Advertisement
ಕಿನ್ನಿಗೋಳಿ: ಇಬ್ಬರಿಗೆ ಪಾಸಿಟಿವ್ಕಿನ್ನಿಗೋಳಿ: ದ.ಕ. ಜಿಲ್ಲಾಡಳಿತ, ಪ್ರಾಥಮಿಕ ಆರೋಗ್ಯ ಕೇಂದ್ರ ಕೆಮ್ರಾಲ್ ಹಾಗೂ ಕಿನ್ನಿಗೋಳಿ ಗ್ರಾ.ಪಂ. ಇದರ ಸಹಯೋಗದೊಂದಿಗೆ ಕೋವಿಡ್ -19 ಉಚಿತ ಪರೀಕ್ಷೆ ಶಿಬಿರವು ಕಿನ್ನಿಗೋಳಿಯ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರದಲ್ಲಿ ಜರಗಿತು. ಶಿಬಿರದಲ್ಲಿ ಒಟ್ಟು 19 ಮಂದಿ ಕೋವಿಡ್-19 ಟೆಸ್ಟ್‌ಗೆ ಒಳಗಾದರು. ಇದರಲ್ಲಿ ಇಬ್ಬರಿಗೆ ಪಾಸಿಟಿವ್ ಎಂದು ತಿಳಿದುಬಂದಿದೆ.
ಕೆಮ್ರಾಲ್ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರದೀಪ್ ಕುಮಾರ್, ಹಿರಿಯ ಪ್ರಯೋಗ ಶಾಲಾ ತಂತ್ರಜ್ಞೆ ಶಂಕರಿ, ಪಿಡಿಒ ಶ್ರೀ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಶ್ರೀಕಾಂತ ಸಿಂಪಿಗೈರಾ, ಸಂತೋಷ್ ಕುಮಾರ್, ಪೂರ್ಣಿಮಾ, ಕಿರಿಯ ಪ್ರಭಾರ ಆರೋಗ್ಯ ಸಹಾಯಕಿ ಸುಮಾ, ಆಶಾ ಕಾರ್ಯಕರ್ತೆಯರು, ನಾಗರಿಕರು, ಸಿಬಂದಿ ಉಪಸ್ಥಿತರಿದ್ದರು.
ಕಿನ್ನಿಗೋಳಿ: ದ.ಕ. ಜಿಲ್ಲಾಡಳಿತ, ಕಟೀಲಿನ ಪ್ರಾ.ಆರೋಗ್ಯ ಕೇಂದ್ರ ಹಾಗೂ ಮೆನ್ನಬೆಟ್ಟು ಗ್ರಾ.ಪಂ. ವತಿಯಿಂದ ಅ. 1 ರ ಗುರುವಾರ ಬೆಳಿಗ್ಗೆ 10.30ರಿಂದ ಮೆನ್ನಬೆಟ್ಟು ಗ್ರಾ.ಪಂ. ಸಭಾಭವನದಲ್ಲಿ ಕೋವಿಡ್ ತಪಾಸಣ ಶಿಬಿರ ಜರಗಲಿದೆ. ಉಳ್ಳಾಲ: 11 ಮಂದಿಗೆ ಸೋಂಕು ದೃಢ
ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬೋಳಿಯಾರ್, ಮಂಜನಾಡಿ, ಉಳ್ಳಾಲ, ಕೋಟೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮಂಗಳವಾರ ಕೋವಿಡ್ -19 ಉಚಿತ ಪರೀಕ್ಷಾ ಶಿಬಿರ ನಡೆಯಿತು. ರ್‍ಯಾಂಡಮ್ ಆ್ಯಂಟಿಜನ್ ಟೆಸ್ಟ್‌ನಲ್ಲಿ ಒಟ್ಟು 261 ಜನರು ಭಾಗವಹಿಸಿದ್ದು, ಇವರಲ್ಲಿ 11 ಮಂದಿಗೆ ಸೋಂಕು ದೃಡವಾಗಿದೆ.
Related Articles
Advertisement
ಮೂಡುಬಿದಿರೆ ತಾ.: 241 ಮಂದಿಗೆ ಕೋವಿಡ್ ಪರೀಕ್ಷೆಮೂಡುಬಿದಿರೆ: ಮಂಗಳವಾರ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ವ್ಯಾಪ್ತಿಯ 5 ಪ್ರಾ. ಆ. ಕೇಂದ್ರಗಳಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಒಟ್ಟು 241 ಮಂದಿಯನ್ನು ಕೋವಿಡ್-19 ಟೆಸ್ಟ್ಗೆ ಒಳಪಡಿಸಿದ್ದು 18 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಾ. ಆರೋಗ್ಯಾಧಿಕಾರಿ ಡಾ| ಸುಜಯ ಭಂಡಾರಿ ತಿಳಿಸಿದ್ದಾರೆ. ಇಂದು ಕೋವಿಡ್ ಪರೀಕ್ಷೆ
ಮೂಡುಬಿದಿರೆ ಸಮಾಜ ಮಂದಿರದ ಸ್ವರ್ಣ ಮಂದಿರದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ ಗಂ. 2ರ ವರೆಗೆ ಕೋವಿಡ್-19 ಉಚಿತ ಪರೀಕ್ಷೆಯ ಶಿಬಿರವನ್ನು ಆಯೋಜಿಸಲಾಗಿದೆ. ಸುರತ್ಕಲ್: 45 ಮಂದಿಗೆ ಪರೀಕ್ಷೆ
ಸುರತ್ಕಲ್: ಇಲ್ಲಿನ ಸೂರಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಂಗಳವಾರ ಕೋವಿಡ್ ತಪಾಸಣ ಶಿಬಿರ ಜರಗಿತು. 45 ಮಂದಿ ಕೋವಿಡ್-19ಪರೀಕ್ಷೆಗೊಳಾಗಿದ್ದಾರೆ. ಇದರಲ್ಲಿ 40 ಮಂದಿ ನೆಗೆಟಿವ್ ವರದಿ ಬಂದಿದ್ದು, 5 ಮಂದಿಯ ವರದಿಯನ್ನು ಹೆಚ್ಚಿನ ತಪಾಸಣೆಗೆ ವೆನ್ಲಾಕ್‌ಗೆ ಕಳುಹಿಸಲಾಗಿದೆ.