Advertisement

ಭಾರತದ 11 ವನಿತೆಯರಿಗೆ ಪ್ರಶಸ್ತಿ

03:50 AM Mar 19, 2017 | Team Udayavani |

ಸಿಂಗಾಪುರ: ಸಮಾಜಸೇವೆಗೆ ತಮ್ಮ ಬದುಕನ್ನೇ ಮುಡುಪಿಟ್ಟ ಭಾರತದ 11 ಮಹಿಳೆಯರು ಈ ಬಾರಿಯ “ವಿಮೆನ್‌ ಐಕಾನ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

Advertisement

ಸಿಂಗಾಪುರ ನನ್ಯಾಂಗ್‌ ತಾಂತ್ರಿಕ ವಿವಿ ನೆರವಿನೊಂದಿಗೆ ಬ್ಯುಸಿನೆಸ್‌ ಎಕ್ಸೆಲೆನ್ಸ್‌ ಆಂಡ್‌ ರಿಸರ್ಚ್‌ ಗ್ರೂಪ್‌ ನೀಡುವ ಈ ಪ್ರಶಸ್ತಿ ಪಡೆದ ಏಷ್ಯಾದ 25 ಮಂದಿ ಮಹಿಳೆಯರ ಪೈಕಿ ಭಾರತದ 11 ಮಹಿಳೆಯರೂ ಇದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡು, ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಾಧಕಿಯರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಭಾರತೀಯ ಸಶಸ್ತ್ರಪಡೆಯಲ್ಲಿ ದಶಕದ ಕಾಲ ಕಾರ್ಯನಿರ್ವಹಿಸಿ, “ಸಮವಸ್ತ್ರದಲ್ಲಿರುವ ಮಹಿಳೆ’ ಕುರಿತು ಇದ್ದ ಹಲವು ಪೂರ್ವಗ್ರಹ­ಗಳನ್ನು ತೊಡೆದುಹಾಕಿದ, ನಂತರ ಕಾರ್ಪೊರೇಟ್‌ ಜಗತ್ತಿಗೂ ಲಗ್ಗೆಯಿಟ್ಟ ವಂದನಾ ಶರ್ಮಾ, ಸಾಧಕಿಯರಲ್ಲಿ ಒಬ್ಬರು.

2007ರಲ್ಲಿ ಪತಿ ನಿಧನರಾದ ನಂತರ ಹತ್ತು ತಿಂಗಳ ಕಾಲ ಮುಂಬೈನಲ್ಲಿ ಟ್ಯಾಕ್ಸಿ ಓಡಿಸಿ, ಕುಟುಂಬ ನಿರ್ವಹಣೆ ಮಾಡಿದ ದಿಟ್ಟ ಮಹಿಳೆ ರೇವತಿ ಸಿದ್ಧಾಥೆì ರಾಯ್‌ ಅವರೂ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಸ್ತುತ “ಜಫಿ#àರೊ ಲರ್ನಿಂಗ್‌’ ಎಂಬ ಚಾಲನಾ ತರಬೇತಿ ಕೇಂದ್ರ ನಡೆಸುತ್ತಿರುವ ರೇವತಿ, ನೂರಾರು ಮಹಿಳೆಯರಿಗೆ ದ್ವಿಚಕ್ರವಾಹನ ಚಾಲನೆ ತರಬೇತಿ ನೀಡುತ್ತಿದ್ದಾರೆ. ಇವರಿಂದ ತರಬೇತಿ ಪಡೆದ 120 ಮಹಿಳೆಯರು ಬೆಂಗಳೂರು, ಮುಂಬೈನಲ್ಲಿ ಇ-ಕಾಮರ್ಸ್‌ ಮಾರುಕಟ್ಟೆ ಉತ್ಪನ್ನಗಳ ಪೂರೈಕೆಯಲ್ಲಿ ತೊಡಗಿದ್ದಾರೆ. ಇವರಲ್ಲದೆ, ಡಾ. ಅಪರ್ಣಾ ಹೆಗ್ಡೆ, ಡಾ. ಶ್ರೀಮತಿ ಕೇಶನ್‌, ದೀಕ್ಷಿತಾ ಸೇರಿ 11 ಭಾರತೀಯರು “ವಿಮೆನ್‌ ಐಕಾನ್‌’ ಗೌರವಕ್ಕೆ ಪಾತ್ರರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next