲೀನರ್ ತಗೊಂಡು ಬಿಹಾರ, ಉತ್ತರ ಪ್ರದೇಶಕ್ಕೆ ಹೋಗಬೇಕಾದ ಅವಶ್ಯಕತೆ ಇದೆ!
ಮೋಹನ್ ದಾಸ್ ಕಿಣಿ: ಹೌದು, ಅಭಿವೃದ್ಧಿಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ನಿರ್ದಿಷ್ಟ ಕಾರ್ಯಸೂಚಿಯೊಂದಿಗೆ ಸ್ಪರ್ಧೆಗಿಳಿಯುವ ಯಾವುದೇ ಪಕ್ಷ ಅಥವಾ ಪಕ್ಷಗಳ ಗುಂಪಿಗೆ ಸ್ಪಷ್ಟ ಬಹುಮತ ನೀಡುವುದು ಆರೋಗ್ಯಕರ ಪ್ರಜಾಪ್ರಭುತ್ವದ ದೃಷ್ಟಿಯಿಂದ ಅಗತ್ಯ. ಆದರೆ ಮಹಾರಾಷ್ಟ್ರದಲ್ಲಿ ಆದಂತೆ ಗೆದ್ದ ಮೇಲೆ ರಾಗ ಬದಲಾಯಿಸುವ ಸಮಯ ಸಾಧಕತನದ ರಾಜಕೀಯಕ್ಕೆ ಅಂಕುಶ ಹಾಕುವ ರೀತಿಯಲ್ಲಿ ಸ್ಪಷ್ಟ ಕಾಯಿದೆ ಇರಬೇಕು. ಆಗ ಮಾತ್ರ ಜನಾದೇಶಕ್ಕೆ ಬೆಲೆ.
ಮಹಾದೇವ ಗೌಡ; ರಾಷ್ಟ್ರಿಯ ಪಕ್ಷಗಳು ಒಂದು ಕಣ್ಣು ಎರಡು ಕಣ್ಣುಗಳು ಹೋಗಲಿ ಸೂತ್ರದಡಿಯಲ್ಲಿ ಇದ್ದದ್ದು ಸಹ ಒಂದು ಆಪ್ ಗೆ ಬಹುಮತ ದೊರಕಲು ಕಾರಣವಿರಬಹುದೆನೋ. ಕೇಜ್ರಿವಾಲ್ ರಂತಹ ಅಭಿವೃದ್ದಿಯ ಚಿಂತನೆಕಾರಾರು ರಾಷ್ಟ್ರಿಯ ಪಕ್ಷಗಳಲ್ಲಿ ಇದ್ದರೇ ದ್ವಿಪಕ್ಷಗಳ ಪದ್ದತಿ ಅಡಿಯಲ್ಲಿ ದೇಶದಭಿವೃದ್ದಿಗೆ ಅನುಕೂಲವಾಗುತಿತ್ತೆನೋ. ಪ್ರಾದೇಶಿಕ ಪಕ್ಷಗಳು ಹೆಚ್ಚು ದಿನ ಬದುಕುವದಿಲ್ಲ ಅನ್ನುವದನ್ನ 70 ವರ್ಷದ ರಾಜಕೀಯ ಇತಿಹಾಸ ಭಾರತ ಕಂಡಿದೆ ಅನಿಸುತ್ತದೆ ಅಲ್ವಾ ಸರ್.