Advertisement

ಬೆಳಗಾವಿಯಲ್ಲಿ ಒಂದೇ ದಿನ 11 ಮಂದಿ ಪಾಸಿಟಿವ್: ಹಿರೇಬಾಗೇವಾಡಿಯಲ್ಲಿ 10 ಮಂದಿಗೆ ಸೋಂಕು

08:23 AM May 09, 2020 | keerthan |

ಬೆಳಗಾವಿ: ಹಿರೇಬಾಗೇವಾಡಿ ಗ್ರಾಮದಲ್ಲಿ ಶುಕ್ರವಾರ ಒಂದೇ ದಿನ 10 ಪ್ರಕರಣಗಳು ದಾಖಲಾಗುವ ಮೂಲಕ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದು, ಗ್ರಾಮದಲ್ಲಿ ಒಟ್ಟು 47 ಪಾಸಿಟಿವ್ ಕೇಸುಗಳು ಬಂದಿವೆ. ಕುಡಚಿಯಲ್ಲಿ ಒಂದು ಕೇಸು ದಾಖಲಾಗಿದೆ.

Advertisement

ಜಿಲ್ಲೆಯಲ್ಲಿ ಒಂದೇ ದಿನ 11 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ಹೆಲ್ತ್ ಬುಲೆಟಿನ್ ದೃಢಪಡಿಸಿದೆ. ಈ ಮೂಲಕ ಬೆಳಗಾವಿ ಪಾಲಿಗೆ ಶುಕ್ರವಾರ ಅಶುಭವಾಗಿವೆ.  ಹಿರೇಬಾಗೇವಾಡಿಯಲ್ಲಿ ಇದೀಗ ಕೋವಿಡ್ ಮನೆ ಮಾಡಿದೆ.

ದೆಹಲಿಯ ನಿಜಾಮುದ್ದಿನ್‌ ತಬ್ಲೀಘಿ ಜಮಾತ್ ಮರ್ಕಜ್ ಗೆ ಹೋಗಿ ಬಂದಿದ್ದ ವ್ಯಕ್ತಿಯ ಸಂಪರ್ಕದಿಂದ ಇಡೀ ಗ್ರಾಮ ಈಗ ತೊಂದರೆ ಅನುಭವಿಸುವಂತಾಗಿದೆ. ಹಿರೇಬಾಗೇವಾಡಿ ಗ್ರಾಮದ ‌ಪಿ.128 ದ್ವಿತೀಯ ಸಂಪರ್ಕಕ್ಕೆ ಬಂದ ಹತ್ತು‌ ಜನರಿಗೆ ಕೋವಿಡ್-19 ಸೋಂಕು ತಗುಲಿದೆ.

ರಾಜ್ಯದಲ್ಲಿ ಇಂದು ಒಟ್ಟು 45 ಕೋವಿಡ್-19 ಸೋಂಕು ಪ್ರಕರಣಗಳು ದೃಢವಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 750 ತಲುಪಿದೆ. ಇವರಲ್ಲಿ 30 ಜನರು ಸಾವನ್ನಪ್ಪಿದ್ದಾರೆ. 371 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next