Advertisement

Sabarimala; ದರ್ಶನಕ್ಕೆ ಸಾಲಿನಲ್ಲಿ ನಿಂತಿದ್ದ 11 ವರ್ಷದ ಬಾಲಕಿ ಕುಸಿದುಬಿದ್ದು ನಿಧನ

09:25 AM Dec 11, 2023 | Team Udayavani |

ಪಟ್ಟಣಂತಿಟ್ಟ: ಕೇರಳದ ಶಬರಿಮಲೆ ದೇಗುಲದಲ್ಲಿ ದರ್ಶನಕ್ಕಾಗಿ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿದ್ದ ತಮಿಳುನಾಡಿನ 11 ವರ್ಷದ ಬಾಲಕಿ ಮೃತಪಟ್ಟ ಘಟನೆ ಶನಿವಾರ ನಡೆದಿದೆ.

Advertisement

ಮೂರು ವರ್ಷದಿಂದಲೂ ಹೃದಯ ಸಂಬಂಧಿ ರೋಗದ ವಿರುದ್ಧ ಹೋರಾಡುತ್ತಿದ್ದ ಬಾಲಕಿ ಯಾತ್ರಾರ್ಥಿಗಳ ಭಾರಿ ನೂಕುನುಗ್ಗಲಿನ ನಡುವೆ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ.

ಹೆಸರಾಂತ ಶಬರಿಮಲೆ ದೇವಸ್ಥಾನಕ್ಕೆ ಪ್ರಸ್ತುತ ಭಕ್ತಾದಿಗಳ ದಂಡು ಹರಿದು ಬರುತ್ತಿದೆ. ಕೆಲವು ಯಾತ್ರಾರ್ಥಿಗಳು 18 ಗಂಟೆಗಳವರೆಗೆ ದರ್ಶನಕ್ಕಾಗಿ ಕಾಯುತ್ತಿದ್ದರು, ಅನೇಕರು ಸರತಿ ವ್ಯವಸ್ಥೆಯನ್ನು ಉಲ್ಲಂಘಿಸಿದ್ದರಿಂದ ಅವ್ಯವಸ್ಥೆಗೆ ಕಾರಣವಾಯಿತು.

ದೀರ್ಘ ಸರತಿ ಸಾಲಿನ ಕಾರಣದಿಂದಾಗಿ, ಯಾತ್ರಿಕರು ಬ್ಯಾರಿಕೇಡ್‌ ಗಳ ಮೇಲೆ ಹಾರಿ, ಪವಿತ್ರ ಮೆಟ್ಟಿಲುಗಳ ಬಳಿ ನೂಕುನುಗ್ಗಲು ಉಂಟುಮಾಡಿದರು. ಹೆಚ್ಚುತ್ತಿರುವ ಜನಸಂದಣಿಯ ಕಾರಣದಿಂದಾಗಿ, ಕೇರಳ ದೇವಸ್ವಂ ಸಚಿವ ಕೆ ರಾಧಾಕೃಷ್ಣನ್ ಮತ್ತು ತಿರುವಾಂಕೂರ್ ದೇವಸ್ವಂ ಮಂಡಳಿ ಅಧ್ಯಕ್ಷ ಪಿ ಎಸ್ ಪ್ರಶಾಂತ್ ತುರ್ತು ಸಭೆಯನ್ನು ಕರೆದಿದ್ದಾರೆ.

ಇದನ್ನೂ ಓದಿ:Baradi Kambala: 3 ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಕೃತಿಕ್ ಗೌಡ; ಇಲ್ಲಿದೆ ಫಲಿತಾಂಶ ಪಟ್ಟಿ

Advertisement

ವರ್ಚುವಲ್ ಕ್ಯೂ ಬುಕಿಂಗ್ ಮಿತಿಯನ್ನು 10,000 ರಷ್ಟು ಕಡಿಮೆ ಮಾಡಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದಿನಕ್ಕೆ 90 ಸಾವಿರವಿದ್ದ ಗರಿಷ್ಠ ಮಿತಿಯನ್ನು ದಿನಕ್ಕೆ 80 ಸಾವಿರಕ್ಕೆ ಇಳಿಸಲಾಗಿದೆ.

ಅಲ್ಲದೆ ದರ್ಶನದ ಅವಧಿಯನ್ನು ಒಂದು ತಾಸು ಹೆಚ್ಚಿಸುವ ತೀರ್ಮಾನವನ್ನು ಟ್ರಾವಂಕೂರು ದೇವಸ್ವಂ ಬೋರ್ಡ್‌ ರವಿವಾರ ತೆಗೆದುಕೊಂಡಿದೆ. ಇದುವರೆಗೆ ಅಪರಾಹ್ನ 4ರಿಂದ ರಾತ್ರಿ 11 ಗಂಟೆಯ ವರೆಗೆ ದರ್ಶನಕ್ಕೆ ಅವಕಾಶ ಇತ್ತು, ಇದನ್ನು ಅಪರಾಹ್ನ 3ರಿಂದಲೇ ಆರಂಭಿಸಲು ತೀರ್ಮಾನಿಸಲಾಗಿದೆ ಎಂದು ಪಟ್ಟನಂತಿಟ್ಟ ಜಿಲ್ಲಾಡಳಿತ ತಿಳಿಸಿದೆ.

ದರ್ಶನಕ್ಕಾಗಿ ಸರತಿಯಲ್ಲಿ ನಿಂತಿರುವ ಭಕ್ತರ ಅನುಕೂಲಕ್ಕಾಗಿ ಕುಡಿಯುವ ನೀರು ಮತ್ತು ಬಿಸ್ಕತ್ತುಗಳನ್ನು ವಿತರಿಸಲಾಗುತ್ತಿದೆ ಎಂದೂ ಅದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next