Advertisement

Alert: ದೇವರನಾಡಿನಲ್ಲಿ ಮಳೆಯ ಅಬ್ಬರಕ್ಕೆ 11 ಮೃತ್ಯು , 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

10:41 AM May 25, 2024 | Team Udayavani |

ತಿರುವನಂತಪುರ: ಕಳೆದ 6 ದಿನಗಳಿಂದ ಕೇರಳ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು ಅದರಂತೆ ರಾಜ್ಯದ ವಿವಿಧೆಡೆ 11 ಜನ ಮೃತಪಟ್ಟಿರುವುದಾಗಿ ಕಂದಾಯ ಸಚಿವ ಕೆ.ರಾಜನ್‌ ಮಾಹಿತಿ ನೀಡಿದ್ದಾರೆ.

Advertisement

ಭಾರಿ ಮಳೆಗೆ ನೀರಲ್ಲಿ ಮುಳುಗಿ 6 ಜನ ಮೃತಪಟ್ಟರೆ, ಸಿಡಿಲಿನಿಂದ 2, ಗೋಡೆ ಕುಸಿತದಿಂದ ಒಬ್ಬರು ಹಾಗೂ ನೀರಿನ ಕ್ವಾರಿಗೆ ಬಿದ್ದು ಇಬ್ಬರು ಮೃತಪಟ್ಟಿದ್ದು ದೇವರನಾಡಿನಲ್ಲಿ ವರುಣನ ಆರ್ಭಟಕ್ಕೆ 11 ಜನ ಜೀವಕಳೆದುಕೊಂಡಿದ್ದಾರೆ.

ಅದರಂತೆ ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಎರ್ನಾಕುಲಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ 6 ರಿಂದ 11 ಸೆಂ.ಮೀ ಮಳೆಯಾಗುವ ಮುನ್ಸೂಚನೆ ಇದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಶನಿವಾರದ ನಂತರ ರಾಜ್ಯದಲ್ಲಿ ಮಳೆಯ ಪ್ರಮಾಣ ಸ್ವಲ್ಪಮಟ್ಟಿಗೆ ಕಡಿಮೆಯಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದ ಸಚಿವರು, ಜನರು ಸಮುದ್ರ ತೀರಗಳಿಗೆ ಹೋಗದಂತೆ, ಜೊತೆಗೆ ಮಕ್ಕಳು ನದಿ ತೀರಗಳಿಗೆ ತೆರಳದಂತೆ ಸೂಚನೆ ನೀಡಿದ್ದಾರೆ.

ಮಳೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸ್ಥಳೀಯ ಅಧಿಕಾರಿಗಳು, ಅಗ್ನಿಶಾಮಕ ಇಲಾಖೆ, ಪೊಲೀಸ್ ಮತ್ತು ಕಂದಾಯ ಇಲಾಖೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಯ ಎರಡು ತಂಡಗಳನ್ನು ರಾಜ್ಯದಲ್ಲಿ ನಿಯೋಜಿಸಿದೆ. ಶುಕ್ರವಾರ ಸಂಜೆಯ ವೇಳೆಗೆ ರಾಜ್ಯಾದ್ಯಂತ ಎಂಟು ಪರಿಹಾರ ಶಿಬಿರಗಳಲ್ಲಿ 223 ಜನರಿಗೆ ವಸತಿ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಇದನ್ನೂ ಓದಿ: Udupi; ಗುಡುಗು ಸಿಡಿಲಿಗೆ ಬೆಚ್ಚಿಬಿದ್ದ ಜನತೆ, ತಡರಾತ್ರಿ ಧಾರಕಾರ ಮಳೆಗೆ ಹಲವೆಡೆ ಕೃತಕ ನೆರೆ

Advertisement

Udayavani is now on Telegram. Click here to join our channel and stay updated with the latest news.

Next