ಉಡುಪಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿರುವ 1,111 ಮತಗಟ್ಟೆ ಕೇಂದ್ರಗಳು ಮತದಾನಕ್ಕೆ ಸಜ್ಜಾಗಿವೆ. ಮಂಗಳವಾರ ಬೈಂದೂರು ವಿಧಾನ ಸಭಾ ಕ್ಷೇತ್ರದ ಬೈಂದೂರು ಪ.ಪೂ.ಕಾಲೇಜು, ಕುಂದಾಪುರದ ಭಂಡಾರ್‌ಕಾರ್ಸ್ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜು, ಉಡುಪಿಯ ಸೈಂಟ್ ಸಿಸಿಲಿ ಎಜುಕೇಶನ್ ಟ್ರಸ್ಟ್ ಬ್ರಹ್ಮಗಿರಿ, ಕಾಪುವಿನ ದಂಡತೀರ್ಥ ಪಿಯು ಕಾಲೇಜು ಉಳಿಯಾರಗೋಳಿ, ಕಾರ್ಕಳದ ಮಂಜುನಾಥ ಪೈ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ನಡೆಯಿತು. ಆಯಾ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಿಗೆ ಸಿಬಂದಿ ಬ್ಯಾಲೆಟ್ ಯುನಿಟ್, ಕಂಟ್ರೋಲ್ ಯುನಿಟ್, ವಿವಿ ಪ್ಯಾಟ್‌ಗಳೊಂದಿಗೆ ಆಯಾ ಮತಗಟ್ಟೆಗಳಿಗೆ ತೆರಳಿದರು. ಮಸ್ಟರಿಂಗ್ ಕೇಂದ್ರದಿಂದ ಮತಗಟ್ಟೆಗೆ ತೆರಳಲು ಸಿಬಂದಿಗೆ ವಾಹನ ವ್ಯವಸ್ಥೆ ಕಲ್ಪಿಸ ಲಾಯಿತು. ಚಹಾ ತಿಂಡಿ, ಊಟೋಪ ಚಾರದ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.
ಬಿಗು ಭದ್ರತೆ
ಮತದಾನ ನಡೆಯುವ ಮತಗಟ್ಟೆ ಕೇಂದ್ರದ ಸುತ್ತಲೂ ಬಿಗು ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಮತದಾನ ಪೂರ್ಣಗೊಳ್ಳುವವರೆಗೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ಅಧಿಕಾರಿಗಳ ಭೇಟಿ
ಮಂಗಳವಾರ ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಚುನಾವಣಾ ವೀಕ್ಷ ಕರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚುನಾವಣಾಧಿಕಾರಿ ಗಳು ಭೇಟಿ ನೀಡಿ ಕಾರ್ಯವೈಖರಿ ಯನ್ನು ಪರಿಶೀಲಿಸಿದರು. ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿ.ಪಂ. ಸಿಇಒ ಪ್ರಸನ್ನ ಎಚ್. ಅವರು ಬೈಂದೂರು, ಕುಂದಾಪುರ ಸಹಿತ ಜಿಲ್ಲೆಯ ವಿವಿಧ ಮಸ್ಟರಿಂಗ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಸಿಬಂದಿಗೆ ಅಗತ್ಯ ಮಾರ್ಗ ದರ್ಶನ ನೀಡಿದರು.
ಮತಗಟ್ಟೆಗಳಿಗೆ ಸಿಂಗಾರ
ಜಿಲ್ಲೆಯಲ್ಲಿ ಒಟ್ಟು 25 ಸಖೀ ಮತಗಟ್ಟೆ, 5 ಪಿಡಬ್ಲೂಡಿ, 5 ಯಂಗ್ ವೋಟರ್, 5 ವಿಷಯಾಧಾರಿತ ಹಾಗೂ 1 ಎಥಿ°ಕ್ ಮತ ಗಟ್ಟೆ ಮಾಡಲಾಗಿದೆ. ಇಲ್ಲಿ ಎಲ್ಲ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು, ವಿವಿಧ ಬಗೆಯ ಅಲಂಕಾರ ಮಾಡಲಾಗಿದೆ.
Related Articles
ಚುನಾವಣೆ: ಅಧಿಕಾರಿಗಳಿಂದ ಅಂತಿಮ ಸಿದ್ಧತೆ ಪರಿಶೀಲನೆ
ಜಿಲ್ಲಾದ್ಯಂತ 1336 ಬ್ಯಾಲೆಟ್ ಯುನಿಟ್, 1336 ಕಂಟ್ರೋಲ್ ಯುನಿಟ್ ಹಾಗೂ 1446 ವಿವಿಪ್ಯಾಟ್ ವ್ಯವಸ್ಥೆ ಮಾಡಲಾಗಿದೆ. 176 ಬಸ್, 36 ಮಿನಿ ಬಸ್, 54 ಟೆಂಪೋ ಟ್ರಾವೆಲರ್/ ಮ್ಯಾಕ್ಸಿಕ್ಯಾಬ್/ ವ್ಯಾನ್, 68 ಜೀಪ್ ವ್ಯವಸ್ಥೆ
ಮಾಡಲಾಗಿದೆ. ಆಯಾ ಮಾಸ್ಟರಿಂಗ್ ಕೇಂದ್ರದಿಂದ ಈ ವಾಹನಗಳ ಮೂಲಕ ಅಧಿಕಾರಿ, ಸಿಬಂದಿಯನ್ನು ಮತಯಂತ್ರದೊಂದಿಗೆ ಮತಗಟ್ಟೆಗೆ ಕರೆದೊಯ್ದವು.