Advertisement

ಕೃಷ್ಣ ಮಠದ ರಾಜಾಂಗಣದಲ್ಲಿ 108 ವೀಣೆಗಳ ಝೇಂಕಾರ

11:55 PM Aug 05, 2019 | sudhir |

ಉಡುಪಿ: ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮಣಿಪಾಲದ ಪಳ್ಳತ್ತಡ್ಕ ಕೇಶವ ಭಟ್ ಮೆಮೋರಿಯಲ್ ಟ್ರಸ್ಟ್‌ ರವಿವಾರ ರಾತ್ರಿ ಆಯೋಜಿಸಿದ 108 ವೀಣಾ ಕಲಾವಿದರ ‘ವೀಣಾ ವಂದನ’ ಕಾರ್ಯಕ್ರಮವನ್ನು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದರು ಉದ್ಘಾಟಿಸಿದರು.

Advertisement

ಟ್ರಸ್ಟ್‌ ಅಧ್ಯಕ್ಷೆ ದೇವಕಿ ಕೆ. ಭಟ್, ಕಾರ್ಯದರ್ಶಿ ಡಾ| ಅನಸೂಯಾ ದೇವಿ, ಕಾರ್ಯಕ್ರಮದ ಸಂಯೋಜಕಿ ಪವನಕುಮಾರಿ, ಡಾ| ಬಾಲಚಂದ್ರ ಆಚಾರ್ಯ ಉಪಸ್ಥಿತರಿದ್ದರು.

ಶ್ರೀಮಠದ ಶಿವರಾಜ್‌ ಅವರ ಮಂತ್ರಪುಷ್ಪ ಸೂಕ್ತ, ಅಲೆವೂರು ರಾಮ ದಾಸ ಆಚಾರ್ಯರ ಸಾಮವೇದ ಗಾನವನ್ನು ಪವನಕುಮಾರಿ ಮತ್ತು ಅರುಣಕುಮಾರಿಯವರು ವೀಣೆಯಲ್ಲಿ ನುಡಿಸಿದರು.

ಪುತ್ತೂರು, ಕಾಸರಗೋಡು, ಮಂಗಳೂರು, ಕಾರ್ಕಳ, ಚಿಕ್ಕಮಗಳೂರು, ಬೆಂಗಳೂರಿನಿಂದಲ್ಲದೆ ಇಲ್ಲಿ ಕಲಿತು ಲಂಡನ್‌, ಜರ್ಮನಿ, ಬ್ರುನೋಯಿ, ಅಮೆರಿಕಕ್ಕೆ ಹೋಗಿ ನೆಲೆಸಿದ ವೀಣಾಭ್ಯಾಸಿ ಗಳು ವೀಣಾವಾದನವನ್ನು ನಡೆಸಿಕೊಟ್ಟರು. ಪುರಂದರ-ಕನಕರೇ ಮೊದಲಾದ ದಾಸ ವರೇಣ್ಯರ ಹಾಡುಗಳನ್ನು ಸುಮಾರು ಒಂದೂವರೆ ಗಂಟೆ ಕಾಲ ಕಲಾವಿದರು ನುಡಿಸಿದಾಗ ಕಿಕ್ಕಿರಿದ ಜನಸಂದಣಿ ಅಪರೂಪದ ಈ ವೀಣಾ ಮೇಳವನ್ನು ನೋಡಿ ಆನಂದಿಸಿತು. ಹೋದ ವರ್ಷ 90 ವೀಣಾವಾದಕರನ್ನು ಕಲೆ ಹಾಕಿದ ಸಂಘಟಕರು ಈ ಬಾರಿ 108 ಕಲಾವಿದರನ್ನು ಕಲೆ ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next