Advertisement
ಜೆಮ್ಶೆಡ್ ಪುರದ ಟಾಟಾ ಸ್ಟೀಲ್ ಪ್ಲ್ಯಾಂಟ್ ನಲ್ಲಿರುವ 27 ವರ್ಷ ಹಳೆಯ 110 ಮೀಟರ್ ಎತ್ತರದ ಚಿಮಣಿಯನ್ನು ಒಳಸ್ಫೋಟದ ವಿಧಾನದ ಮೂಲಕ ಸ್ಫೋಟಗೊಳಿಸಿ ಕೆಡವಲಾಗಿದೆ. ಇದು ಪರಿಸರ ಸ್ನೇಹಿ ಮತ್ತು ಸಮಯದ ಉಳಿತಾಯಕ್ಕೆ ಹೆಚ್ಚು ಪೂರಕವಾಗಿದೆ. ಕೇವಲ 11 ಸೆಕೆಂಡ್ಸ್ ಗಳಲ್ಲಿ ಬೃಹತ್ ಎತ್ತರದ ಚಿಮಣಿಯನ್ನು ಕೆಡವಿ ಹಾಕಲಾಯಿತು.
ಜೆ ಡೆಮೊಲಿಷನ್ ಕಂಪನಿ ಬೆಂಬಲಿತ ಎಡಿಫೈಸ್ ಎಂಜಿನಿಯರಿಂಗ್ ಇಂಡಿಯಾಕ್ಕೆ ಚಿಮಣಿಯನ್ನು ಧ್ವಂಸಗೊಳಿಸುವ ಕೆಲಸವನ್ನು ವಹಿಸಿಕೊಡಲಾಗಿತ್ತು. ಇದೇ ಕಂಪನಿ ಆಗಸ್ಟ್ 28ರಂದು ನೋಯ್ಡಾದಲ್ಲಿನ ಅವಳಿ ಟವರ್ ಅನ್ನು ಕೆಲವೇ ಸೆಕೆಂಡ್ಸ್ ಗಳಲ್ಲಿ ಧ್ವಂಸಗೊಳಿಸಿತ್ತು.