Advertisement
1914 ಶಾಲೆ ಸ್ಥಾಪನೆ ಏಕೋಪಾಧ್ಯಾಯ ಶಾಲೆಯಾಗಿ ಆರಂಭ
ಏಕೋಪಾಧ್ಯಾಯ ಶಾಲೆಯಾಗಿದ್ದ ಕಳತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಮುಂದೆ ನಾಲ್ಕು ಮಂದಿ ಶಿಕ್ಷಕರು ಮತ್ತು 100 ರಷ್ಟು ವಿದ್ಯಾರ್ಥಿಗಳೊಂದಿಗೆ ಬೆಳೆಯುತ್ತಾ ಬಂದಿದೆ. ಮುಂದೆ ದಿ| ವಿಠ್ಠಪ್ಪ ಪೈ ಅವರು 23 ಸೆಂಟ್ಸ್ ಸ್ಥಳವನ್ನು ಶಾಲೆಗೆ ದಾನವಾಗಿ ನೀಡಿ ಶಾಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದರು. 1967ರ ಅವಧಿಯಲ್ಲಿ ಉಡುಪಿ ತಾಲೂಕು ಬೋರ್ಡಿಗೆ ಇನ್ನೊಂದು ಕಟ್ಟಡವನ್ನು ಕಟ್ಟಿಸಲು ಅರ್ಜಿ ಕಳುಹಿಸಿ ಹೆಚ್ಚುವರಿ ಕಟ್ಟಡವನ್ನು ನಿರ್ಮಿಸಿಕೊಳ್ಳಲಾಯಿತು.
Related Articles
Advertisement
ಮುಖ್ಯೋಪಾಧ್ಯಾಯರು ಏಕೋಪಾಧ್ಯಾಯರ ಶಾಲೆ ಎಂಬ ಹೆಸರಿನೊಂದಿಗೆ ಪ್ರಾರಂಭಗೊಂಡಿದ್ದ ಶಾಲೆಯಲ್ಲಿ ಇಂದು ವಿದ್ಯಾರ್ಥಿಗಳ ಸಂಖ್ಯೆ 14ಕ್ಕೆ ಕುಸಿದಿದ್ದು, ಮತ್ತೆ ಏಕೋಪಾಧ್ಯಾಯಿನಿ ಶಾಲೆ ಎಂಬ ಹಣೆಪಟ್ಟಿ ಹೊತ್ತುಕೊಂಡು ಮುಚ್ಚುವ ಭೀತಿ ಎದುರಿಸುತ್ತಿದೆ. ಶಾಲೆಯಲ್ಲಿ ಸೇವೆ ಸಲ್ಲಿಸಿರುವ ದಿ| ಕೆ.ವಿ. ಕೃಷ್ಣಯ್ಯ ಕಳತ್ತೂರು, ದಿ| ಕೃಷ್ಣ ಶೆಟ್ಟಿ ಕೊಲ್ಲಬೆಟ್ಟು, ದಿ| ರಾಮಕೃಷ್ಣ ಆಚಾರ್ಯ ಕಳತ್ತೂರು, ಸಂಜೀವಿ ಭಂಡಾರ್ತಿ (ಪ್ರಭಾರ) ಕಳತ್ತೂರು, ದಿ| ಜೆರೊಂ ನೊರೊನ್ಹ ಬಂಟಕಲ್ಲು, ಕೆ. ಶ್ರೀಕರಯ್ಯ ಕಳತ್ತೂರು, ಶ್ರೀಧರ ಭಟ್ ಕಾಪು, ಮೋಹಿನಿ ಕೆ. ಮೂಳೂರು.
ಹೆಮ್ಮೆಯ ಹಳೆ ವಿದ್ಯಾರ್ಥಿಗಳುಅನಿವಾಸಿ ಭಾರತೀಯ ಉದ್ಯಮಿ ಕಳತ್ತೂರು ಶೇಖರ ಬಿ. ಶೆಟ್ಟಿ, ಖ್ಯಾತ ನ್ಯಾಯವಾದಿ ಉಮೇಶ್ ಶೆಟ್ಟಿ ಕಳತ್ತೂರು, ಕಳತ್ತೂರು ದೇಗುಲದ ಆಡಳಿತ ಮೊಕ್ತೇಸರ ರಂಗನಾಥ್ ಭಟ್, ಪ್ರಸಿದ್ಧ ವೈದ್ಯರಾದ ಡಾ| ರಾಜಗೋಪಾಲ ಭಂಡಾರಿ ಕಳತ್ತೂರು, ಡಾ| ಗುರುರಾಜ್ ಆಚಾರ್, ಕರುಣಾಕರ ತಂತ್ರಿ, ಉದಯ ತಂತ್ರಿ, ರಾಘವೇಂದ್ರ ಭಟ್, ಕೆ. ಶ್ರೀಕರಯ್ಯ, ಪರಿಮಳಾ ಟೀಚರ್, ಗ್ರಾ.ಪಂ. ಸದಸ್ಯ ಅಶೋಕ್ ರಾವ್, ಉದ್ಯಮಿ ರಂಗನಾಥ ಶೆಟ್ಟಿ ಮೊದಲಾದವರು ಸಂಸ್ಥೆಯ ಹೆಮ್ಮೆಯ ಹಳೆ ವಿದ್ಯಾರ್ಥಿಗಳು. ಶಾಲೆಯಲ್ಲಿ ಮಕ್ಕಳ ಸಂಖ್ಯೆಯ ಕೊರತೆಯಿದೆ. ಶಾಲೆಯ ಬೆಳವಣಿಗೆಗೆ ದಾನಿಗಳು ಮತ್ತು ಹಳೆ ವಿದ್ಯಾರ್ಥಿಗಳು ನಿರಂತರವಾಗಿ ಕೊಡುಗೆ ಗಳನ್ನು ನೀಡುತ್ತಾ ಬರುತ್ತಿದ್ದಾರೆ. ಶಾಲೆ ಉಳಿವಿಗಾಗಿ ಇನ್ನಷ್ಟು ಪ್ರಯತ್ನ ಅಗತ್ಯ
-ಉಷಾ, ಮುಖ್ಯೋಪಾಧ್ಯಾಯಿನಿ, ಕಳತ್ತೂರು ಶಾಲೆ ನಮ್ಮ ತಂದೆಯವರ ಕಾಲದ ಶಾಲೆ ಇದಾಗಿದೆ. ಗ್ರಾಮೀಣ ಜನರ ಆಂಗ್ಲ ಮಾಧ್ಯಮ ಶಿಕ್ಷಣದ ವ್ಯಾಮೋಹದಿಂದಾಗಿ ಶಾಲೆಯು ಮುಚ್ಚುವ ಹಂತಕ್ಕೆ ಬಂದಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಊರವರು, ಹಳೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರಯತ್ನಶೀಲರಾಗುವ ಅಗತ್ಯವಿದೆ.
-ಕೆ. ಶ್ರೀಕರಯ್ಯ ಕಳತ್ತೂರು, ಹಳೆ ವಿದ್ಯಾರ್ಥಿ - ರಾಕೇಶ್ ಕುಂಜೂರು