Advertisement

5 ಶತಕೋಟಿ ಆರ್ಥಿಕತೆಯಾಗಿಸುವ ಕಾರ್ಯಕ್ಕೆ ಯಾವ ಕ್ಷೇತ್ರಕ್ಕೆ ಒತ್ತು ನೀಡಬೇಕಾದ ಅಗತ್ಯವಿದೆ?

04:33 PM Jan 11, 2020 | Team Udayavani |

ಮಣಿಪಾಲ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ, 2024 ರೊಳಗೆ ದೇಶವನ್ನು ಉದ್ದೇಶಿತ 5 ಶತಕೋಟಿ ಆರ್ಥಿಕತೆಯನ್ನಾಗಿಸುವ ಕಾರ್ಯಕ್ಕೆ, ಯಾವ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕಾದ ಅಗತ್ಯವಿದೆ? ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಅಯ್ದ ಉತ್ತರಗಳು ಇಲ್ಲಿವೆ.

Advertisement

ಮುಂಜುನಾಥ್ ಬೆಳ್ಳಾರಿ: ವಾಣಿಜ್ಯದಲ್ಲಿ ಹೊರ ದೇಶದದಿಂದ ಬರುವದನ್ನ ನಿಲ್ಲಿಸಲು ಭಾರತದಲ್ಲಿ ಉತ್ಪನ್ನಕ್ಕೆ ಮೊದಲು ಆದ್ಯತೇ ಕೊಡಬೇಕು.

ಅಶೋಕ್ ಪೈ: ಹಳೇ ವಾಹನ ಬದಲಾವಣೆ ಮಾಡಿ ಹೊಸ ವಾಹನ ಖರೀದಿಗೆ ಪ್ರೋತ್ಸಾಹಿಸುವುದು, ಕಮರ್ಶಿಯಲ್ ವಾಹನ ಹತ್ತು ವರ್ಷ ನಾನ್ ಕಮರ್ಶಿಯಲ್ ಹದಿನೈದು ವರ್ಷಗಳು, ಇದರಿಂದ ಅಪಘಾತ ಕಡಿಮೆ ಹಾಗೂ ಹೊಸ ವಾಹನ ಖರೀದಿಯಿಂದ ಉತ್ಪಾದನೆ ಹೆಚ್ಚಳವಾಗಲಿದೆ, ಪ್ಲಾಸ್ಟಿಕ್ ರೀಸೈಕ್ಲಿಂಗ್ ಘಟಕ ಸ್ಥಾಪನೆ ಇಪ್ಪತೈದು ರಿಂದ ಮುವತ್ತು ಜನಸಂಖ್ಯೇಗೆ ಒಂದರಂತೆ ಒತ್ತು

ನವೀ ದಾಸ್: ಮೊದಲಿಗೆ ಜಾತಿ ಅನ್ನೋದನ್ನ ನಿಷೇದ ಮಾಡಿದರೆ ಭಾರತ ಮುಂದುವರೆದಂತೆ. ಕೆಲವೊಂದು ಮೇಲೂ ಜಾತಿಯ ಜನರು ಕೆಳಜಾತಿಯ ಜನರನ್ನು ತುಳಿಯುತಿರುವುದು. ಯಾವುದೇ ಉದ್ಯೋಗದಲ್ಲಿ ಸಮಾನತೆ ನೀಡುವುದು. ಇವುಗಳೇ ಪ್ರಮುಖ ಅಂಶ

ಅರವಿಂದ ಶೆಣೈ: ಸ್ವ ಉದ್ಯೋಗವೆಂದು ಒಬ್ಬನಿಗೆ ಸಾಲ ಕೊಟ್ಟು ಅವನನ್ನು ಸಾಲಗಾರನಾಗಿ ಕೊನೆಗೆ ಅವನು ದಿವಾಳಿಯಾಗೂದನ್ನು ನೋಡುವುದಕ್ಕಿಂತ ಸರಕಾರವೇ ಸಣ್ಣ ಸಣ್ಣ ಕೈಗಾರಿಕೆ ಆರಂಬಿಸಿ ಅದರಲ್ಲಿ ಹೆಚ್ಚಿನ ಉದ್ಯೋಗಕ್ಕೆ ಅವಕಾಶ ಮಾಡಿದರೆ ಒಳ್ಳೆದು.

Advertisement

ರಾಜೇಶ್ ಅಂಚನ್ ಎಂ ಬಿ: ಮೊದಲು ವಿಪರೀತ ಏರುತ್ತಿರುವ ಜನಸಂಖ್ಯೆಯ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳೋದನ್ನು ಮೊದಲ ಆದ್ಯತೆ ನೀಡಬೇಕು. ಹೆಚ್ಚು ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿ ಮಾಡುವುದಕ್ಕೆ ಆದ್ಯತೆ ನೀಡಬೇಕು. ಮೇಕ್ ಇನ್ ಇಂಡಿಯಾ ಮೂಲಕ ಹೆಚ್ಚು ಹೆಚ್ಚು ಸ್ವದೇಶಿ ಉತ್ಪನ್ನಗಳನ್ನು ಸ್ಥಾಪಿಸಿ ಸ್ವಾವಲಂಬನೆ ಸಾಧಿಸಿ ಭಾರತವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಬೇಕು.

ರಾಜೇಶ್ ಕುಮಾರ್ ಕಲ್ಯಾ: ಮುಖ್ಯವಾದ ಕೆಲಸ ದಿಲ್ಲಿಯ ಬಿಟ್ಟು ಹಳ್ಳಿಯತ್ತ ಗಮನ ಕೊಡಿ. ನಿಮ್ಮ ಐದು ಶತಕೋಟಿ ಆರ್ಥಿಕತೆಯ ಮೂಲವೇ ಅಲ್ಲಿದೆ! ಧಾರ್ಮಿಕ, ಸೆಂಟಿ ಮೆಂಟಲ್ ವಿಷಯಗಳ ಬಿಟ್ಟು ರಸ್ತೆ, ರೈಲ್ವೇ ಒಟ್ಟಾಗಿ ಸಾರಿಗೆ, ನೀರಾವರಿ, ಕೃಷಿ ಕ್ಷೇತ್ರದತ್ತ ಗಮನಿಸಿ.

Advertisement

Udayavani is now on Telegram. Click here to join our channel and stay updated with the latest news.

Next