Advertisement

ಕಡಬ : ಟಯರ್‌ ಸವೆದು ಗ್ಯಾರೇಜ್‌ ಸೇರಿದ ಆ್ಯಂಬುಲೆನ್ಸ್‌

03:55 AM Jun 26, 2018 | Team Udayavani |

ಕಡಬ: ಆರೋಗ್ಯ ಕವಚ 108 ಆ್ಯಂಬುಲೆನ್ಸ್‌ ವ್ಯವಸ್ಥೆ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ವೈದ್ಯಕೀಯ ಸೇವೆ ಒದಗಿಸಲು ಮಾಡಿರುವ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ. ಆದರೆ ಕಡಬದಲ್ಲಿ ಕಾರ್ಯಾಚರಿಸುತ್ತಿರುವ 108 ಆ್ಯಂಬುಲೆನ್ಸ್‌ ಕಳೆದೊಂದು ವಾರದಿಂದ ನಾಪತ್ತೆಯಾಗಿರುವುದು ರೋಗಿಗಳಿಗೆ ತೀವ್ರ ಸಮಸ್ಯೆ ತಂದೊಡ್ಡಿದೆ.

Advertisement

ಟಯರ್‌ ಸವೆದು ಸೇವೆ ಸ್ಥಗಿತ
ಆ್ಯಂಬುಲೆನ್ಸ್‌ ವಾಹನದ ಟಯರ್‌ ಪೂರ್ತಿ ಸವೆದಿರುವುದರಿಂದ ಸೇವೆಯನ್ನು ಸ್ಥಗಿತಗೊಳಿಸಲಾಗಿದ್ದು, ವಾಹನವನ್ನು ಗ್ಯಾರೇಜ್‌ ನಲ್ಲಿ ಇರಿಸಲಾಗಿದೆ ಎಂದು ಆ್ಯಂಬುಲೆನ್ಸ್‌ ನಿರ್ವಹಣೆ ಮಾಡುತ್ತಿರುವ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ತಾಲೂಕು ಕೇಂದ್ರವಾಗಿ ಗುರುತಿಸಿ ಕೊಂಡ ಕಡಬದಲ್ಲಿ ಸ್ಥಳೀಯವಾಗಿ ಆ್ಯಂಬುಲೆನ್ಸ್‌ ಇಲ್ಲದೆ ರೋಗಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರೆ ತುರ್ತು ಸಂದರ್ಭಗಳಲ್ಲಿ ಸುಬ್ರಹ್ಮಣ್ಯ ಅಥವಾ ಆಲಂಕಾರಿನ ವಾಹನವನ್ನು ಕಳುಹಿಸಿಕೊಡುತ್ತೇವೆ ಎನ್ನುವ ಉತ್ತರ ಸಿಗುತ್ತಿದೆ.

ಕೆಲ ದಿನಗಳಿಂದ ಅಪಘಾತ ಇತ್ಯಾದಿ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳು ಹಾಗೂ ರೋಗಿಗಳು ಆ್ಯಂಬುಲೆನ್ಸ್‌ ಇಲ್ಲದೇ ಸಾಕಷ್ಟು ತೊಂದರೆ ಎದುರಿಸುವಂತಾಗಿತ್ತು. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಿ ಕೂಡಲೇ ಸ್ಥಗಿತಗೊಂಡಿರುವ ಕಡಬದ 108 ಆ್ಯಂಬುಲೆನ್ಸ್‌ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.


ಬೇಡಿಕೆ ಸಲ್ಲಿಸಿದ್ದೇವೆ

ವಾಹನದ ಟಯರ್‌ ಗಳು ಸಂಪೂರ್ಣವಾಗಿ ಸವೆದಿರುವುದರಿಂದ ಸದ್ರಿ ವಾಹನವನ್ನು ಸೇವೆಯಿಂದ ಹೊರಗಿಡಲಾಗಿದೆ. ತುರ್ತು ಕರೆಗಳು ಬಂದಾಗ ಹತ್ತಿರದ ಆಲಂಕಾರು ಹಾಗೂ ಸುಬ್ರಹ್ಮಣ್ಯದ ವಾಹನಗಳನ್ನು ಸೇವೆಗೆ ಒದಗಿಸಲಾಗುತ್ತಿದೆ. ಹೊಸ ಟಯರ್‌ ಗಳಿಗೆ ಬೇಡಿಕೆ (ಇಂಡೆಂಟ್‌) ಸಲ್ಲಿಸಲಾಗಿದ್ದು, ಮೂರ್‍ನಾಲ್ಕು ದಿನಗಳೊಳಗೆ ಸಮಸ್ಯೆ ಬಗೆಹರಿಯಲಿದೆ.
– ಮಹಾಬಲ, ಆ್ಯಂಬುಲೆನ್ಸ್‌ ನಿರ್ವಹಣ ಸಂಸ್ಥೆಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next