ಹೊಸದಿಲ್ಲಿ: ತುರ್ತು ಸನ್ನಿವೇಶದಲ್ಲಿ ಸಹಾಯಕ್ಕಾಗಿ ಪೊಲೀಸರಿಗೆ ಸಂದೇಶ ಕಳುಹಿಸಲು ಅನುಕೂಲ ಒದಗಿಸುವ 112 ತುರ್ತು ಪ್ರತಿಕ್ರಿಯೆ ಸೇವೆಯನ್ನು ಫೆ. 19ರಂದು ಆರಂಭಿಸಲಾಗುತ್ತಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಈ ಸೇವೆಯನ್ನು ಕೆಲವು ರಾಜ್ಯಗಳಲ್ಲಿ ಆರಂಭಿಸಲಿದ್ದು, ಒಂದು ನಿರ್ದಿಷ್ಟ ಬಟನ್ ಒತ್ತುವ ಮೂಲಕ ಸಮೀಪದ ಪೊಲೀಸ್ ಕಂಟ್ರೋಲ್ ರೂಮ್‌ಗೆ ಸ್ಥಳ ಮಾಹಿತಿಯ ಸಮೇತ ಸಂದೇಶ ಕಳುಹಿಸಬಹುದಾಗಿರುತ್ತದೆ. ಇದಕ್ಕೆ ನಿರ್ಭಯಾ ನಿಧಿಯಿಂದ 321 ಕೋಟಿ ರೂ. ಮೀಸಲಿಡಲಾಗಿದೆ. ತುರ್ತು ಸಂದೇಶ ಕಳುಹಿಸಲು 112 ಸಂಖ್ಯೆಯನ್ನು ಡಯಲ್ ಮಾಡಬಹುದು ಅಥವಾ 112 ಇಂಡಿಯಾ ಅಪ್ಲಿಕೇಶನ್ ಬಳಸಬಹುದು ಅಥವಾ ಮೊಬೈಲ್ ಫೋನ್‌ಗಳಲ್ಲಿರುವ ನಿಗದಿತ ಬಟನ್ ಅನ್ನು ಬಳಸಬಹುದಾಗಿದೆ. ಈ ಮೂಲಕ ಪೊಲೀಸ್, ಅಗ್ನಿ ಶಾಮಕ ಸೇವೆ, ಆರೋಗ್ಯ ಸೇವೆ ಮತ್ತು ಇತರ ಸಹಾಯವಾಣಿಗೂ ಸಂದೇಶ ಕಳುಹಿಸಬಹುದಾಗಿದೆ. ಎಲ್ಲ ರಾಜ್ಯಗಳಲ್ಲೂ ಕೇಂದ್ರೀಯ ತುರ್ತು ಪ್ರತಿಕ್ರಿಯೆ ಕೇಂದ್ರ ಇರಲಿದ್ದು, ಜಿಲ್ಲಾ ಮಟ್ಟದಲ್ಲೂ ಸೆಂಟರ್‌ಗಳನ್ನು ತೆರೆಯಲಾಗುತ್ತದೆ.