Advertisement

ಕಲಬುರಗಿ: 24 ಗಂಟೆಯಲ್ಲಿ 11 ಜನ ಬಲಿ

06:18 PM Apr 23, 2021 | Team Udayavani |

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಮರಣ ಮೃದಂಗ ಬಾರಿಸುತ್ತಿದೆ. ಇತ್ತೀಚೆಗೆ ಎರಡ್ಮೂರು ಗಂಟೆಗೊಂದು ಸಾವುಗಳು ದಾಖಲಾಗುತ್ತಿದೆ. ಬುಧವಾರವಷ್ಟೇ ಎಂಟು ಸೋಂಕಿತರು ಬಲಿಯಾಗಿದ್ದರೆ, ಗುರುವಾರ 11 ಮಂದಿ ಮಹಾಮಾರಿ ರೋಗದಿಂದ
ಮೃತಪಟ್ಟಿದ್ದಾರೆ.

Advertisement

ಕೊರೊನಾ ಮೊದಲ ಅಲೆಯಲ್ಲಿ 24 ಗಂಟೆಯಲ್ಲಿ ಗರಿಷ್ಠ 10 ಸೋಂಕಿತರ ಸಾವು ದಾಖಲಾಗಿತ್ತು. ಆದರೆ, ಕಳೆದ 24 ಗಂಟೆಯೊಳಗೆ ಮೂವರು ಮಹಿಳೆಯರು ಸೇರಿದಂತೆ 11 ಜನರನ್ನು ಮಹಾಮಾರಿ ಸೋಂಕು ಬಲಿ ಪಡೆದಿದೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮೃತರ ಸಂಖ್ಯೆ 410ಕ್ಕೆ ಏರಿಕೆಯಾಗಿದೆ.

ಮೃತರ ವಿವರ: ಗುರುವಾರ ಹೊಸದಾಗಿ 659 ಮಂದಿಗೆ ಕೊರೊನಾ ದೃಢಪಟ್ಟಿದೆ. ಇದರಲ್ಲಿ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸೇಡಂ ತಾಲೂಕಿನ ಮಳಖೇಡ ಗ್ರಾಮದ 46 ವರ್ಷದ ವ್ಯಕ್ತಿ, ಕಲಬುರಗಿಯ ಬಿದ್ದಾಪುರ ಕಾಲೋನಿಯ 40 ವರ್ಷದ ವ್ಯಕ್ತಿ ಮತ್ತು ಕಲಬುರಗಿಯ ಸುವರ್ಣ ನಗರದ 83 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಅದೇ ರೀತಿ ತೀವ್ರ ಉಸಿರಾಟದ ಸಮಸ್ಯೆ ಜತೆಗೆ ಅಧಿಕ ರಕ್ತದೊತ್ತಡ ಹಾಗೂ ಮೆದುಳಿಗೆ ರಕ್ತಪೂರೈಕೆ ಸಮಸ್ಯೆಯಿಂದ ಬಳಲುತ್ತಿದ್ದ ಚಿತ್ತಾಪುರ ತಾಲೂಕಿನ ರಾಜೋಳ ಗ್ರಾಮದ 72 ವರ್ಷದ ವೃದ್ಧ, ತೀವ್ರ ಉಸಿರಾಟದ ತೊಂದರೆ ಮತ್ತು ಸಕ್ಕರೆ ಕಾಯಿಲೆದಿಂದ ಬಳಲುತ್ತಿದ್ದ ಕಲಬುರಗಿಯ ಮೆಕ್ಕಾ ಕಾಲೋನಿಯ 72 ವರ್ಷದ ವೃದ್ಧ ಮತ್ತು ಆಳಂದ ಪಟ್ಟಣದ ಹತ್ಯಾನ ಗಲ್ಲಿಯ 72 ವರ್ಷದ ವೃದ್ಧೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.

ಅಲ್ಲದೇ, ತೀವ್ರ ಉಸಿರಾಟದ ತೊಂದರೆ, ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಯಿಂದ ನರಳುತ್ತಿದ್ದ ಕಲಬುರಗಿಯ ವಿಠuಲ ನಗರದ 73 ವರ್ಷದ ವೃದ್ಧ, ಆದರ್ಶ ನಗರದ 52 ವರ್ಷದ ವ್ಯಕ್ತಿ, ರಾಘವೇಂದ್ರ ಕಾಲೋನಿಯ 81 ವರ್ಷದ ವೃದ್ಧ, ಅಫಜಲಪುರ ತಾಲೂಕಿನ ಸೊನ್ನ ಗ್ರಾಮದ 54 ವರ್ಷದ ಮಹಿಳೆ ಹಾಗೂ ಶಹಾಬಜಾರ ಪ್ರದೇಶದ ಕಬಾಡಗಲ್ಲಿಯ 57 ವರ್ಷದ ಮಹಿಳೆ ಮಹಾಮಾರಿ ರೋಗದಿಂದ ಮೃತಪಟ್ಟಿದ್ದಾರೆ.

Advertisement

ಸಕ್ರಿಯ ರೋಗಿಗಳು ಹೆಚ್ಚಳ: ದಿನದಿಂದ ದಿನ ಕೊರೊನಾ ಪಾಸಿಟಿವ್‌ ಕೇಸ್‌ ಹೆಚ್ಚಿತ್ತಿರುವುದರಿಂದ ಸಕ್ರಿಯ ರೋಗಿಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ಇದರಿಂದ ಕೋವಿಡ್‌ ಆಸ್ಪತ್ರೆಗಳು ತುಂಬಿ ತುಳುಕುವಂತೆ ಆಗಿದೆ. ಗುರುವಾರ ಹೊಸದಾಗಿ 659 ಪಾಸಿಟಿವ್‌ ಪ್ರಕರಣಗಳೊಂದಿಗೆ ಒಟ್ಟಾರೆ
ಸೋಂಕಿತರ ಸಂಖ್ಯೆ 32295ಕ್ಕೆ ಏರಿಕೆಯಾಗಿದೆ. ಇದೇ ವೇಳೆ 288 ಜನ ಸೋಂಕಿತರು ಗುಣಮುಖ ರಾಗಿದ್ದಾರೆ. ಇದರೊಂದಿಗೆ ಈವರೆಗೆ 26184 ಮಂದಿ ಚೇತರಿಸಿಕೊಂಡಂತೆ ಆಗಿದೆ. ಜಿಲ್ಲಾದ್ಯಂತ 5701 ಜನ ಸಕ್ರಿಯ ಕೊರೊನಾ ರೋಗಿಗಳು ಇದ್ದಾರೆ. ಇದರಲ್ಲಿ 810 ಮಂದಿ ಕೊರೊನಾ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4768 ಜನ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿ ಇದ್ದು, 30 ಮಂದಿ ಕೋವಿಡ್‌ ಕೇರ್‌ಸೆಂಟರ್‌ಗಳಲ್ಲಿ ದಾಖಲಾಗಿದ್ದಾರೆ. ಇನ್ನೂ, 4144 ಕೊರೊನಾ ಮಾದರಿ ಪರೀಕ್ಷಾ ವರದಿಗಳು ಬಾಕಿ ಉಳಿದಿವೆ.

Advertisement

Udayavani is now on Telegram. Click here to join our channel and stay updated with the latest news.

Next