Advertisement
ಈ ನಡುವೆ ಜಿವಿಕೆ- ಇಎಂಆರ್‌ಐ ಸಂಸ್ಥೆಯೊಂದಿಗಿನ ಗುತ್ತಿಗೆ ಒಡಂಬಡಿಕೆ ರದ್ದತಿಗೆ ಸರ್ಕಾರ ನೀಡಿದ್ದ ಮೂರು ತಿಂಗಳ ನೋಟಿಸ್ ಅವಧಿ ಶುಕ್ರವಾರಕ್ಕೆ (ಅ.13) ಅಂತ್ಯವಾಗಿದೆ. ಆದರೆ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣವಾಗದ ಹಿನ್ನೆಲೆಯಲ್ಲಿ ಇನ್ನೂ ಎರಡು ವಾರ ಸೇವೆ ಮುಂದುವರಿಸುವಂತೆ ಜಿವಿಕೆ- ಇಎಂಆರ್‌ಐ ಸಂಸ್ಥೆಯನ್ನು ಆರೋಗ್ಯ ಇಲಾಖೆ ಕೋರಿದ್ದು, ಒಂದು ತಿಂಗಳ ಕಾಲ ಸೇವೆ ಮುಂದುವರಿಕೆಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.
Related Articles
Advertisement
ಅಂತಿಮ ಹಂತದಲ್ಲಿ ಟೆಂಡರ್ ಪ್ರಕ್ರಿಯೆಜಿವಿಕೆ- ಇಎಂಆರ್‌ಐ ಸಂಸ್ಥೆ ಸೇರಿದಂತೆ ಬಿವಿಜಿ ಸಂಸ್ಥೆ ಹಾಗೂ ಕ್ವೆಸ್ಟ್ ಕಾರ್ಪೋರೇಷನ್ ಸಂಸ್ಥೆಗಳು ಟೆಂಡರ್‌ನಲ್ಲಿ ಬಿಡ್ ಮಾಡಿದ್ದು, ತೀವ್ರ ಪೈಪೋಟಿ ಏರ್ಪಟ್ಟಿದೆ. ಅದರಂತೆ ತಾಂತ್ರಿಕ ಬಿಡ್ ತೆರೆಯಲಾಗಿದ್ದು, ಪರಿಶೀಲನೆ ಕಾರ್ಯ ಬಹು ತೇಕ ಪೂರ್ಣಗೊಂಡಿದೆ. ಇ-ಆಡಳಿತ ಇಲಾಖೆ ಯಿಂದ ತಾಂತ್ರಿಕ ಮೌಲ್ಯಮಾಪನ ವರದಿ ಸಲ್ಲಿಕೆ ಯಾಗುತ್ತಿದ್ದಂತೆ ಆರ್ಥಿಕ ಬಿಡ್ ತೆರೆದು ಪರಿಶೀಲಿಸಿ ಟೆಂಡರ್ ಹಂಚಿಕೆ ಮಾಡಲು ಸಿದ್ಧತೆ ನಡೆದಿದೆ. ಸೇವೆ ವಿಸ್ತರಣೆ ಕೋರಿ ಪತ್ರ
ಗುತ್ತಿಗೆ ರದ್ದುಪಡಿಸಿದ ಆರೋಗ್ಯ ಇಲಾಖೆಯು ಮೂರು ತಿಂಗಳ ಅವಧಿಗೆ ನೋಟಿಸ್ ನೀಡಿತ್ತು. ಈ ಅವಧಿಯೊಳಗೆ ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಸಿದ್ಧತೆ ನಡೆಸಿತ್ತು. ಆದರೆ ಕಾಲಮಿತಿಯೊಳಗೆ ಪೂರ್ಣಗೊಳಿಸಲು ಸಾಧ್ಯ ವಾಗಿಲ್ಲ. ಈ ನಡುವೆ ನೋಟಿಸ್ ಅವಧಿ ಅ.13ಕ್ಕೆ ಪೂರ್ಣಗೊಂಡಿರುವುದರಿಂದ ಕೆಲಕಾಲ ಸೇವೆ ಮುಂದುವರಿಸುವಂತೆ ಇಲಾಖೆಯು ಸಂಸ್ಥೆಗೆ ಮನವಿ ಮಾಡಿದೆ. ಜತೆಗೆ ಒಂದು ತಿಂಗಳ ಅವಧಿಗೆ ಸೇವೆ ವಿಸ್ತರಣೆಗೆ ಅನುಮತಿ ಕೋರಿ ಸರಕಾರಕ್ಕೆ ಪತ್ರ ಬರೆದಿದೆ. 1,538 ಆ್ಯಂಬುಲೆನ್ಸ್ 108- ಆರೋಗ್ಯ ಕವಚ’ ಸೇವೆಯಡಿ ಸದ್ಯ 711 ಆ್ಯಂಬುಲೆನ್ಸ್‌ಗಳಿದ್ದು, ನಿರ್ವಹಣೆಗೆ ವಾರ್ಷಿಕ ಸುಮಾರು 140 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ 711 ಆ್ಯಂಬುಲೆನ್ಸ್ ಗಳ ಜತೆಗೆ ರಾಜ್ಯಾದ್ಯಂತ ಬಳಕೆಯಾಗುತ್ತಿರುವ ರಾಜ್ಯ ಸರಕಾರದ 827 ಆ್ಯಂಬುಲೆನ್ಸ್‌ಗಳನ್ನು ಒಟ್ಟುಗೂಡಿಸಿ ನಿರ್ವಹಣೆಯನ್ನು ಒಂದೇ ಸಂಸ್ಥೆಗೆ ವಹಿಸಲು ಸರಕಾರ ನಿರ್ಧರಿಸಿದೆ. 1,538 ಆ್ಯಂಬುಲೆನ್ಸ್ ಗಳನ್ನು ಐದು ವರ್ಷಗಳ ನಿರ್ವಹಣೆಗಾಗಿ ಟೆಂಡರ್ ಪ್ರಕ್ರಿಯೆ ನಡೆದಿದೆ.