Advertisement

ಉಳ್ಳಾಲ: ತಲೆನೋವು, ಜ್ವರ; 6ನೇ ತರಗತಿ ವಿದ್ಯಾರ್ಥಿ ಮೃತ್ಯು, ಮೆದುಳು ಜ್ವರ ಶಂಕೆ

09:52 PM Dec 29, 2022 | Team Udayavani |

ಉಳ್ಳಾಲ: ಕಳೆದೆರಡು ದಿವಸಗಳಿಂದ ತಲೆನೋವು,ಜ್ವರದಿಂದ ಬಳಲುತ್ತಿದ್ದ ಉಚ್ಚಿಲ ಬೋವಿ ಆಂಗ್ಲ ಮಾಧ್ಯಮ ಶಾಲೆಯ ಆರನೇ ತರಗತಿ ವಿದ್ಯಾರ್ಥಿ ಅಶ್ವಿ‌ತ್‌(11)  ಸಾವನ್ನಪ್ಪಿದ್ದು,ಬಾಲಕ ಮೆದುಳು ಜ್ವರದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

Advertisement

ಕೊಲ್ಯ ಸಾರಸ್ವತ ಕಾಲನಿ ನಿವಾಸಿಯಾಗಿರುವ ಅಶ್ವಿ‌ತ್‌ ತಾಯಿಯೊಂದಿಗೆ ವಾಸವಾಗಿದ್ದು, ಶಾಲೆಯಲ್ಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಶುಕ್ರವಾರ ಶಾಲೆಯ ವಾರ್ಷಿಕೋತ್ಸವದಲ್ಲಿ ನಡೆಯಬೇಕಾಗಿದ್ದ ಪ್ರಹಸನದಲ್ಲಿ ಪಾತ್ರ ಮಾಡಲು ತಯಾರಿ ನಡೆಸಿದ್ದ ಬುಧವಾರ ಅನಾರೋಗ್ಯದ ಹಿನ್ನಲೆಯಲ್ಲಿ ಶಾಲೆಗೆ ಗೈರು ಹಾಜರಾಗಿದ್ದು, ಗುರುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಮೃತ ಅಶ್ವಿ‌ತ್‌ ತಂದೆ ಅಪಘಾತವೊಂದರಲ್ಲಿ ಮೃತಪಟ್ಟಿದ್ದು ಕಳೆದ ಮೂರು ತಿಂಗಳಿನಿಂದ ಕೊಲ್ಯ ಸಾರಸ್ವತ ಕಾಲನಿಯಲ್ಲಿ ವಾಸವಾಗಿದ್ದ . ಅಶ್ವಿ‌ತ್‌ಗೆ ಮಿದುಳು ಜ್ವರದ ಲಕ್ಷಣ ಇತ್ತೆಂದು ಹೇಳಲಾಗಿದೆ.ಆತನಿಗೆ ಮಿದುಳು ಜ್ವರದ ವ್ಯಾಕ್ಸಿನೇಷನ್‌ ಆಗಿದೆಯೇ ಎಂದು ಇನ್ನೂ ಧೃಡಪಟ್ಟಿಲ್ಲ.ಈ ಬಗ್ಗೆ ತಜ್ಞ ವೈದ್ಯರು ಪರಿಶೀಲನೆ ನಡೆಸುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next