ಕೊಂಡು ಕನ್ನಡವನ್ನು ಬೆಳೆಸುವ ಹುಮ್ಮಸ್ಸಿರುವ ಕನಡದ ಕಟ್ಟಾಳುಗಳು ಕನ್ನಡವನ್ನು ಉಳಿಸುವ ಪ್ರಯತ್ನದಲ್ಲಿನಿರತವಾಗಿರುವುದು ಶ್ಲಾಘನೀಯವಾಗಿದೆ. ಸಾಹಿತ್ಯ
ವೆಂದರೆ ಕೇವಲ ದೊಡ್ಡ ದೊಡ್ಡ ಶಬ್ದಗಳ
ಆಡಂಬರದ ಬರಹವಾಗೇಉಳಿಯದೆ,ದೊಡ್ಡ ಭಾಷಣ ಬಿಗಿಯುವಲ್ಲಿಗೆ ಸೀಮಿತವಾಗದೆ ಸಮಾಜದ ಹಿತದ ದೃಷ್ಟಿಯಿಂದ ನಿಜಾರ್ಥದಲ್ಲಿಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯ
ದೊಂದಿಗೆ ಇಲ್ಲಿನ ಕನ್ನಡಶಾಲೆಗಳನ್ನು ಉಳಿಸಿ
ಕೊಳ್ಳುವ ಕಾರ್ಯ ಆಗಬೇಕಾಗಿದೆ ಎಂದು ಪುಣೆ ಕನ್ನಡ ಸಂಘದ ಉಪಾಧ್ಯಕ್ಷೆ ಹಾಗೂ ಪುಣೆಯ ಸಾಹಿತಿ ಇಂದಿರಾ ಸಾಲ್ಯಾನ್ ಅಭಿಪ್ರಾಯಪಟ್ಟರು.
Advertisement
ಅವರು ಮೇ 13ರಂದು ಪುಣೆ ಕನ್ನಡ ಸಂಘದ ಡಾ| ಕಲ್ಮಾಡಿ ಶಾಮರಾವ್ ಕನ್ನಡ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಗಡಿನಾಡು ಘಟಕ ಮತ್ತು ಕನ್ನಡ ಸಂಘ ಪುಣೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಪುಣೆಯಲ್ಲಿ ಕನ್ನಡ ಸಂಘದ ಮೂಲಕ ಕನ್ನಡದ ಬಗ್ಗೆ ನಿರಂತರವಾಗಿ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಕನ್ನಡಿಗರೆಲ್ಲರೂ ನಮ್ಮ ಸುಂದರವಾದ ಭಾಷೆ, ಸಂಸ್ಕೃತಿ, ಸಾಹಿತ್ಯದ ಬಗ್ಗೆ ಅಭಿಮಾನವಿರಿಸಿಕೊಂಡು ನಾಡು ನುಡಿಯ ಸೇವೆಗೆ ಬದ್ಧರಾಗಬೇಕಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಸಾಧನೆ ಗಮನಾರ್ಹವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪುಣೆಯ ಗಾಂಧಿ ವಾದಿ ಹಾಗೂ ಹಿರಿಯ ಸಾಹಿತಿ ಕೃಷ್ಣ ಇತ್ನಾಳ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡಪರ ಕಾರ್ಯ ಶ್ಲಾಘನೀಯವಾಗಿದೆ. ಸಾಂಸ್ಕೃತಿಕವಾಗಿ ನಮ್ಮನ್ನು ತೊಡಗಿಸಿಕೊಂಡರೆ ಭಾಷೆ ಹಾಗೂ ಸಾಹಿತ್ಯ ಉಳಿಯುವ ಕಾರ್ಯ ಆಗುವುದರಲ್ಲಿ ಸಂಶಯವಿಲ್ಲ. ಕೇರಳಿಗರು, ಉಡುಪಿ ಹಾಗೂ ದಕ್ಷಿಣ ಕನ್ನಡದ ಜನರು ಹೆಚ್ಚಾಗಿ ಸಾಂಸ್ಕೃತಿಕ ನಿಟ್ಟಿನಲ್ಲಿ ಬೆಳೆಸುತ್ತಾ ಬಂದಿರುವುದು ಉತ್ತಮ ಉದಾಹರಣೆಯಾಗಿದೆ ಎಂದರು. ಡಾ| ಕಲ್ಮಾಡಿ ಶಾಮರಾವ್ ಕನ್ನಡ ಮಾಧ್ಯಮ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಚಂದ್ರಕಾಂತ ಹಾರಕುಡೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದ ಬಗ್ಗೆ ತಿಳಿದು ತುಂಬಾ ಸಂತೋಷವಾಯಿತು. ಹೊರನಾಡಿ ನಲ್ಲಿದ್ದುಕೊಂಡು ಕನ್ನಡದ ಕಾಯಕವನ್ನು ಯಾವುದೇ ರಾಜಕೀಯದ ಸೋಂಕಿಲ್ಲದೆ ನಿತ್ಯ ನಿರಂತರವಾಗಿ ತನ್ನಿಂತಾನೇ ಮಾಡುತ್ತಾ ಭಾಷಿಕ ಮೈತ್ರಿಯನ್ನು ಸಾರುತ್ತಿರುವ ಕಾರ್ಯವನ್ನು ಸಾಹಿತ್ಯಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಡುತ್ತಿರುವುದಕ್ಕೆ ಹೆಮ್ಮೆ
ಪಡಬೇಕಾಗಿದೆ. ಯಾವುದೇ ಕಾರ್ಯ ಮಾಡಲು ಪ್ರಬಲ ಇಚ್ಛಾಶಕ್ತಿ ಅಗತ್ಯ, ಅದಿದ್ದರೆ ಕನ್ನಡದ ಕಾರ್ಯ ನಡೆಯುತ್ತಲೇ ಇರುತ್ತದೆ ಎಂದರು.
Related Articles
¨ªಾರೆ. ಪುಣೆಯ ಕನ್ನಡಿಗರೆಲ್ಲರಿಗೂ ಅವರ ಕಾರ್ಯಕ್ಕೆ ಸಹಕಾರ ನೀಡೋಣ ಎಂದರು.
Advertisement
ಕನ್ನಡ ಸಾಹಿತ್ಯ ಪರಿಷತ್ತು ಮಹಾರಾಷ್ಟ್ರ ಘಟಕ ಇದರ ಅಧ್ಯಕ್ಷರಾದ ಬಸವರಾಜ ಮಸೂತಿಯವರು ಮಾತನಾಡುತ್ತಾ ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆಯನ್ನು ಪುಣ್ಯನಗರಿ ಪುಣೆಯಲ್ಲಿ ಆಚರಿಸಲು ಹೆಮ್ಮೆಯಾಗುತ್ತಿದೆ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿದ್ದುಕೊಂಡು ಕನ್ನಡದ ಪರ ಕಾರ್ಯಕ್ರಮಗಳನ್ನು ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಹಮ್ಮಿಕೊಳ್ಳುತ್ತಾ ಬಂದಿದ್ದೇವೆ. ಅದೇ ರೀತಿ ಮುಂದಿನ ಸಾಹಿತ್ಯ ಸಮ್ಮೇಳನವನ್ನು ಪುಣೆಯಲ್ಲಿ ಹಮ್ಮಿಕೊಳ್ಳಲು ನಾವು ನಿರ್ಧರಿಸಿದ್ದೇವೆ. ಪುಣೆಯ ಕನ್ನಡಿಗರ ಸಂಘ ಸಂಸ್ಥೆಗಳೆಲ್ಲರ ಸಹಕಾರವನ್ನು ಕೋರಿ ಅವರೆಲ್ಲರ ಸಹಕಾರದಿಂದ ಸಮ್ಮೇಳನ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಪುಣೆ ಕನ್ನಡಿಗರೆಲ್ಲರೂ ಸಹಕಾರ ನೀಡುವರೆಂಬ ಭರವಸೆ ಇದೆ. ಈ ನಿಟ್ಟಿನಲ್ಲಿ ಮುಂದಿನ ದಿನ
ಗಳಲ್ಲಿ ಕಾರ್ಯಪ್ರವೃತ್ತರಾಗಲಿದ್ದೇವೆ ಎಂದರು.
ಪುಣೆ ಬಾಲಭಾರತಿಯ ಸಹಾಯಕ ವಿಶೇಷಾಧಿಕಾರಿ ಆರ್. ಎಂ. ಗಣಾಚಾರಿ, ಪುಣೆ ಕನ್ನಡ ಸಂಘದ ಜನಸಂಪರ್ಕಾಧಿಕಾರಿ ರಾಮದಾಸ ಆಚಾರ್ಯ ಉಪಸ್ಥಿತರಿದ್ದರು. ಗೌರವ ಕೋಶಾಧಿಕಾರಿಗಳಾದ ಶಿವಚಲ ಕುಮಾರ ಸಾಲಿಮಠ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿಗಳಾದ ಸುನೀಲ್ ಗಿರಿಮಲ್ಲಪ್ಪ ಭರಮಾ ವಂದನಾರ್ಪಣೆಗೈದರು. ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಮಲ್ಲಿನಾಥ ವಚ್ಚೆ, ಮಲ್ಲಿಕಾರ್ಜುನ, ಪ್ರಕಾಶ ಪ್ರಧಾನ, ಮಾಲಕಣ್ಣ ಘವಾರಿ, ಮಹಾಂತೇಶ, ಅಪ್ಪಾರಾಮ ಉಪಸ್ಥಿತರಿದ್ದರು.