Advertisement
ಹನಗೋಡು ಗ್ರಾಮದ ಸಂತೆಮಾಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಂಚಣಿ ಆದೇಶ ಪತ್ರ ವಿತರಿಸಿ ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್, ಸರಕಾರದ ವಿವಿಧ ಯೋಜನೆಗಳನ್ನು ಪಡೆದುಕೊಳ್ಳಲು ತಾಲೂಕು ಕೇಂದ್ರಕ್ಕೆ ನಿತ್ಯ ಅಲೆದಾಡುವುದು ವಿಷಾದನೀಯ. ಹಲವಾರು ಮಂದಿ ಪಿಂಚಣಿ ಸೌಲಭ್ಯ ಜೊತೆಗೆ ಹೆಚ್ಚುವರಿಯಾಗಿರುವ ಮಾಸಾಶನ ಹಣ ಪಡೆಯುವುದು ಕಷ್ಟಸಾಧ್ಯವಾಗಿದೆ.
Related Articles
Advertisement
ತಹಶೀಲ್ದಾರ್ ಬಸವರಾಜ್ ಮಾತನಾಡಿ, ಮನೆ ಬಾಗಿಲಿಗೆ ಆಡಳಿತ ಹಾಗೂ ಕಂದಾಯ ಅದಾಲತ್ ಮೂಲಕ ಹಿರಿಯ ನಾಗರಿಕರಿಗೆ, ಮಹಿಳೆಯರಿಗೆ, ರೈತರ ಸಮಸ್ಯೆಗಳಿಗೆ ಸ್ಪಂದಿಸಲಾಗುತ್ತಿದೆ. ಒಂದೇ ದಿನದಲ್ಲಿ ನೂರಾರು ಮಂದಿಗೆ ಸ್ಥಳದಲ್ಲೇ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕೆ ಸ್ಪಂದಿಸಿರುವ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಗಿರೀಶ್, ತಾಪಂ ಸದಸ್ಯೆ ಲಕ್ಷ್ಮಮ್ಮ, ಗ್ರಾಪಂ ಸದಸ್ಯರಾದ ಕುಮಾರ್, ರಜಿಯಾಬಾನು, ಅಶ್ರಕ್, ಬಸವರಾಜು, ಮುಖಂಡರಾದ ಎಚ್.ಎಸ್.ವೆಂಕಟಪ್ಪ, ಮುಕುಂದ, ಪಿಡಿಒ ನಾಗೇಂದ್ರಕುಮಾರ್, ಉಪ ತಹಶೀಲ್ದಾರ್ ಗುರುಸಿದ್ದಯ್ಯ, ಕಂದಾಯ ಅಧಿಕಾರಿ ರಾಜಕುಮಾರ್, ಗ್ರಾಮಲೆಕ್ಕಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅದಾಲತ್‌ನಲ್ಲಿ ಸ್ಥಳದಲ್ಲೇ ಪರಿಹಾರ: ಅದಾಲತ್‌ನಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ-222, ಆಯುಷ್ಮಾನ್ ಕಾರ್ಡ್-136, ಕಂದಾಯ ಇಲಾಖೆ ಅರ್ಜಿ-128, ಪಡಿತರ ಕಾರ್ಡ್ ತಿದ್ದುಪಡಿ-ಸೇರ್ಪಡೆ, ಹೆಸರು ತೆಗೆಯುವಿಕೆ ಸೇರಿದಂತೆ 135, ವಿವಿಧ ಪಿಂಚಣಿ ಆದೇಶ-61, ಹೊಸ ಪಿಂಚಣಿಗೆ ಅರ್ಜಿ-21 ಹಾಗೂ 360ಕ್ಕೂ ಹೆಚ್ಚು ಮಂದಿ ಭೂಮಿ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಇತ್ಯರ್ಪಪಡಿಸಲಾಯಿತು.
ಭಾನುವಾರ ನಿಧನರಾದ ಕಡೇಮನುಗನಹಳ್ಳಿಯ ರಾಜಣ್ಣರ ಕುಟುಂಬದವರಿಗೆ ಈ ಕಂದಾಯಅದಾಲತ್‌ನಲ್ಲೇ ಸ್ಥಳದಲ್ಲೇ ಮರಣ ದೃಢೀಕರಣ ಪತ್ರ ವಿತರಿಸಲಾಯಿತು. ಅದೇ ರೀತಿ ಸ್ಥಳದಲ್ಲೇ ಅರ್ಜಿ ಹಾಕಿದ 26 ಮಂದಿ ಪೈಕಿ 19 ಮಂದಿ ಫಲಾನುಭವಿಗಳಿಗೂ ಸಹ ವಿವಿಧ ಪಿಂಚಣಿ ಆದೇಶಪತ್ರ ವಿತರಿಸಲಾಯಿತು.