Advertisement

Maharashtra: ಗಣಿತ, ವಿಜ್ಞಾನದಲ್ಲಿ ಫೇಲಾದರೂ 10ನೇ ಕ್ಲಾಸ್‌ ಪಾಸ್‌!

10:13 PM Oct 23, 2024 | Team Udayavani |

ಮುಂಬೈ: ಮಹಾರಾಷ್ಟ್ರದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ 10ನೇ ತರಗತಿ ಅನುತ್ತೀರ್ಣರಾದರೂ ವಿದ್ಯಾರ್ಥಿಗಳು 11ನೇ ತರಗತಿ ಪ್ರವೇಶ ಪಡೆಯಬಹುದು. ಆದರೆ ಈ ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನದಲ್ಲಿ ಕನಿಷ್ಠ 20 ಅಂಕ ಪಡೆಯುವುದು ಕಡ್ಡಾಯವಾಗಿರುತ್ತದೆ.

Advertisement

ಮಹಾರಾಷ್ಟ್ರದಲ್ಲಿ ಎಸ್‌ಎಸ್‌ಸಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿ ಕನಿಷ್ಠ 35 ಅಂಕ ಪಡೆಯುವುದು ಕಡ್ಡಾಯವಾಗಿದೆ. ಆದರೆ ಈಗ 11ನೇ ತರಗತಿ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗಾಗಿ ಗಣಿತ ಮತ್ತು ವಿಜ್ಞಾನದ ಕನಿಷ್ಠ ಅಂಕವನ್ನು 20ಕ್ಕೆ ಇಳಿಸಲಾಗಿದೆ. ಅವರ ಅಂಕಪಟ್ಟಿಯಲ್ಲಿ “ವಿಜ್ಞಾನ ಮತ್ತು ಗಣಿತದಲ್ಲಿ ಉತ್ತೀರ್ಣರಾಗಿಲ್ಲ’ ಎಂದು ನಮೂದಿಸಿರುತ್ತದೆ. ಅವರಿಗೆ ಕಲಾ, ಮಾನವಿಕ ಕೋರ್ಸ್‌ಗಳನ್ನು ಸೇರಲಷ್ಟೇ ಅವಕಾಶವಿರುತ್ತದೆ.

ಈ ವಿದ್ಯಾರ್ಥಿಗಳು ಸಪ್ಲಿಮೆಂಟರಿ ಪರೀಕ್ಷೆ ಅಥವಾ ಮುಂದಿನ ವಾರ್ಷಿಕ ಪರೀಕ್ಷೆಯಲ್ಲಿ ಪಾಲ್ಗೊಂಡು ಫ‌ಲಿತಾಂಶ ಉತ್ತಪಡಿಸಿಕೊಳ್ಳಲು ಅವಕಾಶವಿರುತ್ತದೆ. ಮಹಾರಾಷ್ಟ್ರ ಸರ್ಕಾರದ ಈ ನಡೆಗೆ ಶೈಕ್ಷಣಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಕೆಲವರು 10ನೇ ತರಗತಿ ಫೇಲಾದವರು ಮುಂದಿನ ಶಿಕ್ಷಣದಿಂದ ಹೊರಗುಳಿಯುವುದು ತಪ್ಪುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರೆ ಇನ್ನು ಕೆಲವರು ಶಿಕ್ಷಣದ ಗುಣಮಟ್ಟ ಕುಸಿಯಲಿದ್ದು ವಿಶೇಷವಾಗಿ ವಿಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳ ಪ್ರವೇಶ ಪಡೆಯುವವರ ಸಂಖ್ಯೆ ಇಳಿಮುಖವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next