Advertisement

4ನೇ ತರಗತಿ ಪರೀಕ್ಷೆಗೆ ಹಾಜರಾಗಿ ಇತಿಹಾಸ ಬರೆದ 105 ವರ್ಷದ ಹಿರಿಯ ಅಜ್ಜಿ!

10:08 AM Nov 21, 2019 | Nagendra Trasi |

ಕೊಲ್ಲಂ: ಕೇರಳದ ಈ ನೂರಾ ಐದು ವರ್ಷದ ಹಣ್ಣು, ಹಣ್ಣು ಮುದುಕಿ ರಾಜ್ಯದ ಅತ್ಯಂತ ಹಿರಿಯ ಕಲಿಕಾ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವುದಾಗಿ ಎನ್ ಎನ್ ಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

Advertisement

ಬಾಗೀರಥಿ ಅಮ್ಮ(105ವರ್ಷ) ಇವರಿಗೆ ಆರು ಮಂದಿ ಮಕ್ಕಳು, 16 ಮೊಮ್ಮಕ್ಕಳಿದ್ದಾರೆ. ಇದೀಗ ನಾಲ್ಕನೇ ತರಗತಿ ಪರೀಕ್ಷೆಗೆ ಹಾಜರಾಗುವ ಮೂಲಕ ಇತಿಹಾಸ ಬರೆದಿದ್ದಾರೆ. ತಮ್ಮ 9ನೇ ವಯಸ್ಸಿನಲ್ಲಿಯೇ ಬಾಗೀರಥಿ ಅವರು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದರು. ಅದಕ್ಕೆ ಕಾರಣ ತನ್ನ ಕಿರಿಯ ಸಹೋದರ, ಸಹೋದರಿಯರನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ.

ತಾನು ಕಲಿಯಬೇಕೆಂಬ ಭಾಗೀರಥಿ ಅಜ್ಜಿಯ ಕನಸಿನ ರೆಕ್ಕೆ ಗರಿಬಿಚ್ಚಲು ಕಾರಣವಾಗಿದ್ದು, ಕೇರಳ ರಾಜ್ಯ ಶಿಕ್ಷಣ ಯೋಜನೆಯ ಅಧಿಕಾರಿಗಳ ಭೇಟಿಯಿಂದ. ರಾಜ್ಯದಲ್ಲಿ ಅಕ್ಷರ ಜ್ಞಾನ ಕೌಶಲ್ಯ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಈ ಸಂಸ್ಥೆ ಕೇರಳ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಯಾರಿಗೆ ಬರೆಯಲು, ಓದಲು ಬರುವುದಿಲ್ಲ ಅಥವಾ ಕಡಿಮೆ ಶಿಕ್ಷಣ ಪಡೆದವರು, ಶಾಲೆಯಿಂದ ಹೊರಬಿದ್ದವರು ಹೀಗೆ ಶಿಕ್ಷಣ ಕಲಿಯಬೇಕೆಂಬ ಹಂಬಲ ಇದ್ದವರು ಕೇರಳ ರಾಜ್ಯ ಶಿಕ್ಷಣ ಯೋಜನೆ ಕಾರ್ಯಕ್ರಮದಿಂದ ನೆರವು ಪಡೆಯಬಹುದಾಗಿತ್ತು. ಈ ಯೋಜನೆಯಡಿ ಕಳೆದ ವರ್ಷ 96 ವರ್ಷದ ಅಜ್ಜಿಯೊಬ್ಬರು ಚಿತ್ರಕಲೆ ಪರೀಕ್ಷೆ ಬರೆದು ಶೇ.98ರಷ್ಟು ಅಂಕ ಪಡೆದಿದ್ದರು. ಈಕೆಯೇ ಅತ್ಯಂತ ಹಿರಿಯ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಭಾಗೀರಥಿ ಅಮ್ಮ ಹೊಸ ಇತಿಹಾಸ ಬರೆದಂತಾಗಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next