Advertisement

ಜಿಲ್ಲೆಯಲ್ಲಿ 1042 ಜನನ-ಮರಣ ನೋಂದಣಿ ಘಟಕ: ರಾಜೇಶ್ವರಿ

09:14 PM Nov 13, 2020 | Suhan S |

ದಾವಣಗೆರೆ: ಜನನ-ಮರಣ ನೋಂದಣಿ ಅತ್ಯಂತ ಮಹತ್ವದ ಕಾರ್ಯಕ್ರಮವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 928 ಜನನ-ಮರಣ ನೋಂದಣಿ ಘಟಕಗಳು ಹಾಗೂ 114 ಉಪನೋಂದಣಿ ಘಟಕಗಳು ಸೇರಿದಂತೆ ಒಟ್ಟು 1042 ಜನನ-ಮರಣ ನೋಂದಣಿ ಘಟಕಗಳಿವೆ ಎಂದು ಅಪರ ಜಿಲ್ಲಾ ಜನನ-ಮರಣ ನೋಂದಣಾ ಧಿಕಾರಿ ವೈ.ಎಂ. ರಾಜೇಶ್ವರಿ ತಿಳಿಸಿದರು.

Advertisement

ಜನನ-ಮರಣ ನೋಂದಣಿ ನಿಯಮಗಳು ಹಾಗೂ ಇ-ಜನ್ಮ ತಂತ್ರಾಂಶ ನಿರ್ವಹಣೆ ಕುರಿತು ಜಿಲ್ಲಾಡಳಿತ ಭವನದಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಜನನ-ಮರಣ ಘಟನೆಗಳು ಇ-ಜನ್ಮ ತಂತ್ರಾಂಶದಲ್ಲಿ ಯಶಸ್ವಿಯಾಗಿನೋಂದಣಿಯಾಗುತ್ತಿದ್ದು, ಜನರಿಗೆ ಸಕಾಲದಲ್ಲಿಪ್ರಮಾಣಪತ್ರಗಳು ದೊರೆಯುತ್ತಿರುವುದು ತಂತ್ರಾಂಶದ ವಿಶೇಷತೆ ಎಂದರು.

ಇ-ಜನ್ಮ ನೋಂದಣಿ ಕಾರ್ಯದಿಂದ ದೇಶದ ಜನಸಂಖ್ಯೆ ಜಿಲ್ಲಾವಾರು ಜನನ ಪ್ರಮಾಣವನ್ನುಅಂದಾಜಿಸಲು, ನವಜಾತ ಶಿಶು ಹಾಗೂ ತಾಯಿಯ ಯೋಗಕ್ಷೇಮ, ರೋಗ ನಿರೋಧಕ ಚುಚ್ಚುಮದ್ದು ಕಾರ್ಯಕ್ರಮಗಳಿಗೆ, ವಿವಾಹವಯಸ್ಸಿನ ಅಧ್ಯಯನ, ಲಿಂಗಾನುಪಾತಅಂದಾಜಿಸಲು ಹಾಗೂ ಇನ್ನಿತರೇ ಜನಗಣತಿಯಪ್ರಮುಖ ಅಂಕಿ ಅಂಶಗಳನ್ನು ಪಡೆಯಲು ಹಾಗೂ ಯೋಜನೆಗಳನ್ನು ರೂಪಿಸಲು ನೋಂದಣಿ ಕಾರ್ಯ ಅವಶ್ಯಕವಾಗಿದೆ ಎಂದು ಹೇಳಿದರು. ಆರೋಗ್ಯಸಂಸ್ಥೆಗಳಲ್ಲಿನ ಜನನ-ಮರಣ ಘಟನೆಗಳನ್ನು ಕಡ್ಡಾಯವಾಗಿ 21 ದಿನಗಳೊಳಗಾಗಿ ನೋಂದಣಿಮಾಡಬೇಕು. ಕಾನೂನು ಭಾಗದ ದಾಖಲೆಗಳನ್ನುಆಸ್ಪತ್ರೆಯಲ್ಲಿ ಇಟ್ಟುಕೊಳ್ಳದೆ ಸಂರಕ್ಷಣಾ ಧಿಕಾರಿಗಳಿಗೆ ಸಲ್ಲಿಸಬೇಕು ಮತ್ತು ಮರಣ ಕಾರಣ ಪ್ರಮಾಣಪತ್ರಗಳನ್ನು ಆಯಾ ಮಾಹೆಯ ನಂತರ ನೇರವಾಗಿ ಮುಖ್ಯ ಜನನ-ಮರಣ ನೋಂದಣಾ ಧಿಕಾರಿಗಳಿಗೆ ಸಲ್ಲಿಸುವಂತೆ ತಿಳಿಸಿದರು.

ಸಹಾಯಕ ಸಾಂಖೀಕ ಅಧಿಕಾರಿ ವಿಜಯ್‌ ಬಡಿಗೇರ್‌ ಮಾತನಾಡಿ, ಜನನ-ಮರಣ ನೋಂದಣಿ, ನಿಯಮಗಳು ಹಾಗೂ ಇ-ಜನ್ಮ ತಂತ್ರಾಂಶ ನಿರ್ವಹಣೆ ಮಾಡಬೇಕು ಎಂದರು. ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ಮಹಾನಗರಪಾಲಿಕೆ ಆಯುಕ್ತವಿಶ್ವನಾಥ್‌ ಪಿ. ಮುದಜ್ಜಿ, ಮಹಾನಗರಪಾಲಿಕೆಯಜನನ-ಮರಣ ನೋಂದಣಾ ಧಿಕಾರಿ ಕೆ.ಎಲ್‌. ಧರಣೇಶ್‌ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next