Advertisement
ಕೌಂಟಿ ಮೈದಾನ, ಬ್ರಿಸ್ಟಲ್ಪ್ರಸ್ತುತ ವಿಶ್ವಕಪ್‌ಗ್ೂ ಮುನ್ನ ಈ ಸುಂದರ ಮೈದಾನದಲ್ಲಿ ಕೇವಲ 3 ವಿಶ್ವಕಪ್ ಪಂದ್ಯಗಳು ಮಾತ್ರ ನಡೆದಿವೆ. 1983, 1999ರ ಕೂಟದಲ್ಲಿ ಇಲ್ಲಿ ಪಂದ್ಯಗಳು ನಡೆದಿದ್ದವು. ಈ ಮೈದಾನ ಸಚಿನ್ ತೆಂಡುಲ್ಕರ್ ಪಾಲಿಗೆ ಯಾವಾಗಲೂ ಸ್ಮರಣಾರ್ಹ. 1999ರ ವಿಶ್ವಕಪ್ ವೇಳೆ ತಂದೆ ತೀರಿಕೊಂಡ ದುಃಖದಲ್ಲಿದ್ದರೂ, ಇಲ್ಲಿ ಅದ್ಭುತ ಶತಕ ಬಾರಿಸಿದ್ದರು.
ವಿಶ್ವಕಪ್ ಲೆಕ್ಕಾಚಾರದಲ್ಲಿ ನೋಡುವುದಾದರೆ ಇಲ್ಲಿ ನಡೆದಿರುವುದು ಒಂದೇ ಪಂದ್ಯ. 1999ರಲ್ಲಿ ಆಸ್ಟ್ರೇಲಿಯ-ನ್ಯೂಜಿಲೆಂಡ್ ನಡುವೆ ಪಂದ್ಯವೊಂದು ಇಲ್ಲಿ ನಡೆದಿತ್ತು. ಇತ್ತೀಚೆಗೆ ಇದು ಅತಿಹೆಚ್ಚು ಬಳಸಲ್ಪಟ್ಟ ಮೈದಾನ. ಇಲ್ಲಿ ಪದೇ ಪದೇ ಬೃಹತ್ ಮೊತ್ತ ದಾಖಲಾಗುತ್ತದೆ. 2013ರ ನಂತರ 10 ಬಾರಿ ಇಲ್ಲಿ 300ಕ್ಕೂ ಅಧಿಕ ರನ್ ದಾಖಲಾಗಿದೆ. ರಿವರ್‌ಸೈಡ್ ಮೈದಾನ, ಚೆಸ್ಟರ್ ಲೀ ಸ್ಟ್ರೀಟ್
ಇಂಗ್ಲೆಂಡ್‌ನ ಈಶಾನ್ಯಭಾಗದಲ್ಲಿರುವ ಚೆಸ್ಟರ್ ಲೀ ಸ್ಟ್ರೀಟ್‌ನಲ್ಲಿರುವ ಈ ಮೈದಾನಕ್ಕೆ ಬಹಳ ಪ್ರಾಮುಖ್ಯತೆಯೇನು ಇಲ್ಲ. ಆದರೂ 1999ರಲ್ಲೊಂದರಲ್ಲೇ ಇಲ್ಲಿ 4 ವಿಶ್ವಕಪ್ ಪಂದ್ಯಗಳು ನಡೆದಿವೆ. ಈ ಬಾರಿ ಇಲ್ಲಿ 3 ಪಂದ್ಯಗಳು ನಡೆಯಲಿಕ್ಕಿವೆ. ಶ್ರೀಲಂಕಾ ಪಾಲಿಗೆ 2 ಪಂದ್ಯವಿದ್ದರೆ, ಆತಿಥೇಯ ಇಂಗ್ಲೆಂಡ್ ಒಂದು ಪಂದ್ಯ ಆಡುತ್ತದೆ.
Related Articles
ವಿಶ್ವಕಪ್ ಇತಿಹಾಸದ ಸರ್ವಶ್ರೇಷ್ಠ ಪಂದ್ಯವೊಂದಕ್ಕೆ ಈ ಮೈದಾನ ಸಾಕ್ಷಿಯಾಗಿದೆ. 1999ರಲ್ಲಿ ಆಸ್ಟ್ರೇಲಿಯ-ದ.ಆಫ್ರಿಕಾ ನಡುವೆ ಅತ್ಯಂತ ರೋಚಕ ಪಂದ್ಯ ಇಲ್ಲಿ ನಡೆದಿತ್ತು. ಅಲ್ಲಿ ಆಸೀಸ್ ಗೆದ್ದಿತ್ತು. ಈ ಬಾರಿಯೂ ಇಲ್ಲಿ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಬಾರಿ ಭಾರತವಿಲ್ಲಿ 2 ಪಂದ್ಯಗಳನ್ನು ಆಡಲಿದೆ.
Advertisement
ಹೆಡಿಂಗ್ಲೆ, ಲೀಡ್ಸ್ಪ್ರಸ್ತುತ ವಿಶ್ವಕಪ್‌ಗ್ೂ ಮುನ್ನ 12 ವಿಶ್ವಕಪ್ ಪಂದ್ಯಗಳು ಇಲ್ಲಿ ಆಯೋಜನೆಯಾಗಿವೆ. ಇಂಗ್ಲೆಂಡ್ ಆತಿಥ್ಯವನ್ನೇ ಪರಿಗಣಿಸಿದರೆ, ಗರಿಷ್ಠ ಪಂದ್ಯಗಳಿಗೆ ಆತಿಥೇಯತ್ವ ವಹಿಸಿದ ಮೈದಾನ ಎಂಬ ಹೆಗ್ಗಳಿಕೆ ಇದರದ್ದು. ಲಂಕಾ ವಿರುದ್ಧ ಭಾರತವಾಡುವ ಕೊನೆಯ ಲೀಗ್ ಪಂದ್ಯ ಸೇರಿ, ಈ ಬಾರಿ ಇಲ್ಲಿ 4 ಪಂದ್ಯ ನಡೆಯಲಿದೆ. ಲಾರ್ಡ್ಸ್, ಲಂಡನ್
ಈ ಮೈದಾನ ಕ್ರಿಕೆಟ್ ಜಗತ್ತಿನಲ್ಲಿ ಅತಿಹೆಚ್ಚು ಖ್ಯಾತಿ, ಗೌರವ ಹೊಂದಿದೆ. ಈ ಹಿಂದೆ ಇಂಗ್ಲೆಂಡ್‌ನಲ್ಲಿ ನಾಲ್ಕು ವಿಶ್ವಕಪ್ ನಡೆದಾಗಲೂ ಇಲ್ಲಿಯೇ ಅಂತಿಮ ಪಂದ್ಯ ನಡೆದಿತ್ತು. ಈ ಬಾರಿ ಜು.14ರಂದು ಇಲ್ಲೇ ಫೈನಲ್ ನಡೆಯಲಿದೆ. ಪ್ರಸ್ತುತ 4 ಲೀಗ್ ಪಂದ್ಯಗಳು ಇಲ್ಲಿ ನಡೆಯಲಿವೆ. ಭಾರತ ಯಾವುದೇ ಲೀಗ್ ಪಂದ್ಯಗಳನ್ನು ಇಲ್ಲಿ ಆಡುವುದಿಲ್ಲ. ಓಲ್ಡ್‌ಟ್ರಾಫರ್ಡ್, ಮ್ಯಾಂಚೆಸ್ಟರ್
ಜೂ.16ರಂದು ಇಲ್ಲಿ ವಿಶ್ವಕಪ್ ಪಂದ್ಯಗಳ ಪೈಕಿಯೇ ಅತಿ ಮಹತ್ವದ ಭಾರತ-ಪಾಕಿಸ್ತಾನ ನಡುವಿನ ಸಮರ ನಡೆಯಲಿದೆ. 1999ರ ವಿಶ್ವಕಪ್‌ನಲ್ಲಿ ಭಾರತ ಇಲ್ಲಿ ಆಡಿದ್ದರೂ, ಕಡಿಮೆ ಮೊತ್ತ ಗಳಿಸಿತ್ತು. ಆದರೆ ಅಂಕಣಗಳ ಸ್ವರೂಪ ಈ ಬಾರಿ ಬದಲಾಗಿದೆ. ರನ್ ಮಳೆಯೇ ಸುರಿಯುವುದು ಖಾತ್ರಿಯಾಗಿದೆ. ದ ಓವೆಲ್, ಲಂಡನ್
ಲಾರ್ಡ್ಸ್ನಂತೆ ದಿ ಓವೆಲ್ ಮೈದಾನವಿರುವುದೂ ಲಂಡನ್‌ನಲ್ಲೇ. ಲಾರ್ಡ್ಸ್ನಿಂದ 13 ಮೈಲಿ ದೂರದಲ್ಲಿದೆ. ಅತಿ ಪ್ರಮುಖ ಮೈದಾನವೂ ಹೌದು. 1880ರಂದು ಇಂಗ್ಲೆಂಡ್ ತನ್ನ ಇತಿಹಾಸದ ಮೊದಲ ಟೆಸ್ಟ್ ಪಂದ್ಯವಾಡಿದ್ದು ಇಲ್ಲೇ. ಪ್ರತೀ ಬಾರಿ ಆ್ಯಷಸ್ ಸರಣಿ ಮುಗಿಯುವುದು ಇಲ್ಲೇ. ಈ ವಿಶ್ವಕಪ್‌ನ ಉದ್ಘಾಟನಾ ಪಂದ್ಯ ಮೇ 30ರಂದು ಇಲ್ಲೇ ನಡೆಯಿತು. ದ ರೋಸ್ ಬೌಲ್, ಸೌಥಾಂಪ್ಟನ್
ಇದೇ ಮೊದಲ ಬಾರಿ ವಿಶ್ವಕಪ್ ಪಂದ್ಯವೊಂದಕ್ಕೆ ರೋಸ್‌ಬೌಲ್ ಆತಿಥ್ಯ ವಹಿಸಿದೆ. ಅದೂ ಜೂ.5ರಂದು ನಡೆದ ಭಾರತ-ದ.ಆಫ್ರಿಕಾ ನಡುವಿನ ಪಂದ್ಯಕ್ಕೆ. ಇದು ಪ್ರಸ್ತುತ ವಿಶ್ವಕಪ್‌ನಲ್ಲಿ ಭಾರತವಾಡಿದ ಮೊದಲ ಪಂದ್ಯ. ಇದು ಗರಿಷ್ಠ ಮೊತ್ತವನ್ನು ಕಾಣುವ ಮೈದಾನ, ಇಲ್ಲಿ ಕ್ರಿಕೆಟ್ ಶುರುವಾಗಿದ್ದು 2001ರಲ್ಲಿ. ಕೌಂಟಿ ಮೈದಾನ, ಟೌಂಟನ್
ಈ ಮೈದಾನ ಭಾರತೀಯರಿಗೆ ಯಾವಾಗಲೂ ಸ್ಮರಣಾರ್ಹ. 1999ರಂದು ನಡೆದ ವಿಶ್ವಕಪ್‌ನಲ್ಲಿ ಗಂಗೂಲಿ-ದ್ರಾವಿಡ್ 2ನೆ ವಿಕೆಟ್‌ಗೆ ದಾಖಲೆಯ 318 ರನ್ ಜೊತೆಯಾಟವಾಡಿದ್ದರು. ಭಾರತ ಒಟ್ಟು 373 ರನ್ ಗಳಿಸಿತ್ತು. ವಿಶೇಷವೆಂದರೆ ಅದೇ ಇಲ್ಲಿ ನಡೆದ ಕೊನೆಯ ಏಕದಿನ ಪಂದ್ಯ. ಪ್ರಸ್ತುತ 3 ಪಂದ್ಯಕ್ಕೆ ಆತಿಥೇಯತ್ವ ವಹಿಸಿದೆ. ಟ್ರೆಂಟ್‌ಬ್ರಿಜ್, ನಾಟಿಂಗ್ ಹ್ಯಾಮ್
1841ರಲ್ಲಿ ಆರಂಭವಾದ ಇದು, ಇಂಗ್ಲೆಂಡ್‌ನ ಅತ್ಯಂತ ಹಳೆಯ ಮೈದಾನಗಳಲ್ಲೊಂದು. 1974ರಲ್ಲಿ ಮೊದಲ ಏಕದಿನ ಪಂದ್ಯ ನಡೆಯಿತು. ಮೊದಲ ವಿಶ್ವಕಪ್‌ನಿಂದಲೂ ಇಲ್ಲಿ ಪಂದ್ಯಗಳು ನಡೆಯುತ್ತಲೇ ಇವೆ. ಈ ಬಾರಿಯೂ ಇಲ್ಲಿ 5 ಪಂದ್ಯಗಳು ನಡೆಯಲಿವೆ. ಭಾರತ-ನ್ಯೂಜಿಲೆಂಡ್ ಪಂದ್ಯವೂ ಈ ಪಟ್ಟಿಯಲ್ಲಿದೆ.