Advertisement
ಜು.31ರಿಂದ ಜಾರಿ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರ ಸಭೆಯ ತೀರ್ಮಾನದಂತೆ ಅವಧಿ ವಿಸ್ತರಿಸಿ ನೀಡಿ ಕಲ್ಲುಗಣಿ ಗುತ್ತಿಗೆಗೆ ಸಂಬಂಧಿಸಿದಂತೆ ಸಂಬಂಧ ಪಟ್ಟ ಪ್ರಾಧಿಕಾರದಿಂದ ಇದುವರೆಗೆ ಪರಿಸರ ವಿಮೋಚನಾ ಪತ್ರ ಪಡೆದು ಕಚೇರಿಗೆ ಹಾಜರುಪಡಿಸದೆ ಇರುವ ಪಾಂಡವಪುರ ತಾಲೂಕು ಬೇಬಿಬೆಟ್ಟದ ಕಾವಲು ಗ್ರಾಮ ವ್ಯಾಪ್ತಿಯಲ್ಲಿ 11 ಕಲ್ಲುಗಣಿ ಗುತ್ತಿಗೆಗಳನ್ನು ರದ್ದುಪಡಿಸಲು ನಿರ್ಣಯಿಸಲಾಗಿದೆ. ಇದು ಜು.31ರಿಂದ ರದ್ದು ಜಾರಿಗೆ ಬಂದಿದೆ ಎಂದು ಹೇಳಿದ್ದಾರೆ.
Related Articles
ಕೆಲವೊಂದು ಗಣಿಗಾರಿಕೆ ನಿಷೇಧಿಸುವ ಬಗ್ಗೆ ನನಗೂ ನಾಲ್ಕೆçದು ದಿನಗಳ ಹಿಂದೆಯೇ ಮಾಹಿತಿ ಬಂತು. ಆದರೆ ಯಾವ ರೀತಿಯಲ್ಲಿ ರದ್ದು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟಪಡಿಸಿಲ್ಲ ಎಂದು ಶ್ರೀರಂಗಪಟ್ಟಣದ ರೈತ ಮುಖಂಡ ಮಂಜೇಶ್‌ಗೌಡ ತಿಳಿಸಿದರು. ಉದಯವಾಣಿಗೆ
ಪ್ರತಿಕ್ರಿಯಿಸಿದ ಅವರು, ಹಿಂದೆ ಇದ್ದ ಹಿರಿಯ ಭೂ ವಿಜ್ಞಾನಿ ನಾಗಭೂಷಣ್ ಅವಧಿಯಲ್ಲಿ ಒಂದೇ ಕ್ವಾರೆಯನ್ನು ಐದು ಮಂದಿಗೆ ಅನುಮತಿ ನೀಡಿದ್ದರು. ಇದರಲ್ಲಿ ಒಂದು ಗಣಿ ಗುತ್ತಿಗೆ ರದ್ದು ಮಾಡಿದರೆ ಇನ್ನುಳಿದ ನಾಲ್ಕು ಮಂದಿ ನಡೆಸುತ್ತಾರೆ. ಕಲ್ಲನ್ನು ಬೇರೆ ಕಡೆ ಅಕ್ರಮವಾಗಿ ಅರಣ್ಯ ಪ್ರದೇಶದಿಂದ ತರಿಸಲಾಗುತ್ತಿತ್ತು. ಇದಕ್ಕೆ ಕಡಿವಾಣ ಹಾಕಬೇಕು. ಇದರ ಬಗ್ಗೆ ನಾವು ದೂರು ನೀಡಿದ್ದೇವೆ. ಸರಿಯಾದ ಕ್ರಮ ಕೈಗೊಂಡರೆ ಪ್ರತಿದಿನ 4 ಕೋಟಿ ರೂ. ಸರ್ಕಾರಕ್ಕೆ ಆದಾಯ ಬರಲಿದೆ.
Advertisement
ಸೂಕ್ಷ್ಮಪ್ರದೇಶ:ಜಂಟಿ ತಂಡ ರಚನೆಎಲ್ಲ ತಾಲೂಕುಗಳಲ್ಲಿ ನಡೆಯುತ್ತಿರುವ ಅನಧಿಕೃತ ಉಪ ಖನಿಜ ಗಣಿಗಾರಿಕೆ, ಸಾಗಾಣಿಕೆ ಹಾಗೂ ಕ್ರಷರ್ ಘಟಕಗಳು ಕಾರ್ಯನಿರ್ವಹಣೆ ಸಂಬಂಧ ಅತೀ ಹೆಚ್ಚು ದೂರು ಬರುತ್ತಿರುವ ಪ್ರದೇಶಗಳಾದ ಮಂಡ್ಯ ತಾಲೂಕಿನ ರಾಗಿಮುದ್ದನಹಳ್ಳಿ, ಆನೆಕುಪ್ಪೆ, ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ, ಶಿಂಷಾ ನದಿ ಪಾತ್ರ, ಶ್ರೀರಂಗಪಟ್ಟಣ ತಾಲೂಕಿನ ಚೆನ್ನನಕೆರೆ, ಜಕ್ಕನಹಳ್ಳಿ, ಕಾಳೇನಹಳ್ಳಿ,ಗೌಡಹಳ್ಳಿ, ಗಣಂಗೂರು, ಹಂಗರಹಳ್ಳಿ,ಮುಂಡಗದೊರೆ, ಸಿದ್ದಾಪುರ, ಪಾಂಡವಪುರ ತಾಲೂಕಿನ ಬೇಬಿಬೆಟ್ಟದ ಕಾವಲು, ಚಿನಕುರಳಿ,ಕಾಮನಾಯಕನಹಳ್ಳಿ, ಶಂಭೂನಹಳ್ಳಿ, ನರಹಳ್ಳಿ, ನಾಗಮಂಗಲ ತಾಲೂಕಿನ ಸಂಕನಹಳ್ಳಿ, ಗಂಗಸಮುದ್ರ, ದೇವರಹೊಸೂರು,ಕಾಂತಾಪುರ, ಕೆ.ಆರ್.ಪೇಟೆ ತಾಲೂಕಿನ ಅಕ್ಕಿಹೆಬ್ಟಾಳು, ಹೇಮಾವತಿ ನದಿ ಪಾತ್ರ, ಮಳವಳ್ಳಿ ತಾಲೂಕಿನಆಗಸನಪುರ ಗ್ರಾಮಗಳನ್ನು ಸೂಕ್ಷ್ಮಪ್ರದೇಶಗಳೆಂದು ಗುರುತಿಸಿ ನಿಗಾ ವಹಿಸಲು ಕಂದಾಯ, ಅರಣ್ಯ, ಪಂಚಾಯತ್‌ರಾಜ್, ಪ್ರಾದೇಶಿಕ ಸಾರಿಗೆ, ಪೊಲೀಸ್ ಇಲಾಖೆಯ ಅಧಿಕಾರಿಗಳ ಒಳಗೊಂಡಂತೆ ಜಂಟಿ ತಂಡಗಳ ರಚನೆ ಮಾಡಲಾಗಿದೆ. 119ವಾಹನ, 33.73 ಲಕ್ಷ ದಂಡ
ಜಿಲ್ಲೆಯಾದ್ಯಂತ ಅನಧಿಕೃತ ಉಪ ಖನಿಜ ಗಣಿಗಾರಿಕೆ, ದಾಸ್ತಾನು ಸಂಬಂಧ 12 ಪಿಸಿಆರ್‌ಗಳನ್ನು ಸಂಬಂಧಿಸಿದ ನ್ಯಾಯಾಲಯಗಳಲ್ಲಿ
ದಾಖಲಿಸಲಾಗಿದ್ದು, ಇನ್ನೂ ಹಲವಾರು ಪ್ರಕರಣಗಳನ್ನು ದಾಖಲಿಸುವ ಕಾರ್ಯ ಪ್ರಗತಿಯಲ್ಲಿದೆ. ಅನಧಿಕೃತ ಉಪಖನಿಜ ಸಾಗಾಣಿಕೆ ಸಂಬಂಧ ಏಪ್ರಿಲ್ 2021ರಿಂದ ಇಲ್ಲಿಯವರೆಗೆ ಒಟ್ಟು 119 ವಾಹನಗಳಿಂದ 33.73 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಕ್ರಮಕೈಗೊಂಡಿಲ್ಲ. ನವೀಕರಣವಾಗದ ಹಾಗೂ ಪರಿಸರ ಇಲಾಖೆಯಿಂದ ವಿಮೋಚನಾ ಪತ್ರ ಸಲ್ಲಿಸದ ಗಣಿ ಹಾಗೂ
ಕ್ರಷರ್ ಎಂದು ಹೇಳಿದ್ದಾರೆ. ಆದರೆ ವಿಮೋಚನಾ ಪತ್ರ ಸಲ್ಲಿಸಿದ ಮೇಲೆ ಅನುಮತಿ ನೀಡುತ್ತೇವೆ ಎಂದರ್ಥವೇ?. ಕೂಡಲೇ ಸಂಪೂರ್ಣ ಕ್ರಮಕೈಗೊಳ್ಳಬೇಕು.
– ಕೆ.ಆರ್.ರವೀಂದ್ರ, ಆರ್‌ಟಿಐ ಕಾರ್ಯಕರ್ತ ಸಂಪೂರ್ಣ ನಿಷೇಧಕ್ಕೆಕ್ರಮ ವಹಿಸಬೇಕು.ಕೆಲವೊಂದು ಮಾತ್ರ ರದ್ದುಪಡಿಸಲಾಗಿದೆ. ಆದರೆ, ಈಗಾಗಲೇ ಅನುಮತಿ ನೀಡಿರುವ ಗಣಿ ಗುತ್ತಿಗೆಗಳಲ್ಲಿ ಅಕ್ರಮವಾಗಿ ಕಲ್ಲು ತೆಗೆಯಲಾಗುತ್ತಿದೆ. ಅಲ್ಲದೆ, ಪರವಾನಗಿ ಮುಗಿದಿದ್ದರೂ ಕಲ್ಲು ತೆಗೆಯುತ್ತಿದ್ದಾರೆ. ಇದರ ವಿರುದ್ಧಯಾವಕ್ರಮ ಕೈಗೊಂಡಿಲ್ಲ. ಅಧಿಕಾರಿಗಳು ಜಿಲ್ಲೆಯ ಜನರ ಮುಂದೆ ರದ್ದುಪಡಿಸುವ ನಾಟಕವಾಡುತ್ತಿದ್ದಾರೆ.
– ತೇಜಸ್‌ಗೌಡ,ಕೋಡಿಶೆಟ್ಟಿಪುರ ಇದೊಂದು ಕಣ್ಣೊರೆಸುವ ತಂತ್ರ.ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಸಂಸ್ಥೆಕೆಆರ್‌ಎಸ್ ವ್ಯಾಪ್ತಿಯ 20 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ವರದಿ ನೀಡಿದೆ. ಅದರಂತೆ ಸಂಪೂರ್ಣವಾಗಿ ಗಣಿಗಾರಿಕೆಯನ್ನೇ ನಿಷೇಧಿಸುವ ಕ್ರಮ ಜರುಗಿಸಬೇಕು.ಕೆಲವು ಮಾತ್ರ ರದ್ದುಪಡಿಸಿದ್ದೇವೆ ಎಂದು ಹೇಳುವುದು ಸರಿಯಲ್ಲ.ಕೂಡಲೇ ಎಲ್ಲ ಗಣಿಗಾರಿಕೆಯನ್ನು ನಿಷೇಧಿಸಬೇಕು.
-ಎ.ಎಲ್.ಕೆಂಪೂಗೌಡ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘ