ನವದೆಹಲಿ: ಭಾರೀ ಪ್ರಮಾಣದ ಪ್ರತಿಕೂಲ ಹವಾಮಾನದ ಪರಿಣಾಮ ಕಳೆದ 45 ದಿನಗಳಲ್ಲಿ ಚಾರ್ ಧಾಮ್ ನ 119 ಯಾತ್ರಾರ್ಥಿಗಳು ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:MSP ಹೆಚ್ಚಳ ಮಾಡಿದ ಕೇಂದ್ರ; ಭತ್ತಕ್ಕೆ ಕ್ವಿಂಟಾಲ್‌ಗೆ 2,183 ರೂ.,ಹೆಸರು ಬೆಳೆಗೆ ಅತ್ಯಧಿಕ
ಏಪ್ರಿಲ್ 22ರಿಂದ ಉತ್ತರಾಖಂಡ್ ನಲ್ಲಿ ಆರಂಭಗೊಂಡಿರುವ ಚಾರ್ ಧಾಮ್ ಯಾತ್ರೆಯಲ್ಲಿ 45 ದಿನಗಳ ಕಾಲಾವಧಿಯಲ್ಲಿ ಪ್ರತಿಕೂಲ ಹವಾಮಾನ, ಅನಾರೋಗ್ಯದಿಂದಾಗಿ ಸಾವನ್ನಪ್ಪಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ,
ಚಾರ್ ಧಾಮ್ ಯಾತ್ರೆಗೆ ಪ್ರತಿವರ್ಷ ಸುಮಾರು 20 ಲಕ್ಷ ಯಾತ್ರಾರ್ಥಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದರಲ್ಲಿ 2.1 ಲಕ್ಷ ಮಂದಿಗೆ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗಿದೆ.
ಈ ಬಾರಿಯೂ ಹಿಮಾಲಯ ತಪ್ಪಲಿನಲ್ಲಿ ಮಳೆ ಮತ್ತು ಹಿಮಪಾತ ಮುಂದುವರಿದ ಪರಿಣಾಮ ಚಾರ್ ಧಾಮ್ ಯಾತ್ರೆಗೆ ಆಗಮಿಸಿದ್ದ ಯಾತ್ರಾರ್ಥಿಗಳು ಭಾರೀ ಶೀತ, ಹೃದಯ ಸ್ತಂಭನಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾದ ವರದಿ ಪ್ರಕಾರ, ಪಶ್ಚಿಮಬಂಗಾಳ, ಮಹಾರಾಷ್ಟ್ರ, ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಗುಜರಾತ್ ನಿಂದ ಕೇದಾರನಾಥ್ ಗೆ ಆಗಮಿಸಿದ್ದ 58 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ. ಒಟ್ಟು ಈವರೆಗೆ 119 ಯಾತ್ರಾರ್ಥಿಗಳು ಕೊನೆಯುಸಿರೆಳೆದಿರುವುದಾಗಿ ವರದಿ ವಿವರಿಸಿದೆ.