ಜೆಪಿ ನಗರ ನಿವಾಸದಿಂದಲೇ ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿಯುವ ಯೋಚನೆ ಬಿಟ್ಟು ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸುವ ಸಂಕಲ್ಪ ತೊಡಿ ಎಂದು ಹೇಳಿದರು. ಸಮೀಕ್ಷೆಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ರಾಜ್ಯದ ಜನರ ನಾಡಿ ಮಿಡಿತ ನನಗೆ ಗೊತ್ತಿದೆ. ನಿಮ್ಮಷ್ಟಕ್ಕೆ ನೀವು ಬೂತ್ ಮಟ್ಟದಲ್ಲಿ ಪಕ್ಷ ಗಟ್ಟಿಗೊಳಿಸಿ. ಪ್ರತಿ ಬೂತ್‌ನಲ್ಲೂ ಸಕ್ರಿಯ ಕಾರ್ಯಕರ್ತರ ಪಡೆ ರಚಿಸಿ ಎಂದು ತಿಳಿಸಿದರು.
Advertisement
ನವೆಂಬರ್‌ನಿಂದ ಸಕ್ರಿಯ: ದೀಪಾವಳಿ ನಂತರ ನವೆಂಬರ್ 1ರಂದು ರಾಜ್ಯೋತ್ಸವ ದಿನದಿಂದ ಪೂರ್ಣ ಪ್ರಮಾಣದಲ್ಲಿ ನಾನು ಪಕ್ಷದ ಚಟುವಟಿಕೆಗಳಲ್ಲಿ ತೊಡಗುತ್ತೇನೆ. ವಿಧಾನಸಭೆ ಚುನಾವಣೆ ಮುಗಿಯುವವರೆಗೂ ವಿಶ್ರಾಂತಿ ಮಾತಿಲ್ಲ.ನೀವೂ ಸಹ ನಿಮ್ಮ ಕ್ಷೇತ್ರಕ್ಕೆ ಮಾತ್ರ ಸಿಮೀತವಾಗದೆ ಅಕ್ಕ -ಪಕ್ಕದ ಕ್ಷೇತ್ರ ಸೇರಿ ತಮ್ಮ ಪ್ರಭಾವ ಇರುವ ಕಡೆ ಪಕ್ಷ
ಸಂಘಟಿಸುವ ಕೆಲಸ ಮಾಡಿ ಎಂದು ತಿಳಿಸಿದರು. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ಹಾರೈಕೆಯಿಂದ ಯಶಸ್ವಿ ಶಸOಉ ಚಿಕಿತ್ಸೆಯಾಗಿ ನನ್ನ ಆರೋಗ್ಯ ಚೇತರಿಕೆಯಾಗುತ್ತಿದೆ. ಸ್ವಲ್ಪ ದಿನಗಳ ಕಾಲದ ವಿಶ್ರಾಂತಿ ನಂತರ ನಾನು ನಿಮ್ಮ ಜತೆಗೂಡುತ್ತೇನೆ. ಪಕ್ಷವನ್ನು ಅಧಿಕಾರಕ್ಕೆ ತರುವುದೇ ನಮ್ಮ ಗುರಿಯಾಗಬೇಕು ಎಂದರು.