Advertisement

ಚೀನಾ ಆ್ಯಪ್‌ಗಳ 106 ಕೋಟಿ ಆಸ್ತಿ ಜಪ್ತಿ

12:04 PM Mar 30, 2023 | Team Udayavani |

ಬೆಂಗಳೂರು: ಚೀನಾ ಮೂಲದ ಆ್ಯಪ್‌ ಕಂಪನಿಗಳಿಗೆ ಸೇರಿದ 106 ಕೋಟಿ ರೂ. ಮೌಲ್ಯದ ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Advertisement

ಚೀನಾ ಮೂಲದ ಆ್ಯಪ್‌ ಕಂಪನಿ ಮಾಲೀಕರು, ಆ್ಯಪ್‌ಗ್ಳ ನಿರ್ದೇಶಕರನ್ನಾಗಿ ಭಾರತ ಮೂಲದ ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದಾರೆ. ಜತೆಗೆ ಹೆಸರಿನಲ್ಲಿ ಬ್ಯಾಂಕ್‌ ಖಾತೆ ತೆರೆದು, ಕೆವೈಸಿ ಪಡೆದುಕೊಂಡಿದ್ದಾರೆ. ಜತೆಗೆ ಅವರ ಹೆಸರಿನಲ್ಲಿಯೇ ಭಾರತದಲ್ಲಿ ಶಾಖೆಗಳನ್ನು ತೆರೆದು, ಸಾಲ ನೀಡಿ ಇಲ್ಲಿನ ಜನರಿಗೆ ವಂಚಿಸುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಈ ವೇಳೆ ಅಕ್ರಮ ಹಣ ವಹಿವಾಟ ನಡೆಸಿದ ಮಾಹಿತಿ ಸಿಕ್ಕಿತ್ತು. ಹೀಗಾಗಿ ಇಡಿ ಪಿಎಂಎಲ್‌ಎ ಅಡಿ ಪ್ರಕರಣ ದಾಖಲಿಸಿಕೊಂಡು, ರಾಜೋರ್‌ಪೇ, ಕ್ಯಾಷ್‌ ಫ್ರೀ, ಪೇಟಿಯಂ, ಪೇಯು, ಇಜ್ಹಿಬುಸ್‌ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ ವಹಿವಾಟು ನಡೆಸಿರುವುದು ಪತ್ತೆ ಹಚ್ಚಿ 106 ಕೋಟಿ ರೂ. ಮೌಲ್ಯದ ನಗದು ಸೇರಿ ಚರಾಸ್ತಿ ಜಪ್ತಿ ಮಾಡಿದೆ ಎಂದು ಇಡಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next