Advertisement

ಕೋವಿಡ್‌ ಗೆದ್ದ 106 ವರ್ಷದ ವೃದ್ಧೆ: ಆಸ್ಪತ್ರೆಯಲ್ಲಿ ಅಭಿನಂದನೆ

12:00 PM Sep 23, 2020 | Nagendra Trasi |

ಮುಂಬೈ: 106 ವರ್ಷದ ವೃದ್ಧೆ ಕೋವಿಡ್‌-19 ವಿರುದ್ಧ ಹೋರಾಡಿ ಭಾನುವಾರ ಆರೋಗ್ಯ ಪೂರ್ಣವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಸ್ಪತ್ರೆಯ
ವೈದ್ಯರು, ನರ್ಸ್‌ಗಳು ಅವರನ್ನು ಅಭಿನಂದನಾ ಪೂರ್ವಕವಾಗಿ ಬೀಳ್ಕೊಟ್ಟಿದ್ದಾರೆ.

Advertisement

ಮಹಾರಾಷ್ಟ್ರದ ಠಾಣೆ ಜಿಲ್ಲೆಯ ವೃದ್ಧ ಮಹಿಳೆಯನ್ನು ಹತ್ತು ದಿನಗಳ ಹಿಂದೆ ಚಿಕಿತ್ಸೆ ನೀಡಲು ಕೆಲವು ಆಸ್ಪತ್ರೆಗಳು ನಿರಾಕರಿಸಿದ್ದು, ಕಲ್ಯಾಣ್‌ ಡೊಂಬಿವಲಿ ಮುನ್ಸಿಪಲ್‌ ಕಾರ್ಪೊರೇಷನ್‌ ಆರೈಕೆ ಕೇಂದ್ರದಲ್ಲಿ ದಾಖಲಿಸಲಾಗಿತ್ತು.

ವೈದ್ಯರು ಅಗತ್ಯ ಚಿಕಿತ್ಸೆ ನೀಡಿ ರಕ್ಷಣೆ ಮಾಡಿದ್ದಾರೆ ಎಂದು ವೃದ್ಧೆಯ ಸೊಸೆ ವೈದ್ಯರಿಗೆ ಧನ್ಯವಾದ ಅರ್ಪಿಸಿದರು. ವೈದ್ಯ ರಾಹುಲ್‌ ಘುಲೆ ಮಾತನಾಡಿ, ವೃದ್ಧೆಯು ಚಿಕಿತ್ಸೆಗೆ ಸ್ಪಂದಿಸಿ ಆರೋಗ್ಯ ಪೂರ್ಣವಾಗಿ ಬಿಡುಗಡೆ ಹೊಂದಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಎಸ್‌ಪಿಬಿ ಆರೋಗ್ಯ ಚೇತರಿಕೆ
ಕೋವಿಡ್ ಸೋಂಕಿಗೆ ತುತ್ತಾಗಿ, ಆ.5ರಿಂದಲೂ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖ್ಯಾತ ಹಿನ್ನೆಲೆ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಪುತ್ರ ಚರಣ್‌ ಬಿಡುಗಡೆ ಮಾಡಿರುವ ವಿಡಿಯೋ ಸಂದೇಶವೊಂದರಲ್ಲಿ ಈ ವಿಷಯ ತಿಳಿಸಿದ್ದಾರೆ.

“ತಂದೆಯವರ ಆರೋಗ್ಯದಲ್ಲಿ ಕೊಂಚ ಸುಧಾರಣೆಯಾಗಿದೆ.  ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಅವರಿಗೆ ಹಾಸಿಗೆಯಿಂದ ಎದ್ದು ಕುಳಿತುಕೊಳ್ಳುವಷ್ಟು ಶಕ್ತಿ ಬಂದಿದ್ದು, ಅಲ್ಪ ಸ್ವಲ್ಪ ಮನೆ ಊಟ ಸೇವಿಸುತ್ತಿದ್ದಾರೆ. ಫಿಸಿಯೋಥೆರಪಿಗೂ ಒಳಗಾಗುತ್ತಿದ್ದಾರೆ.

Advertisement

ಆದರೆ, ಅವರ ಶ್ವಾಸಕೋಶಗಳಿಗೆ ಆಗಿರುವ ಹಾನಿಯಿನ್ನೂ ಸರಿಹೋಗಿಲ್ಲ. ಅದು ನಿಧಾನವಾಗಿ ಸರಿಹೋಗುವ ಆಶಯವಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next