Advertisement

10ನೇ ವರ್ಷದ ದಾನದ ನಡಿಗೆ

10:26 AM Nov 25, 2019 | Suhan S |

ಧಾರವಾಡ: ನಗರದ ಎಸ್‌ಡಿಎಂ ವೈದ್ಯಕೀಯ ವಿಶ್ವವಿದ್ಯಾಲಯ ವತಿಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ 71ನೇ ಜನ್ಮದಿನದ ಅಂಗವಾಗಿ “ಈ ಸಲ ಭೂಮಿ ಉಳಿಸಿ’ ಧ್ಯೇಯವಾಕ್ಯದೊಂದಿಗೆ 10ನೇ ವರ್ಷದ ವಾಕ್‌ ಫಾರ್‌ ಚಾರಿಟಿ ರವಿವಾರ ಜರುಗಿತು.

Advertisement

ಬೆಳಗ್ಗೆ ಕಲಾಭವನ ಮೈದಾನದಲ್ಲಿ ಹು-ಧಾ ಪೊಲೀಸ್‌ ಆಯುಕ್ತ ಆರ್‌.ದಿಲೀಪ್‌ ಚಾಲನೆ ನೀಡಿದರು. ಇದಕ್ಕೂ ಮುನ್ನ ಸಸಿ ನೆಡುವ ಕಾರ್ಯಕ್ರಮಕ್ಕೂ ಸಾಂಕೇತಿಕವಾಗಿ ಆಯುಕ್ತರು ಚಾಲನೆ ನೀಡಿದರು. ಕಲಾಭವನದ ಆವರಣದಲ್ಲಿ ಭೂಮಿ ಉಳಿಸಿ ಎಂಬ ಸಂದೇಶ ಸಾರುವ ಬೀದಿ ನಾಟಕ ಪ್ರದರ್ಶನಗೊಂಡಿತು. ನಂತರ ಕಲಾಭವನದಿಂದ ಸತ್ತೂರಿನ ಎಸ್‌ಡಿಎಂ ವೈದ್ಯಕೀಯ ವಿಶ್ವವಿದ್ಯಾಲಯದವರೆಗೆ ಒಟ್ಟು 7 ಕಿಮೀ ವರೆಗೆ ನಡೆದ ದಾನದ ನಡಿಗೆಯಲ್ಲಿ 1200ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.

ವಿವಿಯ ವಿದ್ಯಾರ್ಥಿಗಳು ಭೂಮಿ ಉಳಿಸಿ ಎಂಬ ಸಂದೇಶ ಸಾರಿದರು. ವಿವಿ ಉಪ ಕುಲಪತಿ ಡಾ| ನಿರಂಜನಕುಮಾರ, ಪ್ರಾಚಾರ್ಯರಾದ ಡಾ| ರತ್ನಮಾಲಾ ದೇಸಾಯಿ, ಡಾ| ಚಿದಾನಂದ ಶೆಟ್ಟರ, ಹಣಕಾಸು ಅ ಧಿಕಾರಿ ಪ್ರಭು, ಸಾಕೇತ್‌, ಪ್ರೊ| ದಿನೇಶ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next