Advertisement
ಆರೋಗ್ಯ ಇಲಾಖೆ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿ ಗ್ರಾಮದ ಕ್ವಾರಂಟೈನ ಕೇಂದ್ರಕ್ಕೆ ತೆರಳಿ ಕ್ವಾರಂಟೈನ್ ಕೇಂದ್ರದಲ್ಲಿ ಜಿಲ್ಲಾಡಳಿತದ ನಿಗಾದಲ್ಲಿರುವ ಇಬ್ಬರು ಮಕ್ಕಳು, ಒಬ್ಬಳು ಗರ್ಭಿಣಿ, ಆರು ಜನ ಯುವತಿಯರು ಸೇರಿದಂತೆ 11 ಜನರ ಗಂಟಲು ದ್ರವ ಸಂಗ್ರಹಿಸಿದರು. ಕ್ವಾರಂಟೈನ್‌ಗೆ ಒಳಪಟ್ಟ ಎಲ್ಲರಿಗೂ ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಹಾಗೂ ಸಾನಿಟೈಜರ್ ಬಳಕೆ ಮಾಡಬೇಕು. ಸ್ನಾನ ಮಾಡಲು ತೆರಳಿದಾಗ ನಳಕ್ಕೆ ಕಡ್ಡಾಯವಾಗಿ ಸೈನಿಟೈಜರ್ ಹಚ್ಚಬೇಕು. ಒಂದೇ ಕುಟುಂಬದ ಸದಸ್ಯರು ಇದ್ದರೂ ಆರೋಗ್ಯ ಇಲಾಖೆಯ ಎಲ್ಲ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜ್ವರ, ಕೆಮ್ಮು, ಶೀತದಂಥ ರೋಗ ಲಕ್ಷಗಳು ಕಂಡು ಬಂದಲ್ಲಿ ತಕ್ಷಣವೇ ಕ್ವಾರಂಟೈನ್ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಗರ್ಭಿಣಿಯರು, ಮಕ್ಕಳಿಗೆ ಯಾವುದೇ ಆರೋಗ್ಯದ ಸಮಸ್ಯೆ ಕಂಡು ಬಂದಲ್ಲಿ ನಿರ್ಲಕ್ಷ ಮಾಡದೇ ಮೇಲಧಿ ಕಾರಿಗಳ ಗಮನಕ್ಕೆ ತರಬೇಕು ಎಂದು ಘೋಣಸಗಿ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಜಮಾಲುದ್ದಿನ ಮುಲ್ಲಾ ಸೂಚಿಸಿದರು.
Advertisement
ಕ್ವಾರಂಟೈನ್ ಕೇಂದ್ರದಲ್ಲಿನ 11 ಜನರ ಗಂಟಲು ದ್ರವ ಸಂಗ್ರಹ
05:58 AM May 25, 2020 | Suhan S |
Advertisement
Udayavani is now on Telegram. Click here to join our channel and stay updated with the latest news.