ಬೆಂಗಳೂರು: ರಾಜ್ಯದಲ್ಲಿ ಕೋವಿಡ್ -19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ 105 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದ ಒಟ್ಟಯ ಸೋಂಕಿತರ ಸಂಖ್ಯೆ 1710 ಕ್ಕೇರಿದೆ.
ಇದರಲ್ಲಿ ಬಹುಪಾಲು ಚಿಕ್ಕಬಳ್ಳಾಪುರದಲ್ಲಿ ವರದಿಯಾಗಿದೆ. ಈ ಜಿಲ್ಲೆಯೊಂದರಲ್ಲೇ 45 ಕೋವಿಡ್-19 ಸೋಂಕು ಪ್ರಕರಣ ದೃಢವಾಗಿದೆ.
ಉಳಿದಂತೆ ಹಾಸನದಲ್ಲಿ 14 ಸೋಂಕು ಪ್ರಕರಣ ದೃಢವಾಗಿದೆ. ತುಮಕೂರಿನಲ್ಲಿ ಎಂಟು, ಬೀದರ್ ನಲ್ಲಿ ಆರು, ಬೆಂಗಳೂರು ನಗರದಲ್ಲಿ ಐದು, ಚಿಕ್ಕಮಗಳೂರಿನಲ್ಲಿ ಐದು, ಬೆಂಗಳೂರು ಗ್ರಾಮಾಂತರದಲ್ಲಿ ನಾಲ್ಕು, ಮಂಡ್ಯ ಮತ್ತು ಹಾವೇರಿಯಲ್ಲಿ ತಲಾ ಮೂರು ಸೋಂಕು ಪ್ರಕರಣಗಳು ವರದಿಯಾಗಿದೆ.
ಬೀದರ್, ಧಾರವಾಡದಲ್ಲಿ ತಲಾ ಎರಡು ಸೋಂಕು ಪ್ರಕರಣ ವರದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಒಂದು ಪ್ರಕರಣ ದೃಢವಾಗಿದೆ.
ಇಂದಿನ 104 ಪ್ರಕರಣಗಳ ಪೈಕಿ 84 ಜನರು ಮಹಾರಾಷ್ಟ್ರದಿಂದ ಬಂದವರೇ ಆಗಿರುವುದು ಆಘಾತಕಾರಿಯಾಗಿದೆ.
ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1710ಕ್ಕೆ ಏರಿಕೆಯಾಗಿದೆ. ಇದರಲ್ಲಿ 588 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 41 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಓರ್ವ ಸೋಂಕಿತ ಕೋವಿಡ್ ಅಲ್ಲದ ಕಾರಣದಿಂದ ಮರಣ ಹೊಂದಿದ್ದಾನೆ.