Advertisement

ರಾಯಚೂರಿನಲ್ಲಿ ಕೋವಿಡ್ ಕಂಟಕ: ಜಿಲ್ಲೆಯಲ್ಲಿ ಒಂದೇ ದಿನ 116 ಪ್ರಕರಣಗಳು ದೃಢ

03:44 PM Jul 16, 2020 | keerthan |

ರಾಯಚೂರು: ಜಿಲ್ಲೆಯಲ್ಲಿ ಇಷ್ಟು ದಿನ ನೂರರ ಒಳಗಿದ್ದ ಕೋವಿಡ್ -19 ಪಾಸಿಟಿವ್ ಪ್ರಕರಣಗಳ ಸಂಖ್ಯೆ ಇದೇ ಮೊದಲ ಬಾರಿಗೆ ಶತಕ ದಾಟಿದೆ. ಗುರುವಾರ ಒಂದೇ ದಿನ ಜಿಲ್ಲೆಯಲ್ಲಿ116 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿವೆ.

Advertisement

ಇಂದಿನ ಸೋಂಕು ಪ್ರಕರಣಗಳು ಪೈಕಿ ರಾಯಚೂರಿನಲ್ಲಲೇ 48 ಪ್ರಕರಣಗಳು ದೃಢಪಟ್ಟಿದೆ. ಮಾನ್ವಿಯಲ್ಲಿ 36, ದೇವದುರ್ಗದಲ್ಲಿ 9, ಸಿಂಧನೂರಿನಲ್ಲಿ 15, ಲಿಂಗಸೂಗೂರಿನಲ್ಲಿ 8 ಪ್ರಕರಣ ದೃಢಪಟ್ಟಿದೆ. ಇದರಿಂದ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 918 ಕ್ಕೇರಿದೆ.

ಪ್ರಾಥಮಿಕ ಸಂಪರ್ಕದಿಂದಲೇ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದೆ. ರಾಯಚೂರು, ಸಿಂಧನೂರಿನಲ್ಲಿ ಹೆಚ್ಚು ಪಾಸಿಟಿವ್ ಬಂದಿರುವ ಕಾರಣ ಎರಡು ನಗರಗಳನ್ನು ಲಾಕ್ ಡೌನ್ ಮಾಡಲಾಗಿದೆ.

ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಲಾಕ್ ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಸವಾಲು ಜಿಲ್ಲಾಡಳಿತಕ್ಕೆ ಎದುರಾಗಿದೆ. ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next