ಹೊಸದಿಲ್ಲಿ: ಜಿಎಸ್‌ಟಿ ಸಂಗ್ರಹದಲ್ಲಿ ಶೇ.11.6 ಏರಿಕೆಯಾಗುವ ನಿರೀಕ್ಷೆಯಲ್ಲಿರುವ ಸರಕಾರ, ಮುಂದಿನ ಹಣಕಾಸು ವರ್ಷದಲ್ಲಿ ಒಟ್ಟು ತೆರಿಗೆ ಆದಾಯವು ಶೇ.11.46ರಷ್ಟು ವೃದ್ಧಿಯಾಗುವ ವಿಶ್ವಾಸದಲ್ಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ ಮಂಡಿಸಿ, ನಿವ್ವಳ ತೆರಿಗೆ ಆದಾಯವು 38.31 ಲಕ್ಷ ಕೋಟಿ ರೂ. ಗಳಿಗೇರಲಿದೆ ಎಂದು ಅಂದಾಜಿಸಲಾಗಿದೆ. ಇನ್ನು 2024-25ರಲ್ಲಿ ಜಿಎಸ್‌ಟಿ ಸಂಗ್ರಹವು 10.68 ಲಕ್ಷ ಕೋಟಿ ರೂ.ಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಿರುವ ಸರಕಾರ, ಹಾಲಿ ವರ್ಷಕ್ಕೆ ಹೋಲಿಸಿದರೆ ಶೇ. 11.6ರಷ್ಟು ಅಂದರೆ 1.1ಲಕ್ಷ ಕೋಟಿ ರೂ. ಅಧಿಕವಾಗಿದೆ. ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ 21.99 ಲಕ್ಷ ಕೋಟಿ ರೂ.ಗಳು ವೈಯಕ್ತಿಕ ಆದಾಯಾ ತೆರಿಗೆ ಮತ್ತು ಕಾರ್ಪೊರೇಟ್ ತೆರಿಗೆ ಸಹಿತ ನೇರ ತೆರಿಗೆಯಿಂದ ಹಾಗೂ 16.22 ಲಕ್ಷ ಕೋಟಿ ರೂ.ಗಳು ಕಸ್ಟಮ್ಸ್ , ಅಬಕಾರಿ ಮತ್ತು ಜಿಎಸ್‌ಟಿ ಸಹಿತ ಪರೋಕ್ಷ ತೆರಿಗೆಯಿಂದ ಹರಿದು ಬರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದರು.