Advertisement

ರಾಜ್‌ಕುಮಾರ್‌ ಇಂಟರ್‌ನ್ಯಾಶನಲ್‌ಗೆ 10ರ ಸಂಭ್ರಮ

05:47 PM Nov 17, 2017 | Team Udayavani |

ಡಾ.ರಾಜ್‌ಕುಮಾರ್‌ ಕುಟುಂಬಕ್ಕೆ ಸೇರಿದ ಡಾ.ರಾಜ್‌ಕುಮಾರ್‌ ಇಂಟರ್‌ನ್ಯಾಶನಲ್‌ ಹೋಟೆಲ್‌ಗೆ ಈಗ ದಶಕದ ಸಂಭ್ರಮ. ಸಿನಿಮಾ ಚಟುವಟಿಕೆಯ ಪ್ರಮುಖ ಕೇಂದ್ರವಾದ ಗಾಂಧಿನಗರದಲ್ಲಿರುವ ಡಾ.ರಾಜ್‌ಕುಮಾರ್‌ ಇಂಟರ್‌ನ್ಯಾಶನಲ್‌ ಹೋಟೆಲ್‌ ಈಗ 10 ವರ್ಷಗಳನ್ನು ಪೂರೈಸಿ, ಹನ್ನೊಂದನ್ನೇ ವರ್ಷಕ್ಕೆ ಕಾಲಿಟ್ಟಿದೆ.

Advertisement

ಈಗ ಹೋಟೆಲ್‌ ನವೀಕರಣಗೊಂಡಿದ್ದು, ದೈವಿಕ್‌ ಎಂಬ ರೆಸ್ಟೋರೆಂಟ್‌ ಕೂಡಾ ಆರಂಭವಾಗಿದೆ. ಗುರುವಾರ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ಹಾಗೂ ಪುನೀತ್‌ರಾಜಕುಮಾರ್‌ ದೀಪ ಬೆಳಗಿಸುವ ಮೂಲಕ ನವೀಕರಣಗೊಂಡ ಹೋಟೆಲ್‌ಗೆ ಚಾಲನೆ ನೀಡಿದರು. 

“ಹೋಟೆಲ್‌ ಆರಂಭವಾಗಿ ಹತ್ತು ವರ್ಷ ಆಗಿದೆ. ಈಗ 11ನೇ ವರ್ಷಕ್ಕೆ ಕಾಲಿಡುತ್ತಿದ್ದು, ಸಾಕಷ್ಟು ನವೀಕರಣ ಮಾಡಿದೆ. ಹೊಸದಾಗಿ ದೈವಿಕ್‌ ಎಂಬ ರೆಸ್ಟೋರೆಂಟ್‌ ಕೂಡಾ ಆರಂಭವಾಗಿದೆ’ ಎಂದರು ರಾಘವೇಂದ್ರ ರಾಜಕುಮಾರ್‌. ಅಂದಹಾಗೆ, ಕಾಪುವಿನ ವಾಸುದೇವ ಶೆಟ್ಟಿ ಎನ್ನುವವರು ದೈವೀಕ್‌ ರೆಸ್ಟೋರೆಂಟ್‌ ಅನ್ನು ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next