ಬೆಂಗಳೂರು: ದರ್ಶನ್ ಅವರ ಅಭಿಮಾನಿ ಸಂಘ ಆರಂಭಿಸಿರುವ “ಡಿ ಕಂಪೆನಿ’ಗೆ ಈಗ ಹತ್ತು ವರ್ಷದ ಸಂಭ್ರಮ. ಮಂಗಳವಾರಕ್ಕೆ (ಜೂ.8) ಡಿ ಕಂಪೆನಿ ಆರಂಭವಾಗಿ ಹತ್ತು ವರ್ಷವಾಗಿದ್ದು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಭ್ರಮಿಸುತ್ತಿದ್ದಾರೆ.
ದರ್ಶನ್ ಕೂಡಾ “ಡಿ ಕಂಪೆನಿ’ ಹತ್ತು ವರ್ಷ ಪೂರೈಸಿದ್ದಕ್ಕೆ ಶುಭ ಕೋರಿದ್ದಾರೆ. ಇನ್ನು, ಈ ಬಗ್ಗೆ ಟ್ವೀಟ್ ಮಾಡಿರುವ “ಡಿ ಕಂಪೆನಿ’, “ನಿಮ್ಮೆಲ್ಲರಿಗೂ ತಿಳಿದಿರುವಂತೆ ನಿಮ್ಮೆಲ್ಲರ ಪ್ರೀತಿ ಪ್ರೋತ್ಸಾಹ, ಅಭಿಮಾನದ ಫಲದಿಂದ ಇಂದು ನಿಮ್ಮ ‘ಡಿ ಕಂಪನಿ’ 10ನೇ ವರ್ಷದ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ’ ಎಂದಿದೆ.
ಡಿ ಕಂಪೆನಿ ಕೇವಲ ನಟನ ಸಿನಿಮಾಗಳ ಸಂಭ್ರಮಕ್ಕಷ್ಟೇ ಸೀಮಿತವಾಗದೇ ಸಾಕಷ್ಟು, ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ. 10ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಡಿ ಕಂಪೆನಿ ಪ್ರಾಣಿ ಪ್ರೀತಿ ಮೆರದಿದೆ. ಮೈಸೂರು ಮೃಗಾಲಯದಿಂದ ಒಂದು ಅನಕೊಂಡಾ ಹಾಗೂ ಒಂದು ಆಮೆಯನ್ನು ದತ್ತು ಪಡೆದುಕೊಂಡಿದೆ.
ಇದನ್ನೂ ಓದಿ:ಏನಿದು ಕ್ಲಬ್ ಹೌಸ್ ಆ್ಯಪ್: ಇದರ ಜನಪ್ರಿಯತೆಗೆ ಕಾರಣಗಳೇನು ?
ಈ ಬಗ್ಗೆ ಟ್ವೀಟ್ ಮಾಡಿರುವ ಡಿ ಕಂಪೆನಿ, “ಡಿಬಾಸ್ ಅವರ ಕರೆಗೆ ಓಗೊಟ್ಟು ನಮ್ಮ ಡಿ ಕಂಪನಿಯ ಅಡ್ಮಿನ್ ತಂಡ ಮೈಸೂರಿನ ಶ್ರೀಜಯ ಚಾಮರಾಜೇಂದ್ರ ಮೃಗಾಲಯದಲ್ಲಿ ಒಂದು ಹಸಿರು ಅನಕೊಂಡಾ ಹಾವನ್ನು ಹಾಗೂ ನಮ್ಮ ಡಿ ಕಂಪೆನಿ ಗರ್ಲ್ಸ್ ಗ್ರೂಪ್ ತಂಡದವರು ಬನ್ನೇರುಘಟ್ಟ ಮೃಗಾಲಯದಲ್ಲಿ ಇಂಡಿಯನ್ ಪ್ಲ್ಯಾಪ್ ಶೆಲ್ ಟರ್ಟಲ್ ಅನ್ನು ದತ್ತು ತೆಗೆದುಕೊಂಡಿದ್ದೇವೆ’ ಎಂದಿದೆ.